ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕೂಡಲಸಂಗಮದ ಪಂಚಮಸಾಲಿ ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿಗಳ ನೇತೃತ್ವದಲ್ಲಿ ನಡೆಯುತ್ತಿದ್ದ ಮೀಸಲಾತಿ ಹೋರಾಟವನ್ನು ಹತ್ತಿಕ್ಕಲು ರಾಜ್ಯ ಕಾಂಗ್ರೆಸ್ ಸರ್ಕಾರ ಬಲಪ್ರಯೋಗ ಮಾಡಿದ್ದಲ್ಲದೆ, ಪೂಜ್ಯ ಸ್ವಾಮೀಜಿಗಳ ಸಹಿತ ಹೋರಾಟಗಾರರ ಮೇಲೆ ಗೋಲಿಬಾರ್‌ನಡೆಸಲು ಸರ್ಕಾರ ಚಿಂತನೆ ನಡೆಸಿರುವ ಬಗ್ಗೆ ಸ್ವತಃ ಸ್ವಾಮೀಜಿಗಳೇ ಹೇಳಿಕೆ ನೀಡಿದ್ದಾರೆ.
ಹಿಂದೂ ಸಂತರೋರ್ವರ ಮೇಲೆ ಗೋಲಿಬಾರ್‌ಮಾಡಲು ಚಿಂತನೆ ನಡೆಸುವಷ್ಟರ ಮಟ್ಟಿಗೆ ಈ ಸಿದ್ದರಾಮಯ್ಯ ಅವರು ಮುಂದುವರೆದಿರುವುದು ಆತಂಕಕಾರಿ. ಈ ಹಿಂದೆ ಒಕ್ಕಲಿಗ ಪೀಠದ ಪೂಜ್ಯರ ಮೇಲೆ ಎಫ್‌ಐಆರ್‌ಹಾಕಿ, ನ್ಯಾಯಾಲಯದ ಕಟಕಟೆಗೆ ಎಳೆದಿದ್ದ ಕಾಂಗ್ರೆಸ್‌ಸರ್ಕಾರ ಈಗ ಪಂಚಮಸಾಲಿ ಪೀಠದ ಸ್ವಾಮೀಜಿಗಳ ಮೇಲೆಯೇ ಗುಂಡು ಹಾರಿಸಲು ತೆರೆಮರೆಯ ಹಿಂದೆ ಕಸರತ್ತು ನಡೆಸಿದೆ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.
ರಾಜ್ಯದಲ್ಲಿ ಸರ್ವಾಧಿಕಾರಿಗಳ ಸರ್ಕಾರವಿದೆಯೋ, ಪ್ರಜಾಪ್ರಭುತ್ವದ ಸರ್ಕಾರವಿದೆಯೋ ಎನ್ನುವುದರ ಬಗ್ಗೆಯೇ ಸಂಶಯ ಕಾಡುತ್ತಿದೆ. ಮಾತುಕತೆಯಲ್ಲಿ ಬಗೆಹರಿಸಬಹುದಾಗಿದ್ದ ವಿಚಾರಗಳಿಗೆ ಲಾಠಿ ಚಾರ್ಜ್, ಗೋಲಿಬಾರ್‌ಎಂದು ಆಕ್ರಮಣಕಾರಿ ಪ್ರವೃತ್ತಿ ತೋರಿಸಿರುವುದು ಕಾಂಗ್ರೆಸ್‌ಸರ್ಕಾರದ ನೈತಿಕ ಅಧಃಪತನಕ್ಕೆ ಸಾಕ್ಷಿಯಾಗಿದೆ.
2016 ರಲ್ಲೂ ಕಾಂಗ್ರೆಸ್‌ಸರ್ಕಾರ ಇದೇ ರೀತಿಯ ಮೃಗೀಯ ವರ್ತನೆ ತೋರಿತ್ತು. ಮಹದಾಯಿ ನ್ಯಾಯಾಧಿಕರಣದ ತೀರ್ಪು ವಿರೋಧಿಸಿ ನಡೆಸಿದ ಪ್ರತಿಭಟನೆಯ ಸಂದರ್ಭದಲ್ಲಿ ಯಮನೂರು ಗ್ರಾಮಸ್ಥರ ಮೇಲೆ ಸರ್ಕಾರ ಅಕ್ಷರಶಃ ತಾಲಿಬಾನ್‌ರೀತಿಯಲ್ಲಿ ವರ್ತಿಸಿತ್ತು. ಈಗ ಪಂಚಮಸಾಲಿ ಮೀಸಲಾತಿ ಹೋರಾಟಗಾರರನ್ನು ಕಾಂಗ್ರೆಸ್‌ಸರ್ಕಾರ ನಿಕೃಷ್ಟವಾಗಿ ನಡೆಸಿಕೊಳ್ಳುತ್ತಿದೆ ಎಂದು ಬಿಜೆಪಿ ಆತಂಕ ವ್ಯಕ್ತಪಡಿಸಿದೆ.