ಜನಮನದಲ್ಲಿ ಕೃಷ್ಣ ಪಥ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಎಸ್ ಎಂ ಕೃಷ್ಣ ಅವರು ಪ್ರಭುತ್ವದ ಜನಪ್ರತಿನಿಧಿಯಾಗಿ  ಹಂತಹಂತವಾಗಿ ಬೆಳೆದುಬಂದಂತಹ  ಸಮರ್ಥ ನಾಯಕರು. ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ನಿನ್ನೆ ಕೃಷ್ಣ ಅವರ ಅಗಲಿಕೆಗೆ ಸಂತಾಪ ಸೂಚಿಸಲಾಯಿತು ನಂತರದಲ್ಲಿ ಉಪಮುಖ್ಯಮಂತ್ರಿಗಳಾದ ಡಿ ಕೆ ಶಿವಕುಮಾರ್ ಅವರು ಸೇರಿದಂತೆ ಇನ್ನು ಕೆಲವು ಸಚಿವರು ಹಾಗೂ ಶಾಸಕರು ಕೃಷ್ಣ ಅವರ ರಾಜಕಾರಣದ ವಿಚಾರಗಳನ್ನು ನೆನೆದು ಸದನಕ್ಕೆ ಸಮರ್ಪಕವಾಗಿ ವಿವರಿಸಿದರು.

ಈ ಎಲ್ಲಾ ವಿಚಾರಗಳ ಅನ್ವಯ ಕೃಷ್ಣ ಅವರ ಹುಟ್ಟಿನಿಂದ ರಾಜಕೀಯ ನಿವೃತ್ತಿಯವರೆಗೆ ಬೆಳೆದುಬಂದಿರುವ ನಡೆಯನ್ನು ನನ್ನ ವಿಚಾರಧಾರೆಯಲ್ಲಿ  ನಾನು ವಿವರಿಸಿರುವೆ. ಕೆಳಗಿನ ವಿವರವನ್ನು ಸಂಪೂರ್ಣ ಗಮನಿಸಿ ಸ್ನೇಹಿತ ಬಂಧುಗಳೆ.

1932ರಲ್ಲಿ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಸೋಮನಹಳ್ಳಿಯಲ್ಲಿ ಒಕ್ಕಲಿಗ ಕುಟುಂಬದಲ್ಲಿ ಎಸ್ ಎಂ ಕೃಷ್ಣ ಅವರ ಜನನ. ಮೈಸೂರು ರಾಮಕೃಷ್ಣ ಆಶ್ರಮದಲ್ಲಿ ಶಿಕ್ಷಣ.

1960 ರಲ್ಲಿ ಅಮೇರಿಕಾದಲ್ಲಿ ಕಾನೂನು ವಿಭಾಗದ ಪದವಿ ಪಡೆದ ಕೃಷ್ಣ ಅವರು ತಮ್ಮ ಪ್ರಾಂತ್ಯದ ಜನತೆಯೊಂದಿಗೆ ಸಾಮಾಜಿಕವಾಗಿರುವ ಮಹತ್ವಾಕಾಂಕ್ಷೆಯಿಂದ ಭಾರತಕ್ಕೆ ಹಿಂದಿರುಗಿದಾರೆ . 1962 ರಲ್ಲಿ ಮದ್ದೂರು ವಿಧಾನಸಭಾ ಕ್ಷೇತ್ರಕ್ಕೆ ಮೊದಲಬಾರಿ ಪಕ್ಷೇತರ ಶಾಸಕರಾಗಿ ಕೃಷ್ಣ ಆಯ್ಕೆಯಾದರು.

1968-70ರ ವರೆಗೆ ಪ್ರಜಾ ಸೋಷಲಿಸ್ಟ್ ಪಕ್ಷದಿಂದ ಮಂಡ್ಯ ಲೋಕಸಭೆಗೆ ‌ಸಂಸದರಾಗಿ ಆಯ್ಕೆಯಾದರು.1972ರಲ್ಲಿ 5 ನೇ ಲೋಕಸಭೆಗೆ ಆಯ್ಕೆಯಾದ ಕೃಷ್ಣ ಅವರು ಇಂದಿರಾಗಾಂಧಿ ಅವರ ಒತ್ತಾಸೆಯಂತೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿ ಕೆಲವೇ ದಿನಗಳಲ್ಲಿ ರಾಜಿನಾಮೆ ನೀಡಿ ರಾಜ್ಯ ರಾಜಕಾರಣಕ್ಕೆ ಮರಳಿದ್ದಾರೆ.

197277ರ ವರೆಗೆ ವಿಧಾನಪರಿಷತ್ ಸದಸ್ಯತ್ವದಲ್ಲಿ ರಾಜ್ಯ ಸರ್ಕಾರದಲ್ಲಿ ವಾಣಿಜ್ಯ ಹಾಗೂ ಕೈಗಾರಿಕೆ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ. 198084ರಲ್ಲಿ  ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದಿಂದ ಮೊದಲ ಬಾರಿ ಆಯ್ಕೆ. ಈ ಅವಧಿಯಲ್ಲಿ ಇಂದಿರಾಗಾಂಧಿ ಅವರ ಸಚಿವ ಸಂಪುಟದಲ್ಲಿ ಕೇಂದ್ರ ಕೈಗಾರಿಕೆಗೆ ರಾಜ್ಯ ಖಾತೆ  ಸಚಿವ ಸ್ಥಾನ.

198992ರ  ಅವಧಿಯಲ್ಲಿ ರಾಜ್ಯಸರ್ಕಾರದ ವಿಧಾನ ಸಭೆಯ ಸ್ಪೀಕರ್.199394 ರಲ್ಲಿ ವೀರಪ್ಪಮೊಯ್ಲಿ ಸಂಪುಟದಲ್ಲಿ ಉಪಮುಖ್ಯಮಂತ್ರಿ. 199699 ರಲ್ಲಿ ರಾಜ್ಯಸಭಾ ಸಂಸದರಾಗಿ ಆಯ್ಕೆ ಎಚ್ ಡಿ ದೇವೇಗೌಡರ ಜನತಾ=ಪಕ್ಷದ ಹೆಚ್ಚುವರಿ ಮತಗಳ ಸಹಾಯ. ಇದೇ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿ ಪಕ್ಷವನ್ನು ಕಟ್ಟಿದರು. 19992004 ರಾಜ್ಯದ 10ನೇ ಮುಖ್ಯಮಂತ್ರಿಯಾಗಿ ಶಾಲಾ ಮಕ್ಕಳಿಗೆ ಬಿಸಿ ಊಟ. ಮಹಿಳೆಯರ ಸಬಲೀಕರಣಕ್ಕೆ ಶ್ರೀ ಶಕ್ತಿ ಸಂಘಗಳ ರಚನೆ.

ರೈತರ ಕುಟುಂಬಗಳ ಆರೋಗ್ಯಕ್ಕೆ ಯಶಸ್ವಿನಿ ಯೋಜನೆ. ಕೃಷಿಕರ ಜಮೀನುಗಳ ದಾಖಲೆಗಳನ್ನು ಡಿಜಿಟಲೀಕರಣ. ರಾಜ್ಯ ಸರ್ಕಾರದ ಆಡಳಿತಕ್ಕೆ ವಿಕಾಸ ಸೌಧ ಹಾಗೂ ಉದ್ಯೋಗ ಸೌಧ ಕಟ್ಟಡಗಳ ನಿರ್ಮಾಣ ಸೇರಿದಂತೆ ಇನ್ನು ಅನೇಕ ಜನಪರವಾದ ಆಡಳಿತ, ಈ ಎಲ್ಲಾ ವಿಚಾರಗಳಲ್ಲಿ ಕೃಷ್ಣ ಅವರ ವ್ಯಕ್ತಿತ್ವದ ಗೌರವ ಜನಮಾನಸದಲ್ಲಿ ಶಾಶ್ವತವಾಗಿ ಉಳಿದಿದದ್ದೆ. 2004=8 ಮಹಾರಾಷ್ಟ್ರದ ರಾಜ್ಯಪಾಲರಾಗಿ ಸೇವೆ. ಇದೇವೇಳೆ ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಕರೆತರಲು  ತಂತ್ರಗಾರಿಕೆ.

200912ರ ಮನಮೋಹನ್ ಸಿಂಗ್ ಅವರ ಕೇಂದ್ರಾಡಳಿತದ್ದ ಸಚಿವ=ಸಂಪುಟದಲ್ಲಿ ವಿದೇಶಾಂಗ ಸಚಿವ ಸ್ಥಾನದಲ್ಲಿ ಉತ್ತಮ ಆಡಳಿತ. 2017ರಲ್ಲಿ  46 ವರ್ಷಗಳ ಕಾಲಗಳ ಕಾಂಗ್ರೆಸ್ ಪಕ್ಷದ ಅವಿನಾಭಾವ ಸಂಬಂಧವನ್ನು ಕಡಿದುಕೊಂಡು ಬಿಜೆಪಿ ಪಕ್ಷಕ್ಕೆ ಸೇರ್ಪಡೆ. 2023 ರಲ್ಲಿ ರಾಜಕೀಯ ನಿವೃತ್ತಿ , ಕೃಷ್ಣ ಅವರ ರಾಜಕೀಯ ಮುನ್ನೋಟದ ಪ್ರಭಾವಕ್ಕೆ  ಕೇಂದ್ರ ಸರ್ಕಾರ ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ.

ಕೃಷ್ಣ ಅವರ  ಈ ಎಲ್ಲಾ ವಿಚಾರಧಾರೆಗಳು ಇತಿಹಾಸದ ಪುಟಗಳಲ್ಲಿ ಸಾಕ್ಷೀ=ಗುಡ್ಡೆಯಾಗಿ ಶಾಶ್ವತವಾಗಿ ನೆಲೆಸಿರುತ್ತವೆ. ಕೃಷ್ಣ ಅವರ ವರ್ಣರಂಜಿತ ವ್ಯಕ್ತಿತ್ವವನ್ನು ಗೌರವಿಸುವ ಅಭಿಮಾನಿಗಳಲ್ಲಿ ನಾನೇ ಮೊದಲಿಗ, ರಾಜ್ಯ ರಾಜಕೀಯದಲ್ಲಿ  ಎಸ್ ಬಂಗಾರಪ್ಪನವರು. ಎಚ್ ಡಿ ದೇವೇಗೌಡರು. ಎಸ್ ಎಂ ಕೃಷ್ಣ ಅವರು ಈ ಮೂವರು ನನ್ನ ನೆಚ್ಚಿನ ನಾಯಕರು ಹೌದು. ಈ ಮೂರು ನಾಯಕರ ಆಡಳಿತದಲ್ಲಿನ ಪಾರದರ್ಶಕತೆ ನನ್ನಂತೆ ಆನೇಕ ಮುಖಂಡರಿಗೆ ಆದರ್ಶಪ್ರಾಯ. ಇದು ಕಥೆಯಲ್ಲ ಆಡಳಿತಾತ್ಮಕ ಇತಿಹಾಸ.
ಲೇಖನ:ರಘು ಗೌಡ 9916101265

- Advertisement -  - Advertisement - 
Share This Article
error: Content is protected !!
";