ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆ ಚಿತ್ರದುರ್ಗ ಹಾಗೂ ವಿಶ್ವಮಾನವ ಪದವಿ ಪೂರ್ವ ಕಾಲೇಜು ಸೀಬಾರ ಗುತ್ತಿನಾಡು ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಎರಡು ದಿನಗಳ ಕಥಾಯಾನ ಕಾರ್ಯಕ್ರಮವನ್ನು ವಕೀಲರು ಹಾಗೂ ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆಯ ಗೌರವಾಧ್ಯಕ್ಷ ಬಿ.ಕೆ ರಹಮತ್ ಉಲ್ಲಾ ಉದ್ಘಾಟಿಸಿ ಮಾತನಾಡಿ ಇಂತಹ ಕಾರ್ಯಗಾರಗಳು ಇಂದಿನ ಯುವ ಸಾಹಿತಿಗಳಿಗೆ ಅತ್ಯಂತ ಅವಶ್ಯಕ.
ಹಲವು ಯುವ ಸಾಹಿತಿಗಳಿಗೆ ಬರೆಯುವ ಉತ್ಸಾಹ ಇರುತ್ತದೆ. ಆದರೆ ಹೇಗೆ ಬರೆಯಬೇಕು? ಬರಹಕ್ಕೆ ಯಾವ ವಸ್ತು ಆಯ್ಕೆ ಮಾಡಿಕೊಳ್ಳಬೇಕು? ಬರಹ ಶೈಲಿ ಹೇಗಿರಬೇಕೆಂಬುದರ ಅರಿವು ಇಲ್ಲದೆ ಒದ್ದಾಡುವ ಸ್ಥಿತಿಯಲ್ಲಿ ಇರುತ್ತಾರೆ. ಆದಕಾರಣ ಅನುಭವಿ ಹಾಗೂ ನುರಿತ ಸಾಹಿತಿಗಳಾದ ಸಂತೋಷ ಮೆಹಂದಳೆ ಅಂತಹ ವೈಚಾರಿಕ ಹಾಗೂ ವೈಜ್ಞಾನಿಕ ಬರಹಗಾರರಂತಹ ಸಂಪನ್ಮೂಲ ವ್ಯಕ್ತಿಗಳಿಂದ ಈ ಎರಡು ದಿನಗಳ ಕಾರ್ಯಾಗಾರ ಮುನ್ನಡೆಸುತ್ತಿರುವುದು ಅತ್ಯಂತ ಉಪಯುಕ್ತ ಕಾರ್ಯಗಾರವಾಗಿದೆ ಎಂದರು.
ಪ್ರಾಸ್ತಾವಿಕ ನುಡಿಯಲ್ಲಿ ಮಾತನಾಡಿದ ದಯಾ ಪುತ್ತೂರ್ಕರ್, ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆ ಇಂತಹ ಅನೇಕ ಸೃಜನಾತ್ಮಕ ಹಾಗೂ ಉಪಯುಕ್ತ ಕಾರ್ಯಕ್ರಮಗಳನ್ನು ಕಳೆದ 18 ವರ್ಷಗಳಿಂದ ಆಯೋಜಿಸಿಕೊಂಡು ಬರುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ಡಾ.ಎಸ್.ಎಚ್ ಶಫಿವುಲ್ಲಾ ಅಧ್ಯಕ್ಷತೆ ವಹಿಸಿ ಮಾತನಾಡಿ, ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆ ಇಂದು ಮತ್ತು ಮುಂದೆ ಎಲ್ಲಾ ದಿನಗಳಲ್ಲೂ ಕೂಡ ಇಂತಹ ಸಾಂಸ್ಕೃತಿಕ ಮತ್ತು ಸಾಹಿತ್ಯ ಕಾರ್ಯಗಾರಗಳನ್ನು ಏರ್ಪಡಿಸುವ ಮೂಲಕ ನಮ್ಮ ವೇದಿಕೆ ಕನ್ನಡ ಸೇವೆಯನ್ನು ಸದಾ ಮಾಡುತ್ತಿರುತ್ತದೆ. ಈ ಮೂಲಕ ಕನ್ನಡ ನಾಡು ನುಡಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಬೆಳವಣಿಗೆಗೆ ಅಳಿಲು ಸೇವೆಯನ್ನು ಮಾಡುತ್ತದೆ ಎಂದರು.
ಸಂಪನ್ಮೂಲ ವ್ಯಕ್ತಿ ಸಂಶೋಧಕ ಬಿ ರಾಜಶೇಖರಪ್ಪ ಐತಿಹಾಸಿಕ ಸಂಶೋಧನೆ ಮತ್ತು ಬರಹ ಕುರಿತು ಉಪನ್ಯಾಸ ಮಂಡಿಸಿ ಸಂವಾದದಲ್ಲಿ ಶಿಬಿರಾರ್ಥಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದರು.
ಸಂಪನ್ಮೂಲ ವ್ಯಕ್ತಿ, ಖ್ಯಾತ ಸಾಹಿತಿ ಹಾಗೂ ಅಂಕಣಕಾರ ಸಂತೋಷ್ ಕುಮಾರ್ ಮೆಹಂದಾಳೆ ಅವರು ಕಥೆಯ ರಚನೆ, ವಸ್ತು, ಶೈಲಿ, ಪ್ರಕಾರಗಳನ್ನು ಕುರಿತು ವಿಚಾರ ಮಂಡಿಸುತ್ತಾ ಪ್ರಾಯೋಗಿಕವಾಗಿ ಶಿಬಿರಾರ್ಥಿಗಳಿಗೆ ವಿವರಿಸಿದರು.
ಶಿವಾನಂದ್ ಬಂಡೆ ಮೇಗಳಹಳ್ಳಿ ನಿರೂಪಿಸಿದರು. ಶೋಭಾ ಮಲ್ಲಿಕಾರ್ಜುನ್ ಸ್ವಾಗತಿಸಿದರು. ವಿದ್ಯಾರ್ಥಿಗಳು ಪ್ರಾರ್ಥಿಸಿದರು.
ವಿಶ್ವಮಾನವ ಪದವಿಪೂರ್ವ ಕಾಲೇಜಿನ ಜಲೀಲ್ ಸಾಹೇಬ್, ಕಾರ್ಯದರ್ಶಿ ನೀಲಕಂಠ ದೇವರು, ಪ್ರಾಂಶುಪಾಲೆ ಸುಧಾ ಲೋಕೇಶ್, ಉಪನ್ಯಾಸಕ ತಿಪ್ಪೇಸ್ವಾಮಿ, ಶೋಭಾ ಮಲ್ಲಿಕಾರ್ಜುನ್, ಶಿವರುದ್ರಪ್ಪ, ಪಂಡ್ರಹಳ್ಳಿ ಪ್ರವೀಣ್, ಬೆಳಗೆರೆ ವಿನಾಯಕ, ಸುಮಾ, ರಾಜಶೇಖರ್, ಸತೀಶ್ ಕುಮಾರ್, ಮಹಮ್ಮದ್ ಸಾದತ್, ನಿರ್ಮಲಾ, ಮಂಜುನಾಥ್, ಜಯದೇವ್ ಮೂರ್ತಿ, ವೇದಮೂರ್ತಿ, ಜಯಪ್ರಕಾಶ್, ಮಸ್ಕಲ್ ನವೀನ್, ಸಜ್ಜನ್, ವೀರೇಶ್, ಪಿಲ್ಲಹಳ್ಳಿ ಮೀರಾ ನಾಡಿಗ್, ಶಿಬಿರಾರ್ಥಿಗಳು ವಿಶ್ವಮಾನವ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಪಾಲ್ಗೊಂಡಿದ್ದರು.