ಚಂದ್ರವಳ್ಳಿ ನ್ಯೂಸ್, ಹುಬ್ಬಳ್ಳಿ:
ಬಿಜೆಪಿ ನಾಯಕರಿಗೆ ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ಹಲವು ಜ್ವಲಂತ ಸಮಸ್ಯೆ ಬಗ್ಗೆ ಚರ್ಚೆ ಮಾಡಲು ಇಂಟ್ರಸ್ಟೇ ಇಲ್ಲ. ಅವರಿಗೆ ರಾಜಕಾರಣ ಬಿಟ್ಟರೆ ಮತ್ತೇನೂ ಗೊತ್ತಿಲ್ಲ ಎಂದು ಬಿಜೆಪಿ ನಾಯಕರ ವಿರುದ್ಧ ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ ಕೆ ಶಿವಕುಮಾರ್ ಟೀಕಾಪ್ರಹಾರ ಮಾಡಿದರು.
ಹುಬ್ಬಳ್ಳಿ ನಗರದ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕದಂತೆ ರಾಜ್ಯದ ಯಾವುದೇ ಸಮಸ್ಯೆ ಕುರಿತು ಚರ್ಚಿಸಲು ಕಾಂಗ್ರೆಸ್ ಸಿದ್ಧವಿದೆ. ಮಹಾದಾಯಿ ಯೋಜನೆ ಅನುಷ್ಠಾನ ಸೇರಿದಂತೆ ಇತರೆ ನೀರಾವರಿ ಸಮಸ್ಯೆ ಸೇರಿ ಎಲ್ಲ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಲಿದ್ದೇವೆ ಎಂದು ಅವರು ತಿಳಿಸಿದರು.
ಕೇಂದ್ರ ಅರಣ್ಯ ಸಚಿವರನ್ನು ಮಹಾದಾಯಿ ಯೋಜನೆ ಅನುಷ್ಠಾನ ವಿಚಾರಕ್ಕೆ ಇತ್ತೀಚೆಗೆ ಭೇಟಿ ಮಾಡಿದ್ದೇವೆ. ಅಲ್ಲದೆ ಕೇಂದ್ರ ಅರಣ್ಯ ಸಚಿವರಿಗೆ ಜೋಶಿಯವರು ಮಹದಾಯಿ ಕುರಿತು ವಿಷಯ ತಿಳಿಸಿದ್ದಾರೆ. ನಾನು ಕೂಡ ವಿಷಯ ತಿಳಿಸಿದ್ದೇನೆ. ಮಹದಾಯಿ ವಿಚಾರವಾಗಿ ಕೇಂದ್ರ ಅರಣ್ಯ ಸಚಿವರನ್ನು ಭೇಟಿ ಮಾಡಿದ್ದೇನೆ.
ಜೋಶಿ ಅವರನ್ನು ಸಹ ಭೇಟಿ ಮಾಡಿದ್ದೇನೆ. ಅವರು ಯಾವಾಗ ಅನುಮತಿ ಕೋಡತ್ತಾರೆ ಅಂತ ಕಾಯುತ್ತಿದ್ದೇವೆ ಎಂದು ಡಿಕೆಶಿ ಅವರು ಹೇಳಿದರು.
ಮಹದಾಯಿ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಎಲ್ಲಾ ರೀತಿ ಪ್ಲಾನ್ ಸಿದ್ಧ ಪಡಿಸಿದೆ. ಜಗದೀಶ್ ಶೆಟ್ಟರ್ ಮತ್ತು ಪ್ರಲ್ಹಾದ್ ಜೋಶಿ ಇಬ್ಬರು ಜವಾಬ್ದಾರಿ ತೆಗೆದುಕೊಳ್ಳಬೇಕು. ಯಾಕೆಂದರೆ ಮಹದಾಯಿ ಸಂಭ್ರಮಾಚರಣೆ ಮಾಡಿದ್ದು ಬಿಜೆಪಿಯವರು. ಅವರು ವಿಜಯೋತ್ಸವ ಮಾಡೋರು, ನಾವು ಕೆಲಸ ಮಾಡೋರು. ಚಿಕ್ಕಫಾರೆಸ್ಟ್ ಕ್ಲಿಯರೆನ್ಸ್ ಕೊಡಿಸುವ ಜವಾಬ್ದಾರಿ ಜೋಶಿಯವರ ಮೇಲಿದೆ. ಫಾರೆಸ್ಟ್ ಕ್ಲಿಯರೆನ್ಸ್ ಸಿಗುವ ಭರವಸೆ ಕಾಣುತ್ತಿದೆ ಎಂದು ಜಲಸಂಪನ್ಮೂಲ ಸಚಿವ ಡಿಕೆಶಿ ಅವರು ತಿಳಿಸಿದರು.
ಕೋವಿಡ್ ಹಗರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಶಿವಕುಮಾರ್, ತನಿಖಾ ಆಯೋಗದ “ಡಿ‘ ಕುನ್ಹಾ ಅವರು ವರದಿ ಕೊಟ್ಟಿದ್ದಾರೆ. ಈಗಾಗಲೇ ಎಫ್ಐಆರ್ ದಾಖಲು ಮಾಡಲಾಗಿದೆ. ಅವರನೇನು ಮಾಡುತ್ತಾರೆ ನೋಡೋಣ ಎಂದು ಶಿವಕುಮಾರ್ ತಿಳಿಸಿದರು.