ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ತಾಲ್ಲೂಕು ಕೃಷಿ ಸಮಾಜದ ನಿರ್ದೇಶಕರ ಆಯ್ಕೆಗಾಗಿ ಭಾನುವಾರ ಚುನಾವಣೆ ನಡೆದಿದ್ದು, ಚುನಾವಣಾಧಿಕಾರಿಯಾಗಿ ಸಹಾಯಕ ಕೃಷಿ ನಿರ್ದೇಶಕ ಜೆ.ಅಶೋಕ್ ಕಾರ್ಯನಿರ್ವಹಿಸಿದರು.
೨೦೨೫-೨೬ರಿಂದ೨೦೨೯-೩೦ ಸಾಲಿನ ಒಟ್ಟು ೫ ವರ್ಷಗಳ ಅವಧಿಗೆ ಚುನಾವಣೆ ನಡೆದಿದ್ದು, ಒಟ್ಟು ೧೭ ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧಿಸಿದ್ದರು. ಇಬ್ಬರನ್ನು ಹೊರತು ಪಡಿಸಿ ಉಳಿದ ೧೫ ಅಭ್ಯರ್ಥಿಗಳು ಮತದಾನದ ಮೂಲಕ ಕೃಷಿ ಸಮಾಜದ ನಿರ್ದೇಶಕರಾಗಿ ಆಯ್ಕೆಯಾಗಿರುತ್ತಾರೆ. ಒಟ್ಟು ಕ್ಷೇತ್ರ ೪೦೯ ಮತಗಳಲ್ಲಿ ಆ ಪೈಕಿ ೧೨೮ ಮತದಾರರು ಮತಚಲಾಯಿಸಿದ್ದು, ೨೮೧ ಮತದಾರರು ಮತಚಲಾಯಿಸಲಿಲ್ಲ.
ನಗರದ ಸಹಾಯಕ ಕೃಷಿ ನಿರ್ದೇಶಕ ಕಚೇರಿಯ ಮತಗಟ್ಟೆ ಕೇಂದ್ರದಲ್ಲಿ ಮತದಾನ ನಡೆದಿದ್ದು, ಚುನಾವಣೆಗೆ ಸ್ಪರ್ಧಿಸಿದ ೧೭ ಅಭ್ಯರ್ಥಿಗಳು ಪೈಕಿ ೧೫ ಅಭ್ಯರ್ಥಿಗಳು ಆಯ್ಕೆಯಾದರು. ಎಚ್.ಕಾಂತರಾಜ್, ಕೇಶವ, ಗಿರೀಶ್, ಜಗದೀಶ್, ಎಂ.ಎಸ್.ನವೀನ್, ಭೀಮಾರೆಡ್ಡಿ, ರಮೇಶ್, ಜಿ.ಎಚ್.ಲೀಲಾವತಿ, ಲೋಕೇಶ್, ವಂಶಿಕೃಷ್ಣ, ವೆಂಕಟೇಶ್, ಶ್ರೀನಿವಾಸ್‌ರೆಡ್ಡಿ, ಬಿ.ಸಿ.ಸತೀಶ್‌ಕುಮಾರ್, ಸುಶೀಲಮ್ಮ, ಹೆಂಜೇರರೆಡ್ಡಿ ಅತಿಹೆಚ್ಚು ಮತಗಳಿಸಿ ನಿರ್ದೇಶಕರಾಗಿ ಆಯ್ಕೆಯಾದರು. ದೊಡ್ಡರಂಗಪ್ಪ ಮತ್ತು ಜಿ.ಎಂ.ನಾಗೇಂದ್ರ ಅಲ್ಪಮತ ಪಡೆದು ಪರಾಜಿತರಾದರು.
ಮತಗಟ್ಟೆಯ ಕೇಂದ್ರದ ಸುತ್ತಲು ಪೊಲೀಸ್ ಬೀಗಿಬಂದೋಬಸ್ತ್ ಏರ್ಪಡಿಸಲಾಗಿತ್ತು. ಮತದಾನ ನಂತರ ಸಂಜೆ ಮತಗಳ ಏಣಿಕೆ ನಡೆಯಿತು. ವಿಜೇತ ಪ್ರತಿಯೊಬ್ಬ ಅಭ್ಯರ್ಥಿ ನೂರಕ್ಕೂ ಹೆಚ್ಚು ಮತಗಳನ್ನು ಪಡೆದಿದ್ದರು. ಗೆಲುವಿನ ನಂತರ ಅಭ್ಯರ್ಥಿಗಳ ಬೆಂಬಲಿಗರು ಪಟಾಕಿ ಸಿಡಿಸಿ, ಹೂವಿನ ಹಾರ ಹಾಕಿ ಸಂಭ್ರಮಿಸಿದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು.