ಸಿಜೇರಿಯನ್  ಹೆರಿಗೆ ತಡೆಗಟ್ಟಲು ವಿಶೇಷ ಕಾರ್ಯಕ್ರಮ:ಸಚಿವ ದಿನೇಶ್ ಗುಂಡೂರಾವ್

News Desk

ಚಂದ್ರವಳ್ಳಿ ನ್ಯೂಸ್, ಬೆಳಗಾವಿ:   ರಾಜ್ಯದಲ್ಲಿ ಸರ್ಜರಿ ಮೂಲಕ ಹೆರಿಗೆಗಳಾಗುತ್ತಿರುವ ಪ್ರಮಾಣ ಶೇ 46 ರಷ್ಟಿದ್ದುಸರಕಾರಿ ಆಸ್ಪತ್ರೆ ಯಲ್ಲಿ ಶೇ. 36 ಮತ್ತು ಖಾಸಗಿ ಆಸ್ಪತ್ರೆ ಯಲ್ಲಿ ಶೇ. 61 ಇದ್ದುರಾಜ್ಯದಲ್ಲಿ ಅನಗತ್ಯ ಸಿಜೇರಿಯನ್ ಹೆರಿಗೆ ತಡೆಗಟ್ಟಲು   ಮುಂದಿನ ತಿಂಗಳು ವಿಶೇಷ ಕಾರ್ಯಕ್ರಮ ಘೋಷಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಹೇಳಿದರುಅವರು ಇಂದು ವಿಧಾನ ಪರಿಷತ್ತಿನಲ್ಲಿ ಸದಸ್ಯ ಜಗದೇವ ಗುತ್ತೇದಾರ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದರು

ರಾಜ್ಯದಲ್ಲಿ ಅನಗತ್ಯ ಸಿಜೇರಿಯನ್ ಹೆರಿಗೆ ತಡೆಯಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ  ತಾಲ್ಲೂಕು ಮಟ್ಟದ ಆಸ್ಪತ್ರೆಗಳನ್ನು 24X7 ಪ್ರಸೂತಿ ಸೇವೆಗಳನ್ನು ನೀಡಲು ಬಲಪಡಿಸಲಾಗುತ್ತಿದೆರಾತ್ರಿ ವೇಳೆಯಲ್ಲಿ ಸಹಜ ಹರಿಗೆಗಳನ್ನು ಮತ್ತು ಅವಶ್ಯವಿದ್ದಲ್ಲಿಸಿಜೇರಿಯನ್ ಶಸ್ತ್ರಚಿಕಿತ್ಸೆ ನಡೆಸಲು ಅನುಕೂಲವಾಗುತ್ತಿದೆ ಕ್ರಮದಿಂದ ತಾಲ್ಲೂಕು ಮಟ್ಟದಿಂದ ಜಿಲ್ಲಾ ಮಟ್ಟಕ್ಕೆ ಶಿಫಾರಸ್ಸುಗೊಳ್ಳುವ ಸಂಖ್ಯೆಯು ಕಡಿಮೆ ಆಗಲಿದ್ದು ಅನಗತ್ಯ ಸಿಜೇರಿಯನ್ ಶಸ್ತ್ರಚಿಕಿತ್ಸೆಗೆ ಕಡಿವಾಣ ಹಾಕಲಾಗುತ್ತಿದೆ ಎಂದರು

 ಪ್ರತ್ಯೇಕ ತಾಯಿ ಮತ್ತು ಮಕ್ಕಳ ಆಸ್ಪತ್ರೆಗಳನ್ನು ತೆರೆಯಲಾಗಿದ್ದುಇದುವರೆಗೂ 88 ತಾಯಿ ಮತ್ತು ಮಕ್ಕಳ ಆಸ್ಪತ್ರೆಗಳು ಮಂಜೂರಾಗಿದ್ದು ಅದರಲ್ಲಿ 60 ತಾಯಿ ಮತ್ತು ಮಕ್ಕಳ ಆಸ್ಪತ್ರೆಗಳು ಕಾರ್ಯ ನಿರ್ವಹಿಸುತ್ತಿರುತ್ತವೆ. 24X7 ಸಮಗ್ರ ಪ್ರಸೂತಿ ಸೇವೆಗಳನ್ನು ನೀಡಲಾಗುತ್ತಿದೆ ತಾಯಿ ಮತ್ತು ಮಕ್ಕಳ ಆಸ್ಪತ್ರೆಗಳಲ್ಲಿ ಪ್ರತ್ಯೇಕ ಸಿಬ್ಬಂದಿಯು ಮತ್ತು ನುರಿತ ತಾಯಿ ಮತ್ತು ಮಕ್ಕಳ ತಜ್ಞರು ಇರುವುದರಿಂದ 24X7 ಸಹಜ ಹರಿಗೆ ನಡೆಸಲು ಉತ್ತೇಜಿಸಲಾಗುತ್ತಿದೆ. 

ಸಹಜ ಹೆರಿಗೆಗಳನ್ನು ಹೆಚ್ಚಿಸಲು ಹಾಗೂ ಸಿಜೆರಿಯನ್ ಶಸ್ತ್ರಚಿಕಿತ್ಸೆ ಕಡಿಮೆ ಮಾಡಲು Midwifery ಯೋಜನೆಯನ್ನು ಪ್ರಾರಂಭಿಸಲಾಗಿದೆ  ಯೋಜನೆಯಲ್ಲಿ ಶುಶ್ರೂಷಾಧಿಕಾರಿಗಳಿಗೆ 18 ತಿಂಗಳ ತರಬೇತಿಯನ್ನು Midwifery ಯೋಜನೆಯಲ್ಲಿ ಪಡೆದು MLCU ಹರಿಗೆ ಕೋಣೆಯಲ್ಲಿ ಸಹಜ ಹೆರಿಗೆಗಳನ್ನು ನೆರವೇರಿಸಲು ತಜ್ಞತೆಯನ್ನು ಹೊಂದಿರುತ್ತಾರೆ. 

 ಪ್ರಸ್ತುತ ತರಬೇತುದಾರರ ತರಬೇತಿಯನ್ನು ಬೆಂಗಳೂರಿನ ವಾಣಿ ವಿಲಾಸ ಆಸ್ಪತ್ರೆಯಲ್ಲಿ ಮತ್ತು ಹೈದರಬಾದಿನ Fernandez Foundation ನಲ್ಲಿ ಪೂರ್ಣಗೊಳಿಸಿ ಬೆಂಗಳೂರುಮೈಸೂರು ಮತ್ತು ಬೆಳಗಾವಿಯಲ್ಲಿ ಶುಶ್ರೂಷಾಧಿಕಾರಿಗಳಿಗೆ 18 ತಿಂಗಳ ತರಬೇತಿಯನ್ನು ನೀಡುತ್ತಿದ್ದಾರೆ

ಮೈಸೂರಿನ ಚೆಲುವಾಂಬ ಆಸ್ಪತ್ರೆಯಲ್ಲಿ ನಡೆಸಲಾಗುತ್ತಿರುವ 1830 ಶುಶ್ರೂಷಾಧಿಕಾರಿಗಳ ತರಬೇತಿಯಲ್ಲಿ 12 ತಿಂಗಳು ಪೂರ್ಣಗೊಂಡಿದ್ದು ಇನ್ನು 6 ತಿಂಗಳಲ್ಲಿ ತರಬೇತಿ ಮುಗಿಯಲಿದ್ದು ಜುಲೈ-2025 ರಿಂದ ಹಾಸನಮಂಡ್ಯ ಮತ್ತು ಮೈಸೂರಿನ ಜಿಲ್ಲಾ ಆಸ್ಪತ್ರೆಯಲ್ಲಿ MLCU ಕಾರ್ಯಾರಂಭ ಮಾಡಲಿದೆ

 ಬೆಂಗಳೂರಿನಲ್ಲಿ ವಾಣಿ ವಿಲಾಸ ಆಸ್ಪತ್ರೆ ಯಲ್ಲಿ ಬೆಂಗಳೂರು ವಿಭಾಗಕ್ಕೆ ಸಂಬಂಧಿಸಿದಂತೆ 25 ಶುಶ್ರೂಷಾಧಿಕಾರಿಗಳು NPM ತರಬೇತಿಯನ್ನು ಜುಲೈ-2024 ರಲ್ಲಿ ಪ್ರಾರಂಭಿಸಲಾಗಿದ್ದುಡಿಸೆಂಬರ್ 2025  ವರೆಗೆ 18 ತಿಂಗಳ ತರಬೇತಿಯು ಮುಗಿಯಲಿದ್ದು ತದ ನಂತರ ಕೋಲಾರಬೆಂಗಳೂರುದಾವಣಗೆರೆ ಮತ್ತು ತುಮಕೂರು ಜಿಲ್ಲಾ ಆಸ್ಪತ್ರೆಗಳಲ್ಲಿ MLCU ಪ್ರಾರಂಭಗೊಳ್ಳುತ್ತದೆ

ಬೆಳಗಾವಿ ಜಿಲ್ಲೆಯಲ್ಲಿ 18 ತಿಂಗಳ ತರಬೇತಿ ಪ್ರಾರಂಭಿಸಲಾಗಿದ್ದು ಒಟ್ಟು 24 ಶುಶ್ರೂಷಾಧಿಕಾರಿಗಳಿಗೆ ತರಬೇತಿ ನೀಡಲಾಗುವುದುತದನಂತರ ಬೆಳಗಾವಿಹುಬ್ಬಳ್ಳಿ ಮತ್ತು ಗಂಗಾವತಿ ಯಲ್ಲಿ MLCU ಪ್ರಾರಂಭಗೊಳ್ಳಲಿದೆ

ಪ್ರತಿ ಜಿಲ್ಲಾಸ್ಪತ್ರೆ ಮತ್ತು ತಾಲ್ಲೂಕು ಆಸ್ಪತ್ರೆಯಲ್ಲಿ ಸಿಜೇರಿಯನ್  ಶಸ್ತ್ರಚಿಕಿತ್ಸೆಯ ಕಡಿವಾಣ ಹಾಕಲು ಸಿಜೇರಿಯನ್  ಆಡಿಟ್ ಅಸ್ಪತ್ರೆಯಲ್ಲಿ ಮಾಡಲಾಗುತ್ತಿದೆ ಆಡಿಟ್ ನಿಂದ ಪ್ರತಿ ಸಿಜೇರಿಯನ್  ಶಸ್ತ್ರಚಿಕಿತ್ಸೆ ಅಗತ್ಯತೆ ಹಾಗು ಅನಗತ್ಯತೆ ಬಗ್ಗೆ ಕೂಲಂಕುಷವಾಗಿ ಪರಿಶೀಲಿಸಿ ಸಿಜೇರಿಯನ್  ಶಸ್ತ್ರಚಿಕಿತ್ಸೆ ತಡೆಗಟ್ಟಲು ಕ್ರಮವಹಿಸಲಾಗುತ್ತಿದೆ ಎಂದರು

 ಪ್ರತಿ ತಿಂಗಳು ಸಿಜೇರಿಯನ್  ಶಸ್ತ್ರಚಿಕಿತ್ಸೆಯ ಅನಗತ್ಯ ಶಸ್ತ್ರಚಿಕಿತ್ಸೆ ತಡೆಯಲು ಜಿಲ್ಲಾ ಮಟ್ಟದಲ್ಲಿ ಪರಿಶೀಲನಾ ಸಭೆಗಳನ್ನು ನಡೆಸಲಾಗುತ್ತಿದೆ.

  ರಾಜ್ಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪ್ರಸೂತಿ ತಜ್ಞರುಗಳಿಗೆ ಮತ್ತು ಶುಶ್ರೂಷಕರುಗಳಿಗೆ ಹೆರಿಗೆ ಸಮಯದಲ್ಲಿನ ಆರೈಕೆ ಮತ್ತು ಪ್ರಸವದ ನಂತರದ ಆರೈಕೆಗೆ ಸಂಬಂಧಿಸಿದ ಕೌಶಲವನ್ನು ಹೆಚ್ಚಿಸಲು 3 ದಿನಗಳ ದಕ್ಷತಾ ತರಬೇತಿಯನ್ನು 2018 ರಿಂದ ನೀಡಲಾಗುತ್ತಿದೆಇದರಿಂದ ಸಿಜೇರಿಯನ್ ಶಸ್ತ್ರಚಿಕಿತ್ಸೆ ಯನ್ನು ನಿಯಂತ್ರಿಸಲು ಸಹಾಯವಾಗುತ್ತಿದೆ ಎಂದು ಸಚಿವರು ತಿಳಿಸಿದರು.

- Advertisement -  - Advertisement - 
Share This Article
error: Content is protected !!
";