ಸರ್ವಜನಾಂಗದೊಂದಿಗೆ ಕೂಡಿ ಬದುಕುವುದೇ ಒಕ್ಕಲುತನ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸ್ವಾತಂತ್ರ್ಯ ಪೂರ್ವದ ಆ ದಿನಗಳಲ್ಲಿ ಮೈಸೂರು ಸಂಸ್ಥಾನದ ಆಡಳಿತದಲ್ಲಿ ಒಕ್ಕಲುತನದ ಮಕ್ಕಳ ವಿದ್ಯಾಭ್ಯಾಸದ ಭವಿಷ್ಯ ಸೇರಿದಂತೆ ಸರ್ವಜನಾಂಗದ ಮಕ್ಕಳ ಹಿತದೃಷ್ಟಿಗೆ ಒಕ್ಕಲಿಗರ ಸಂಘ ಉದಯವಾಗಿದೆ.

ಆ ದಿನಗಳಲ್ಲಿ  ಒಕ್ಕಲಿಗರ ಸಂಘದ ಪರವಾಗಿ ಅನೇಕ ಒಕ್ಕಲಿಗ ಮನೆತನದವರು ಬೆಂಗಳೂರು ನಗರ ಸೇರಿದಂತೆ ಸುತ್ತಮುತ್ತಲಿನ ಪ್ರಾಂತ್ಯದಲ್ಲಿ ಜಮೀನುಗಳನ್ನು ಸೇರಿದಂತೆ ಧನಸಹಾಯವನ್ನು ಮಾಡಿ ಔದಾರ್ಯವನ್ನು ತೋರಿಸಿದ್ದು ಒಂದು ಇತಿಹಾಸ. ದಿನಗಳು ಕಳೆದಂತೆ ಒಕ್ಕಲಿಗರ ಸಂಘ ಬೆಳೆದು ವಿವಿಧ ವಿಭಾಗಗಳಲ್ಲಿ ವಿದ್ಯಾಸಂಸ್ಥೆಯು ಬೆಳೆದು ನಿಂತಿದೆ.

ರಾಜ್ಯ ಒಕ್ಕಲಿಗರ ಸಂಘದ ಸಮಿತಿಗೆ ನೂತನ ಅಧ್ಯಕ್ಷರಾಗಿ ಬಿ ಕೆಂಚಪ್ಪ ಗೌಡರು ಆಯ್ಕೆಯಾಗಿದ್ದಾರೆ. ಇವರಿಗೆ ಅಭಿನಂದನೆಗಳು. ಕೆಂಚಪ್ಪ ಗೌಡರು ಈ ಹಿಂದೆ 2008 ರಲ್ಲಿ ಒಕ್ಕಲಿಗರ ಸಂಘಕ್ಕೆ ಅಧ್ಯಕ್ಷರಾಗಿದ್ದರು. 2010ರ ಸುಮಾರಿನಲ್ಲಿ ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿ ಸದಾನಂದಗೌಡರು ಇರುವಂತಹ ಸಂದರ್ಭದಲ್ಲಿ ಒಕ್ಕಲಿಗರ ಸಂಘದಿಂದ ಒಂದು ಸಮಾವೇಶ ಆಯೋಜಿಸಲಾಗಿತ್ತು.

ಆ ಒಂದು ಸಮಾವೇಶದ ಮುಖ್ಯ ಸನ್ನಿವೇಶದಲ್ಲಿ ನನಗೆ ಕೆಂಚಪ್ಪ ಗೌಡರೂಂದಿಗೆ ಪರಿಚಯದ  ಹಂಚಿಕೆ ಆಗಿತ್ತು. ಕೆಂಚಪ್ಪ ಗೌಡರ ಆಡಳಿತದಲ್ಲಿ ಒಕ್ಕಲುತನದ ಮಕ್ಕಳ ವಿದ್ಯಾಭ್ಯಾಸದ ಭವಿಷ್ಯಕ್ಕೆ ಒಂದಿಷ್ಟು ಒಳ್ಳೆಯ ಅವಕಾಶ ಸಿಗಲಿ ಎಂದು ಆಶಿಸುತ್ತೇನೆ. ಒಕ್ಕಲಿಗ ಒಕ್ಕದಿರೆ ಬಿಕ್ಕುವುದು ಜಗವೆಲ್ಲ.
ಕಿರು ಮಾಹಿತಿ-ರಘು ಗೌಡ

- Advertisement -  - Advertisement - 
Share This Article
error: Content is protected !!
";