ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ತಮ್ಮ ಆಡಳಿತ ವೈಫಲ್ಯವನ್ನು ಮರೆಮಾಚಲು ಸುಳ್ಳುಗಳನ್ನು ಸೃಷ್ಟಿಸುವುದು ಸಿಎಂ ಸಿದ್ದರಾಮಯ್ಯ ಅವರ ಮೂಲ ಗುಣ!! ಎಂದು ಬಿಜೆಪಿ ಆರೋಪಿಸಿದೆ.
ಆಡಳಿತಕ್ಕೆ ಸಂಚಕಾರ ಬಂದಾಗಲೆಲ್ಲಾ ವಿಪಕ್ಷಗಳ ನಾಯಕರ ಮೇಲೆ ಸುಳ್ಳುಗಳ ದಾಳಿ ಮಾಡಿ, ಜನರ ಗಮನವನ್ನು ಬೇರೆಡೆ ಸೆಳೆಯುತ್ತಾರೆ ಸಿದ್ದರಾಮಯ್ಯ ಅವರು!!
ಈಗ ಮುಡಾ ಹಗರಣದಲ್ಲಿ ಜೈಲು ಕಂಬಿ ಎಣಿಸುವ ದಿನ ಹತ್ತಿರ ಬರುತ್ತಿದ್ದಂತೆ ವಕ್ಫ್ ವಿಚಾರದಲ್ಲಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಮೇಲೆ ಮಾಡುತ್ತಿರುವ ಆರೋಪಗಳು ಸಂಪೂರ್ಣ ಸುಳ್ಳಿನ ಕಣಜ ಎಂದು ಬಿಜೆಪಿ ದೂರಿದೆ.