ಎಂಪಿಎಂ ಕಾರ್ಖಾನೆ ಆರಂಭಕ್ಕೆ ಕ್ರಮ: ಸಚಿವ ಎಂ. ಬಿ. ಪಾಟೀಲ್

News Desk

ಚಂದ್ರವಳ್ಳಿ ನ್ಯೂಸ್, ಬೆಳಗಾವಿ/ಬೆಂಗಳೂರು:
ಅರಣ್ಯ ಇಲಾಖೆ ತಜ್ಞರ ಸಮಿತಿ ನೀಲಗಿರಿ ಬೆಳೆಯಲು ಎಂ.ಪಿ.ಎಂ.ಗೆ ವಿನಾಯಿತಿ ನೀಡುವ ಸಂಬಂಧ ಪರಿಶೀಲಿಸಿ ವರದಿ ನೀಡಬೇಕಾಗಿದ್ದು ನಂತರ ಎಂ.ಪಿ.ಎಂ. ಕಾರ್ಖಾನೆ ಆರಂಭಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲ ಸೌಲಭ್ಯ ಅಭಿವೃದ್ಧಿ ಸಚಿವ ಎಂ. ಬಿ. ಪಾಟೀಲ್ ತಿಳಿಸಿದರು.

ಇಂದು ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದ ವೇಳೆ ಸದಸ್ಯೆ ಬಲ್ಕಿಸ್ ಭಾನು ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವರು, ನಿರೀಕ್ಷಿತ ಬಿಡ್ಡುದಾರರು ನೀಲಗಿರಿ ಬೆಳೆಯಲು ಎಂ.ಪಿ.ಎಂ. ಗೆ ವಿನಾಯಿತಿ ಹಾಗೂ ಯಾವುದೇ ಹೊಣೆಗಾರಿಕೆಗಳಿಲ್ಲದ ಕಂಪನಿಯ ಕಾರ್ಯಾಚರಣೆಗಳನ್ನು ನಡೆಸಲು ಬಯಸುವುದರಿಂದ ಅದರಂತೆ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುತ್ತಿದ್ದು ತದನಂತರ ಕಾರ್ಖಾನೆ ಪುನರ್ ಪ್ರಾರಂಭಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಚಿವರು ತಿಳಿಸಿದರು.

ಮೈಸೂರು ಕಾಗದ ಕಾರ್ಖಾನೆಯು (ಎಂ.ಪಿ.ಎಂ.) ತೀವ್ರ ತರಹದ ಹಣಕಾಸಿನ ಸಮಸ್ಯೆ ಎದುರಿಸುತ್ತಿದ್ದು, ಸರ್ಕಾರವು ಕಾರ್ಖಾನೆಯನ್ನು ಪುನರುಜ್ಜಿವನಗೊಳಿಸಲು ಸಾಧ್ಯವಿಲ್ಲವೆಂದು ತೀರ್ಮಾನಿಸಿ ಕಾರ್ಖಾನೆಯ ಕಾರ್ಯಚಟುವಟಿಕೆಗಳನ್ನು ಖಾಸಗಿಯವರಿಗೆ ಗುತ್ತಿಗೆ ಆಧಾರದಲ್ಲಿ ನೀಡಬೇಕೆಂದು ತೀರ್ಮಾನ ಕೈಗೊಂಡಿರುತ್ತದೆ. ಅದರಂತೆ, ಕಾರ್ಖಾನೆಯ ಎಲ್ಲಾ ಉತ್ಪಾದನಾ ಘಟಕಗಳನ್ನು 2015-2016 ರಿಂದ ಸ್ಥಗಿತಗೊಳಿಸಲಾಗಿರುತ್ತದೆ. ಇದರ ಪ್ರಸ್ತುತ ಲೆಕ್ಕ ಪರಿಶೋಧನೆಯಲ್ಲದ ಅಂದಾಜು ನಷ್ಠ ರೂ.1,541.54 ಕೋಟಿ ಇರುತ್ತದೆ.

ಸರ್ಕಾರವು ಮೈಸೂರು ಕಾಗದ ಪುನರುಜ್ಜಿವನ ಕಾರ್ಖಾನೆಯ ಕಾರ್ಖಾನೆಯ ಸಾಧ್ಯವಿಲ್ಲವೆಂದು ತೀರ್ಮಾನಿಸಿ ಕಾರ್ಯಚಟುವಟಿಕೆಗಳನ್ನು ಖಾಸಗಿಯವರಿಗೆ ಗುತ್ತಿಗೆ ಆಧಾರದಲ್ಲಿ ನೀಡಬೇಕೆಂದು ತೀರ್ಮಾನ ಕೈಗೊಂಡು, ಪ್ರಕ್ರಿಯೆಗಳಿಗೆ ಐಡೆಕ್ ಸೇವೆಗಳನ್ನು ಬಳಸಿಕೊಳ್ಳಲಾಗುತ್ತಿದೆ.

ಆರ್.ಎಫ್.ಕ್ಯೂ. ಅನ್ನು ಏಪ್ರಿಲ್ 2017, ಆಗಸ್ಟ್ 2018 ಹಾಗೂ ಮಾರ್ಚ್ 2019 ರಲ್ಲಿ ಪ್ರಕಟಿಸಲಾಗಿತ್ತು. ಆರ್.ಎಫ್.ಕ್ಯೂ ಗೆ ಯಾವುದೇ ಅರ್ಜಿ ಸ್ವೀಕೃತವಾಗಿರುವುದಿಲ್ಲ. ಆರ್.ಎಫ್.ಕ್ಯೂ. ಅನ್ನು ಕಂಪನಿಯು ಮೊದಲೇ ಅಪ್ಲೋಡ್ ಮಾಡಲಾಗಿದ್ದು ಮತ್ತು ಆರ್.ಎಫ್.ಕ್ಯೂ. ಈಗಾಗಲೇ ವ್ಯಾಪಕ ಪ್ರಚಾರವನ್ನು ನೀಡಲಾಗಿರುವುದರಿಂದ ಪ್ರಸ್ತಾವನೆಗಾಗಿ ವಿನಂತಿಯನ್ನು (ಆರ್ಎಫ್ಪಿ) ನೇರವಾಗಿ ದಿನಾಂಕ 25.11.2020 ರಂದು ಅಪ್ಲೋಡ್ ಮಾಡಲಾಗಿದ್ದು, ಟೆಂಡರ್ ತೆರೆದಾಗ ಯಾವುದೇ ಬಿಡ್ಗಳು ಸ್ವೀಕೃತವಾಗಿರುವುದಿಲ್ಲ ಎಂದು ಸಚಿವರು ತಿಳಿಸಿದರು.

 

- Advertisement -  - Advertisement - 
Share This Article
error: Content is protected !!
";