24 ಕೋಟಿ ಮೌಲ್ಯದ ಡ್ರಗ್ಸ್ ವಶ, ಓರ್ವ ಮಹಿಳೆ ಬಂಧನ, ಮತ್ತೊರ್ವ ಮಹಿಳೆ ಪರಾರಿ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರಿನ ಕೇಂದ್ರ ಅಪರಾಧ ವಿಭಾಗ ಅಧಿಕಾರಿಗಳು ಬರೋಬ್ಬರಿ 24 ಕೋಟಿ ರೂ. ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿ ಓರ್ವ ವಿದೇಶಿ ಮಹಿಳೆಯನ್ನು ಬಂಧಿಸಿದ್ದಾರೆ.

ನೈಜೀರಿಯಾ ಮೂಲದ ರೋಜ್ಲೈಮ್(40) ಬಂಧಿತ ಆರೋಪಿಯಾಗಿದ್ದು ಸಿಸಿಬಿ ಪೊಲೀಸರು ಡ್ರಗ್ಸ್​ ಮಾರುತ್ತಿದ್ದ ವೇಳೆಯೇ ಬಂಧಿಸಿದ್ದಾರೆ.

ಆರೋಪಿ ರೋಜ್ಲೈಮ್ ಬಳಿ ಇದ್ದ 12 ಕೆಜಿ ತೂಕದ ಬಿಳಿ, ಹಳದಿ ಬಣ್ಣದ ಎಂಡಿಎಂಎ ಕ್ರಿಸ್ಟಲ್ ಮತ್ತು 70 ಸಿಮ್​ಗಳನ್ನು ಸಿಸಿಬಿ ಅಧಿಕಾರಿಗಳು ವಶಪಡಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ. ಕಳೆದ ಐದು ವರ್ಷಗಳ ಹಿಂದೆ ಬೆಂಗಳೂರಿಗೆ ರೋಜ್ಲೈಮ್ ಬಂದಿದ್ದು, ವೀಸಾ ಅವಧಿ ಮುಗಿದರೂ ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದಳು ಎನ್ನಲಾಗಿದೆ.

ಮತ್ತೊರ್ವ ವಿದೇಶಿ ಮಹಿಳೆ ಜೂಲಿಯೆಟ್ ಎಂಬಾಕೆ ಮುಂಬೈನಿಂದ ಆಹಾರ ಧಾನ್ಯದ ಜೊತೆಗೆ ಡ್ರಗ್ಸ್ ತಂದು ಬೆಂಗಳೂರಿನಲ್ಲಿ ನೈಜೀರಿಯನ್ ಪ್ರಜೆಗಳಿಗೆ ಮತ್ತು ಸ್ಥಳೀಯರಿಗೆ ಮಾರಾಟ ಮಾಡುತ್ತಿದ್ದಳು. ಈಕೆಯಿಂದ ಡ್ರಗ್ಸ್​ ಪಡೆದು ರೋಜ್ಲೈಮ್ ಕೆ.ಆರ್.ಪುರಂನ ಟಿ.ಸಿ.ಪಾಳ್ಯದಲ್ಲಿ ಅಂಗಡಿಯಲ್ಲಿಟ್ಟು ಮಾರಾಟ ಮಾಡುತ್ತಿದ್ದಳು ಎನ್ನಲಾಗಿದೆ.

ಸಿಸಿಬಿ ಪೊಲೀಸರು ಖಚಿತ ಮಾಹಿತಿ ಮೇರೆಗೆ ಕೆ.ಆರ್.ಪುರಂನ ಟಿ.ಸಿ.ಪಾಳ್ಯದ ಅಂಗಡಿ ಬಳಿ ತೆರಳಿದ್ದಾಗ ರೋಜ್ಲೈಮ್​ ಡ್ರಗ್ಸ್ ಮಾರಾಟ ಮಾಡುತ್ತಿದ್ದಳು. ಸಿಸಿಬಿ ಪೊಲೀಸರು ರೋಜ್ಲೈಮ್​ಳನ್ನು ರೆಡ್​​ಹ್ಯಾಂಡ್​ ಆಗಿ ಹಿಡಿದು ಬಂಧಿಸಿದ್ದಾರೆ. ಇದೇ ವೇಳೆ ದೆಹಲಿಯಿಂದ ಡ್ರಗ್ಸ್ ತಂದಿದ್ದ ಮತ್ತೊರ್ವ ಮಹಿಳೆ ಜೂಲಿಯೆಟ್  ಪರಾರಿಯಾಗಿದ್ದಾಳೆ. ಆರೋಪಿ ಜೂಲಿಯೆಟ್​ಗಾಗಿ ಪೊಲೀಸರ ಶೋಧ ನಡೆಸಿದ್ದಾರೆ. ಕೆ.ಆರ್.ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

- Advertisement -  - Advertisement - 
Share This Article
error: Content is protected !!
";