ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಅಖಂಡ ಕರ್ನಾಟಕ ರೈತ ಸಂಘ ನಿರಂತರವಾಗಿ ರೈತರ ಸರ್ವತೋಮುಖ ಅಭಿವೃದ್ದಿಗಾಗಿ ಅನೇಕ ಹೋರಾಟಗಳ ಮೂಲಕ ಕಾರ್ಯನಿರ್ವಹಿಸುತ್ತಾ ಬಂದಿದೆ.
ಸಂಘಟನೆ ಬಲಪಡಿಸುವ ನಿಟ್ಟಿನಲ್ಲಿ ಹಾಗೂ ಮುಂದಿನ ಹೋರಾಟದ ಬಗ್ಗೆ ಚರ್ಚೆ ನಡೆಸಲು ಡಿ.೧೯ರ ಗುರುವಾರ ಬೆಳಗ್ಗೆ ೧೧ಕ್ಕೆ ಪರಶುರಾಮಪುರದ ಜಯಣ್ಣ ನಗರದ ಸಮುದಾಯ ಭವನದಲ್ಲಿ ಸಮಾಲೋಚನಾ ಸಭೆ ಕರೆಯಲಾಗಿದೆ ಎಂದು ರೈತ ಸಂಘದ ಪ್ರಮುಖ ಗಿರೀಶ್ ತಿಳಿಸಿದ್ದಾರೆ.
ಅವರು ಈ ಬಗ್ಗೆ ಪತ್ರಿಕೆಗೆ ಮಾಹಿತಿ ನೀಡಿ, ಸಭೆಯ ಅಧ್ಯಕ್ಷತೆಯನ್ನು ರೈತ ಸಂಘದ ಸಂಸ್ಥಾಪಕ ಅಧ್ಯಕ್ಷ ಸೋಮಗುದ್ದುರಂಗಸ್ವಾಮಿ ವಹಿಸಲಿದ್ದು, ರೈತರ ಹೋರಾಟದ ಬಗ್ಗೆ ಮಾರ್ಗದರ್ಶನ ನೀಡುವರು. ರೈತ ಸಂಘವನ್ನು ಸಂಘಟನಾತ್ಮಕವಾಗಿ ಬಲಗೊಳಿಸಲು ನಿರ್ಧರಿಸಲಾಗಿದ್ದು, ರಂಗಸ್ವಾಮಿಯವರ ಮಾರ್ಗದರ್ಶನದಂತೆ ರೈತ ಸಂಘ ಮುನ್ನಡೆಯಲಿದೆ ಎಂದರು.
ಈಗಾಗಲೇ ಗ್ರಾಮೀಣ ಹಾಗೂ ನಗರ ಪ್ರದೇಶದ ವ್ಯಾಪ್ತಿಯ ರೈತಮುಖಂಡರಿಗೆ ಸಭೆಯ ಬಗ್ಗೆ ಮಾಹಿತಿ ನೀಡಲಾಗಿದೆ. ಎಲ್ಲರೂ ಸಭೆಗೆ ತಪ್ಪದೆ ಆಗಮಿಸಿ ತಮ್ಮ ಸಲಹೆ ಸೂಚನೆಗಳನ್ನು ನೀಡಿ ರೈತ ಸಂಘಟನೆಯನ್ನು ಬಲಗೊಳಿಸುವಂತೆ ಮನವಿ ಮಾಡಿದ್ದಾರೆ.

