Ad imageAd image

ಚಿತ್ರದುರ್ಗ ಜಿಲ್ಲೆಗೆ ಮತ್ತೊಂದು ಜವಾಹರ್ ನವೋದಯ ಶಾಲೆ ಮಂಜೂರಾತಿಗೆ ಪ್ರಸ್ತಾವನೆ:ಸಂಸದ ಕಾರಜೋಳ

News Desk

ಚಂದ್ರವಳ್ಳಿ ನ್ಯೂಸ್, ನವದೆಹಲಿ:
    ದೆಹಲಿಯಲ್ಲಿಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ರವರನ್ನು ಭೇಟಿ ಮಾಡಿದ ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳರವರು ಚಿತ್ರದುರ್ಗಕ್ಕೆ ಕೇಂದ್ರೀಯಾ ವಿದ್ಯಾಶಾಲೆ ಮಂಜೂರು ಮಾಡಿದ್ದಕ್ಕೆ ಅಭಿನಂದನೆ ಸಲ್ಲಿಸಿದರು. ಇದರ ಜೊತೆಗೆ ಚಿತ್ರದುರ್ಗ ಜಿಲ್ಲೆಗೆ ಇನ್ನೊಂದು ಜವಾಹರ್ ನವೋದಯ ವಿದ್ಯಾಶಾಲೆ ಮಂಜೂರು ಮಾಡುವಂತೆ ಪ್ರಸ್ತಾವನೆ ಸಲ್ಲಿಸಿದರು.

 ಜಿಲ್ಲೆಯಲ್ಲಿ ಈಗಾಗಲೇ 1987 ರಿಂದ ಹಿರಿಯೂರು ತಾಲ್ಲೂಕಿನ ಉಡುವಳ್ಳಿಯಲ್ಲಿ ಜವಾಹರ್ ನವೋದಯ ವಿದ್ಯಾಶಾಲೆ ಕಾರ್ಯನಿರ್ವಹಿಸುತ್ತಿದೆ. ಆದರೆ, ಚಿತ್ರದುರ್ಗ ಜಿಲ್ಲೆ ಶೈಕ್ಷಣಿಕವಾಗಿ ಅತಿ ಹಿಂದುಳಿದಿದ್ದು, ಇಲ್ಲಿನ ಜನರ ಆರ್ಥಿಕ ಜೀವನ ಮಟ್ಟ ತೃಪ್ತಿದಾಯಕವಾಗಿಲ್ಲ. ಇಲ್ಲಿ ಕೃಷಿಕರ ಬದುಕು ಕೂಡ ಮಳೆಯನ್ನೇ ನೆಚ್ಚಿಕೊಂಡಿರುವುದರಿಂದ ಅತ್ಯಂತ ಶೋಚನೀಯ ಸ್ಥಿತಿಯಲ್ಲಿದೆ.

ಅತಿ ಹೆಚ್ಚು ಪರಿಶಿಷ್ಟ ಜಾತಿ /ಪಂಗಡ ಹಾಗೂ ಯಾದವ ಜನಾಂಗದವರು ವಾಸಿಸುತ್ತಿರುವ ಚಿತ್ರದುರ್ಗ ಜಿಲ್ಲೆಯಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸುವುದು ಈ ಜನಾಂಗದವರಿಗೆ ಕಷ್ಟವಾಗಿದೆ. ವರ್ಷಪೂರ್ತಿ ದುಡಿಯಲು ಕೈಯಲ್ಲಿ ಕೆಲಸವಿದಲ್ಲದೇ ವರ್ಷದಲ್ಲಿ ನಾಲ್ಕೈದು ತಿಂಗಳು ಮಲೆನಾಡು ಭಾಗಕ್ಕೆ ಈ ಭಾಗದ ಜನರು ಕೆಲಸ ಅರಸಿಕೊಂಡು ಗುಳೆ ಹೋಗುತ್ತಾರೆ. ಇಂತಹ ಶೋಚನೀಯ ಸ್ಥಿತಿಯಲ್ಲಿರುವ ಜನರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸಲು ಸಾಧ್ಯವಾಗದಂತಾಗಿದೆ.

  ಈ ಹಿನ್ನೆಲೆಯಲ್ಲಿ ಚಿತ್ರದುರ್ಗ ಜಿಲ್ಲೆಗೆ ಇನ್ನೊಂದು ನವೋದಯ ವಿದ್ಯಾಶಾಲೆ ಮಂಜೂರು ಮಾಡಿಕೊಡುವಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ರವರಿಗೆ ಸಂಸದ ಗೊಂವಿಂದ ಕಾರಜೋಳ ಪ್ರಸ್ತಾವನೆ ಸಲ್ಲಿಸಿದ್ದಾರೆ. ಪ್ರಸ್ತಾವನೆ ಸ್ವೀಕರಿಸಿದ ಸಚಿವರು ಸಕರಾತ್ಮಕ ನಿಲುವು ತಗೆದುಕೊಳ್ಳುವ ಭರವಸೆ ನೀಡಿದ್ದಾರೆ ಎಂದು ಸಂಸದ ಕಾರಜೋಳ ತಿಳಿಸಿದ್ದಾರೆ. 

 

 

- Advertisement -  - Advertisement - 
Share This Article
error: Content is protected !!
";