ಸ್ವಯಂ ಸೇವಾ ಗೃಹರಕ್ಷಕರ ಹುದ್ದೆಗೆ ಅರ್ಜಿ ಆಹ್ವಾನ

News Desk

ಚಂದ್ರವಳ್ಳಿ ನ್ಯೂಸ್, ತುಮಕೂರು:
ಜಿಲ್ಲಾ ಗೃಹ ರಕ್ಷಕದಳದ ವಿವಿಧ ಘಟಕಗಳಲ್ಲಿ ಖಾಲಿ ಇರುವ ೨೫೫ ಸ್ವಯಂ ಸೇವಾ ಗೃಹರಕ್ಷಕರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

      ಅರ್ಜಿದಾರರು ಜಿಲ್ಲಾ ಗೃಹರಕ್ಷಕದಳದ ಕಚೇರಿಯಿಂದ ಡಿಸೆಂಬರ್ ೨೪ರೊಳಗೆ ನಿಗಧಿತ ಅರ್ಜಿ ನಮೂನೆಯನ್ನು ಪಡೆದು ಭರ್ತಿ ಮಾಡಿದ ಅರ್ಜಿಯನ್ನು ೨೦೨೫ರ ಜನವರಿ ೨ರೊಳಗಾಗಿ ಜಿಲ್ಲಾ ಗೃಹರಕ್ಷಕದಳ ಕಚೇರಿಗೆ ಖುದ್ದಾಗಿ ಸಲ್ಲಿಸಬಹುದಾಗಿದೆ.

        ಗೃಹರಕ್ಷಕ ಹುದ್ದೆಯು ಖಾಯಂ ನೌಕರಿಯಾಗಿರುವುದಿಲ್ಲ. ಯಾವುದೇ ರೀತಿಯ ಮಾಸಿಕ ಸಂಬಳ ಹಾಗೂ ವಿಶೇಷ ಭತ್ಯೆಗಳನ್ನು ನೀಡಲು ಅವಕಾಶವಿರುವುದಿಲ್ಲ. ತುರ್ತು ಸಂದರ್ಭದಲ್ಲಿ ಕರ್ತವ್ಯ ಮತ್ತು ಚುನಾವಣೆ ಕರ್ತವ್ಯ ನಿರ್ವಹಿಸಿದ ದಿನದಂದು ಗೌರವ ಧನ ಸೌಲಭ್ಯವನ್ನು ನೀಡಲಾಗುವುದು. ಗೌರವಧನವನ್ನು ಬ್ಯಾಂಕ್ ಉಳಿತಾಯ ಖಾತೆಗೆ ನೇರವಾಗಿ ಜಮಾ ಮಾಡಲಾಗುವುದು. ಪ್ರತಿ ಮಾಹೆಯಲ್ಲಿ ೪ ಕವಾಯತುಗಳು, ವಾರದಲ್ಲಿ ಒಂದು ದಿನದಂತೆ ನಡೆಸಲಾಗುವುದು.

        ಅಭ್ಯರ್ಥಿಗಳು ೧೯ ರಿಂದ ೪೦ ವರ್ಷದೊಳಗಿನವರಾಗಿರಬೇಕು.  ಆಸಕ್ತ ಅಭ್ಯರ್ಥಿಗಳು ತಮ್ಮ ಅರ್ಜಿಯೊಂದಿಗೆ ೧೦ನೇ ತರಗತಿ ಅಂಕಪಟ್ಟಿ, ಜನ್ಮ ದಿನಾಂಕ ದೃಢೀಕರಣ (ಟಿ.ಸಿ.), ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ವೋಟರ್ ಐ.ಡಿ, ರೇಷನ್ ಕಾರ್ಡ್, ೨ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ, ದೈಹಿಕ ಸದೃಢತಾ ಪ್ರಮಾಣ ಪತ್ರ ಲಗತ್ತಿಸಬೇಕು.

        ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಗೃಹರಕ್ಷಕದಳ ಕಛೇರಿ ಅಥವಾ ದೂರವಾಣಿ ಸಂಖ್ಯೆ: ೦೮೧೬-೨೦೦೯೧೧೬ನ್ನು  ಸಂಪರ್ಕಿಸಬಹುದಾಗಿದೆ ಎಂದು ಗೃಹರಕ್ಷಕದಳದ ಜಿಲ್ಲಾ ಸಮಾದೇಷ್ಟರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

- Advertisement -  - Advertisement - 
Share This Article
error: Content is protected !!
";