Ad imageAd image

ಗ್ರಾಪಂ ಅಧ್ಯಕ್ಷೆ ಜ್ಯೋತಿ, ಉಪಾಧ್ಯಕ್ಷೆಯಾಗಿ ಸುಮಂಗಳ ಅವಿರೋಧ ಆಯ್ಕೆ

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ತಾಲ್ಲೂಕಿನ ಕೊನಘಟ್ಟ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ
  ಹಾಗೂ ಉಪಾಧ್ಯಕ್ಷ ಚುನಾವಣೆ ನೆಡೆದಿದ್ದು ಅಧ್ಯಕ್ಷರಾಗಿ ಕಾಂಗ್ರೇಸ್ ಪಕ್ಷದ ಬೆಂಬಲಿತ ಸದಸ್ಯೆ  ಕೊನಘಟ್ಟ ಗ್ರಾಮದ ಜ್ಯೋತಿ ರಮೇಶ್ ಹಾಗು ಉಪಾಧ್ಯಕ್ಷರಾಗಿ ಹಮಾಮ್ ಗ್ರಾಮದ ಸುಮಂಗಳ ವೆಂಕಟೇಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

  ಕೊನಘಟ್ಟ ಗ್ರಾಮದ  ಸದಸ್ಯ ರೊಬ್ಬರಿಗೆ 25 ವರ್ಷಗಳ ನಂತರ ಗ್ರಾಮಪಂಚಾಯಿತಿ ಅಧ್ಯಕ್ಷ ಸ್ಥಾನ ದೊರಕಿದ ಕಾರಣ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ.

ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ತಮ್ಮ ಆಯ್ಕೆ ಬಗ್ಗೆ ಸಂತಸ ವ್ಯಕ್ತಪಡಿಸುತ್ತಾ ತಮ್ಮ ಗೆಲುವಿಗೆ ಕಾರಣಕರ್ತರಾದ ಗ್ರಾಮ ಪಂಚಾಯಿತಿಯ ಎಲ್ಲಾ ಸದಸ್ಯರಿಗೂ ಹಾಗೂ ನಾಗರೀಕರಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ವಿಶೇಷವಾಗಿ ಕಾಂಗ್ರೆಸ್ ಪಕ್ಷದ ರಾಜ್ಯ ಮುಖಂಡ ಕೆಪಿಸಿಸಿ ಸದಸ್ಯ ಲಕ್ಷ್ಮೀಪತಿ ಯವರಿಗೆ ವಿಶೇಷ ಧನ್ಯವಾದಗಳನ್ನು ಹೇಳಿದ್ದಾರೆ. 

ಈ ಸಂಧರ್ಭದಲ್ಲಿ ನೂತನ ಅಧ್ಯಕ್ಷೆ ಜ್ಯೋತಿ ರಮೇಶ್ ಮಾತನಾಡಿ ಎಲ್ಲಾ ಸದಸ್ಯರೊಂದಿಗೆ  ಬೆರೆತು ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ಗ್ರಾಮಗಳಲ್ಲಿ  ಮೂಲಭೂತ ಸೌಲಭ್ಯ ಗಳ ಬಗ್ಗೆ ಗಮನಹರಿಸಿ ಕುಡಿಯುವ ನೀರು ಚರಂಡಿ  ಶಿಕ್ಷಣ ಇವುಗಳ ಬಗ್ಗೆ ಹೆಚ್ಚು ಒತ್ತು ನೀಡಿ ಪಂಚಾಯಿತಿಯನ್ನು ಮೇಲ್ದರ್ಜೆಗೇರಿಸಲು‌ಎಲ್ಲಾ ರೀತಿಯಲ್ಲಿ ಶ್ರಮಿಸುವುದಾಗಿ ಹೇಳಿದ್ದಾರೆ.

ಈ ಸಂದರ್ಭದಲ್ಲಿ ರಾಜ್ಯ ಕೆಪಿಸಿಸಿ ಸದಸ್ಯ ಲಕ್ಷ್ಮೀಪತಿ ಗ್ರಾ ಪಂ  ಸದಸ್ಯರಾದ ಮಂಜುನಾಥ್.  ಬಾಲರಾಜ್, ಆರಾಧ್ಯ  ನಾಗೇಶ್ ಟಿ ರಾಮಾಂಜಿನಪ್ಪ, ಶ್ರೀನಿವಾಸ್ ಮೂರ್ತಿ ಸಿದ್ದಲಿಂಗಪ್ಪ ಸೋಮಶೇಖರ್ ಕೋಡಿಹಳ್ಳಿ ಅಶ್ವತಪ್ಪ, ಮಂಜುನಾಥ್ ಚೈತ್ರ ಗಾಯಿತ್ರಮ್ಮ, ಗೋಪಿ ,ಪ್ರಕಾಶ್ ನಂಜಮರಿಯಪ್ಪ,‌ಲಿಂಗನಹಳ್ಳಿ ಎಂ ಪಿ ಸಿ ಎಸ್ ಅಧ್ಯಕ್ಷ K.M ಮಂಜುನಾಥ್  ರಾಜ್ಯದ ವಹ್ನಿಕುಲ ಕ್ಷತ್ರಿಯ ಸಂಘದ ನಿರ್ದೇಶಕರು ಮಾಜಿ ಗ್ರಾಮ ಪಂಚಾಯಿತಿ ಸದಸ್ಯರು ಹಾಜರಿದ್ದರು.

- Advertisement -  - Advertisement - 
Share This Article
error: Content is protected !!
";