Ad imageAd image

ಪಕ್ಷದ ತಮ್ಮ ನಾಯಕರ ಅಕ್ರಮಗಳಿಗೆ ಸದಾ ರಕ್ಷಣೆ ನೀಡುವ ಕಾಂಗ್ರೆಸ್‌

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಭ್ರಷ್ಟರಿಂದಲೇ ಕೂಡಿರುವ ಕಾಂಗ್ರೆಸ್‌ಪಕ್ಷ ತಮ್ಮ ನಾಯಕರ ಅಕ್ರಮಗಳಿಗೆ ಸದಾ ರಕ್ಷಣೆ ಒದಗಿಸುತ್ತದೆ ಎಂದು ಜೆಡಿಎಸ್ ಗಂಭೀರ ಆರೋಪ ಮಾಡಿದೆ.

ಭೂಗಳ್ಳ ಮಾಜಿ ಸ್ಪೀಕರ್‌ರಮೇಶ್‌ಕುಮಾರ್‌ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಜಿಂಗಲಕುಂಟೆ ಗ್ರಾಮದಲ್ಲಿ  61 ಎಕರೆ 39 ಗುಂಟೆ ಅರಣ್ಯ ಒತ್ತವರಿ ಮಾಡಿದ್ದಾರೆ. ಪ್ರಕರಣ ಸಂಬಂಧ ಇಂದು (20-12-2024 ಶುಕ್ರವಾರ) ಜಂಟಿ ಸರ್ವೆ ಕಾರ್ಯ ನಡೆಯಬೇಕಿತ್ತು.

ಆದರೆ ಉಪವಲಯ ಅರಣ್ಯ ಸಂರಕ್ಷಣಾಧಿಕಾರಿ ಜಂಟಿ ಸರ್ವೆ ಕಾರ್ಯದಲ್ಲಿ ಭಾಗವಹಿಸಲು ಅಧಿಕಾರಿಗಳಿಗೆ ನೀಡಿದ್ದ ನೋಟಿಸ್‌ಅನ್ನು ಪರಿಗಣಿಸದಂತೆ ತಡೆದು ಜಿಲ್ಲಾಧಿಕಾರಿ ರಾತ್ರೋರಾತ್ರಿ ಪತ್ರ ಬರೆದಿದ್ದಾರೆ.

ಜಂಟಿ ಸರ್ವೆ ನಡೆಸುವಂತೆ ನ್ಯಾಯಾಲಯ ಆದೇಶಿಸಿದ ಜೊತೆಗೆ ಕೇಂದ್ರ ಸರ್ಕಾರ ಕೂಡ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದ್ದರೂ, ಅರಣ್ಯ ಭೂಮಿ ಕಬಳಿಸಿರುವ ರಮೇಶ್‌ಕುಮಾರ್‌ಬೆಂಬಲಕ್ಕೆ ಭ್ರಷ್ಟ ಕಾಂಗ್ರೆಸ್‌ಸರ್ಕಾರ ಮತ್ತು ಅರಣ್ಯ ಸಚಿವ ಈಶ್ವರ್ ಖಂಡ್ರೆ ಬಂಡೆಯಂತೆ ನಿಂತಿದ್ದಾರೆ. 

ಬಡವರಿಗೆ ಒಂದು ನ್ಯಾಯ , ಕಾಂಗ್ರೆಸ್‌ನಾಯಕರಿಗೆ ಒಂದು ನ್ಯಾಯ ? ಇದು ಕರ್ನಾಟಕ ಕಾಂಗ್ರೆಸ್ ಸರ್ಕಾರದ ಅರಣ್ಯ ನ್ಯಾಯ ! ಎಂದು ಜೆಡಿಎಸ್ ಟೀಕಿಸಿದೆ.

 

- Advertisement -  - Advertisement - 
Share This Article
error: Content is protected !!
";