ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದಲ್ಲಿ ಅಕ್ಷರಶಃ ತುರ್ತು ಪರಿಸ್ಥಿತಿ ಹೇರಲಾಗಿದೆ ಎಂದು ಬಿಜೆಪಿ ಆತಂಕ ವ್ಯಕ್ತಪಡಿಸಿದೆ. ಪರಿಷತ್ ಸದಸ್ಯರನ್ನು ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲಿ ಸುವರ್ಣ ಸೌಧದಲ್ಲಿಯೇ ಅಕ್ರಮವಾಗಿ ಬಂಧಿಸಲಾಯಿತು. ಬಂಧಿತರಿಗೆ ಯಾವುದೇ ರೀತಿಯಲ್ಲೂ ಕಾನೂನಿನ ನೆರವು ಪಡೆಯುವ ಅವಕಾಶಗಳನ್ನು ನಿರ್ಬಂಧಿಸಲಾಯಿತು. ಪೊಲೀಸ್ ಠಾಣೆಯಲ್ಲಿ ಶಾಸಕರ ದೂರನ್ನು ಸ್ವೀಕರಿಸಲು ವಿಳಂಬ ಧೋರಣೆ ಅನುಸರಿಸಲಾಯಿತು.
ಯಾವ ಪ್ರಕರಣ ದಾಖಲಿಸಲಾಗಿದೆ ಎಂದು ಬಂಧಿತ ಶಾಸಕರಿಗೆ ಮಾಹಿತಿ ನೀಡಿಲ್ಲ. ಶಾಸಕರನ್ನು ರಾತ್ರೋರಾತ್ರಿ ಬಲವಂತವಾಗಿ ಠಾಣೆಯಿಂದ ಹೊರಗೆ ಕರೆದುಕೊಂಡು ಬರಲಾಗಿದೆ.
ಬಂಧಿತ ಶಾಸಕರ ತಲೆಗೆ ಉದ್ದೇಶಪೂರ್ವಕವಾಗಿ ಮಾರಣಾಂತಿಕವಾಗಿ ಹಲ್ಲೆ ನಡೆಸಲಾಗಿದೆ. ಬಂಧಿತರನ್ನು ಪೊಲೀಸ್ ಜೀಪಿನಲ್ಲಿ ರಾತ್ರಿಯಿಡೀ ಸುತ್ತಿಸಲಾಗಿದೆ. ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭವಾದ ಮಾಧ್ಯಮವನ್ನು ತಡೆಯಲಾಗಿದೆ ಎಂದು ಬಿಜೆಪಿ ವಾಗ್ದಾಳಿ ಮಾಡಿದೆ.