ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಪಂಚಮಸಾಲಿಗಳ ಮೇಲೆ ಲಾಠಿ ಪ್ರಹಾರ! ಪೊಲೀಸರಿಗೆ ಬಹುಮಾನವಾಗಿ 10 ಸಾವಿರ!! ಹಿಂದೂ ವಿರೋಧಿ ಕರ್ನಾಟಕ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ ಎಂದು ಜೆಡಿಎಸ್ ಹರಿಹಾಯ್ದಿದೆ.
ಬೆಳಗಾವಿಯ ಸುವರ್ಣಸೌಧದ ಬಳಿ ಮೀಸಲಾತಿಗಾಗಿ ನಡೆಯುತ್ತಿದ್ದ ಪಂಚಮಸಾಲಿಗಳ ಹೋರಾಟವನ್ನು ಹತ್ತಿಕ್ಕಲು ಕಾಂಗ್ರೆಸ್ ಸರ್ಕಾರ ಲಾಠಿಚಾರ್ಚ್ ಮಾಡಿಸಿ, ಸರ್ವಾಧಿಕಾರಿಯಂತೆ ವರ್ತಿಸಿತ್ತು.
ಪಂಚಮಸಾಲಿ ಹೋರಾಟಗಾರರನ್ನು ಅಟ್ಟಾಡಿಸಿ ಹೊಡೆದು ರಕ್ತ ಹರಿಸಿದ್ದ ಪೊಲೀಸರಿಗೆ ಬಹುಮಾನ ಘೋಷಿಸಿದೆ ಸಿದ್ದರಾಮಯ್ಯ ಅವರ ಹಿಟ್ಲರ್ ಸರ್ಕಾರ!
ಪ್ರತಿಭಟನಾಕಾರರ ಮೇಲೆ ಭರ್ಜರಿಯಾಗಿ ಲಾಠಿ ಬೀಸಿದ್ದಕ್ಕೆ ಬೆಳಗಾವಿ ನಗರದ ಪೊಲೀಸ್ ಇನ್ಸ್ ಪೆಕ್ಟರ್ ಬಿ.ಆರ್.ಗಡ್ಡೇಕರ ಅವರಿಗೆ ಉತ್ತಮ ಕರ್ತವ್ಯ ನಿರ್ವಹಣೆ ಹೆಸರಲ್ಲಿ ₹10,000 ಬಹುಮಾನ ನೀಡಲಾಗಿದೆ ಎಂದು ಜೆಡಿಎಸ್ ಆಕ್ರೋಶ ವ್ಯಕ್ತಪಡಿಸಿದೆ.
ಆಕಸ್ಮಿಕ ಗೃಹಮಂತ್ರಿಗಳೇ ಡಾ.ಜಿ.ಪರಮೇಶ್ವರ್ ಅವರೇ ಪಂಚಮಸಾಲಿಗಳ ಮೇಲೆ ಅಮಾನುಷವಾಗಿ ಲಾಠಿಚಾರ್ಚ್ ಮಾಡಿಸಿದಿರಿ.ಜತೆಗೆ ಕಾಂಗ್ರೆಸ್‌ಬೆಂಬಲಿತ ಗೂಂಡಾಗಳು ಸುವರ್ಣಸೌಧದೊಳಕ್ಕೆ ನುಗ್ಗಿ ಓರ್ವ ವಿಧಾನ ಪರಿಷತ್ ಸದಸ್ಯನ ಕೊಲೆಗೆ ಯತ್ನಿಸಿದ್ದಾರೆ.
ಇದು ನಿಮ್ಮ ಸರ್ಕಾರದ ಪ್ರಾಯೋಜಿತ ಕಾರ್ಯಕ್ರಮವೋ? ಅಥವಾ ನಿಮ್ಮ ಇಲಾಖೆಯ ಪೊಲೀಸರ ಭದ್ರತಾ ವೈಫಲ್ಯವೋ? ಯಾರನ್ನು ಮೆಚ್ವಿಸಲು, ಖುಷಿಪಡಿಸಲು ಪೊಲೀಸರಿಗೆ ಬಹುಮಾನ? ನೀಡಿದ್ದೀರಿ ಎಂದು ಜೆಡಿಎಸ್ ಖಾರವಾಗಿ ಪ್ರಶ್ನಿಸಿದೆ.