ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ನಗರದ ಚಂದ್ರವಳ್ಳಿಯಲ್ಲಿ ಶ್ರೀ ಹುಲೆಗೊಂದಿ ಸಿದ್ದೇಶ್ವರ ಸ್ವಾಮಿಯ ಕಡೆ ಕಾರ್ತಿಕ ಮಹೋತ್ಸವ ಪ್ರಯುಕ್ತ ಭಾನುವಾರ ಮಹಾಮಂಗಳಾರತಿ ಜರುಗಿತು. ಶ್ರೀ ಬಸವಪ್ರಭುಸ್ವಾಮಿಜಿಯವರು ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ಬಡಿಸಿ ಚಾಲನೆ ನೀಡಿದರು.
ಶ್ರೀ ಕ್ಷೇತ್ರದಲ್ಲಿ ಅನ್ನದಾತೋಹ ಮಾಡುತ್ತಿರುವುದನ್ನು ಸ್ವಾಗತಿಸಿದರು. ಎರಡು ಗಂಟೆಗೆ ಅಡ್ಡ ಪಲ್ಲಕ್ಕಿಯಲ್ಲಿ ಶ್ರೀ ಹುಲಿಗಂಧಿ ಸಿದ್ದೇಶ್ವರ ಸ್ವಾಮಿಯ ರಥದೊಂದಿಗೆ ಜನಪದ ಕಲಾ ಮೇಳ ವೀರಗಾಸೆ, ಭಕ್ತಾದಿಗಳು ಸಹ ಹೆಜ್ಜೆ ಹಾಕುತ್ತಾ ಸಾಗಿದರು.
ಸಂಜೆ 6 ಗಂಟೆಗೆ ಡಾ.ಶ್ರೀ ಬಸವ ಕುಮಾರಸ್ವಾಮಿಜಿ ಯವರು ಆಡಳಿತ ಮಂಡಳಿ ಸದಸ್ಯರು ಕಾರ್ತಿಕ ಮಹೋತ್ಸವದ ದೀಪ ಬೆಳಗುವುದರ ಮುಖಾಂತರ ಚಾಲನೆ ನೀಡಿ ಶ್ರೀ ಕ್ಷೇತ್ರದಲ್ಲಿ ಅಭಿವೃದ್ಧಿ ಆಗುತ್ತಿರುವುದನ್ನು ನೋಡಿ ಬಹಳ ಸಂತೋಷವಾಯಿತು. ಶ್ರೀ ಕ್ಷೇತ್ರದ ಮಹಿಮೆಯ ಬಗ್ಗೆ ಶ್ರೀ ಭಕ್ತರು ಅನೇಕ ಬಾರಿ ನನಗೆ ತಿಳಿಸಿದರು. ಶ್ರೀಮಠದಿಂದ ನಮ್ಮ ಬೆಂಬಲ ಯಾವಾಗಲೂ ಇರುತ್ತದೆ ಎಂದು ತಿಳಿಸಿದರು.
ಮಾಜಿ ಶಾಸಕ ಎಸ್.ಕೆ.ಬಸವರಾಜನ್ ಮಾತನಾಡಿ ಶ್ರೀ ಕ್ಷೇತ್ರದಲ್ಲಿ ಐತಿಹಾಸಿಕ ಸ್ಥಳದ ಜೊತೆಗೆ ಪ್ರವಾಸೋದ್ಯಮ ಸ್ಥಳವಾಗಿದೆ. ಸ್ವಚ್ಛತೆ ಮತ್ತು ಪರಿಸರವನ್ನು ಕಾಪಾಡುವುದರಲ್ಲಿ ಯಶಸ್ವಿಯಾಗಿದ್ದಾರೆ ಎಂದು ಶ್ಲಾಘೀಸಿದರು.
ಸಂದರ್ಭದಲ್ಲಿ ಅಧ್ಯಕ್ಷ ಬಿಎಸ್ ಸಿದ್ದಪ್ಪ, ಉಪಾಧ್ಯಕ್ಷ ಬಿಎಸ್ ಮುರುಗೇಶ್, ಕೆ ಎನ್ ಶಿವಕುಮಾರ್, ಅರ್ಚಕರು, ಡಾ. ಎಸ್ ಬಸವರಾಜ್ ಐಎಎಸ್, ಡಾ. ಎಚ್ ನಾಗರಾಜ್ ಕೆಎಸ್, ಡಾ. ಜಗದೀಶ್, ಎನ್ ಪ್ರಸನ್ನ ಕುಮಾರ್, ಎಚ್ ಚಂದ್ರಶೇಖರ್, ಗಿರೀಶ್ ಉಪಸ್ಥಿತರಿದ್ದರು.