ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ನಗರದ ಬಸವೇಶ್ವರ ವಧು-ವರರ ಮಾಹಿತಿ ಕೇಂದ್ರದ ವತಿಯಿಂದ ಸರ್ವಧರ್ಮೀಯರ ವಧು ವರರ ರಾಜ್ಯಮಟ್ಟದ ಸಮಾವೇಶವನ್ನು ದಿನಾಂಕ 29.12.2024 ರ ಭಾನುವಾರ ಬೆಳಗ್ಗೆ 11 ಗಂಟೆಗೆ ನಗರದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದಲ್ಲಿ ಆಯೋಜಿಸಿಲಾಗಿದೆ ಎಂದು ವ್ಯವಸ್ಥಾಪಕ ಜೆ.ಎಂ .ಜಂಬಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಂದಿನ ಸಮಾವೇಶದ ಅಧ್ಯಕ್ಷತೆ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಆಡಳಿತ ಮಂಡಳಿಯ ಅಧ್ಯಕ್ಷ ಶಿವಯೋಗಿ. ಸಿ.ಕಳಸದ್ ವಹಿಸಲಿದ್ದು, ಸಾನ್ನಿಧ್ಯವನ್ನು ಆಡಳಿತ ಮಂಡಳಿಯ ಸದಸ್ಯ ಡಾ. ಬಸವಕುಮಾರ ಮಹಾಸ್ವಾಮಿಗಳು ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಆಡಳಿತ ಮಂಡಳಿಯ ಮತ್ತೊರ್ವ ಸದಸ್ಯ ಎಸ್.ಎನ್. ಚಂದ್ರಶೇಖರ್ ಭಾಗವಹಿಸಲಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9448011825, 9980658625 ಗೆ ಸಂಪರ್ಕಿಸಲು ಕೋರಿದ್ದಾರೆ.
ಈ ಸಮಾವೇಶದಲ್ಲಿ ರೈತರು, ಪದವೀಧರ ರೈತರು, ಪದವೀಧರ ವ್ಯಾಪಾರಸ್ಥರು, ಇಂಜಿನಿಯರು, ವೈದ್ಯರು, ವಕೀಲರು, ಸ್ನಾತಕೋತ್ತರರು, ಎಂಬಿಎ, ಎಂಸಿಎ, ಎಂಎ, ಎಂಎಸ್ಸಿ, ಎಂಕಾಂ, ಎಂಟೆಕ್ ಪದವೀಧರರು ಮತ್ತು ಖಾಸಗಿ ವೃತ್ತಿಪರರು ಹಾಗೂ ಮರು ವಿವಾಹ ಮತ್ತು ಅಂತರ ಜಾತಿಯ ವಿವಾಹವಾಗಲು ಇಚ್ಛಿಸುವಂತಹ ವಧು ವರರು ಭಾಗವಹಿಸಬಹುದೆಂದು ತಿಳಿಸಿದ್ದಾರೆ.