ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬಿಜೆಪಿಯ ವಿಧಾನ ಪರಿಷತ್‌ಸದಸ್ಯ ಸಿ.ಟಿ ರವಿ ಅವರನ್ನು ನಕಲಿ ಎನ್ಕೌಂಟರ್‌ಮಾಡಲು ಸರ್ವಾಧಿಕಾರಿ ಸಿದ್ದರಾಮಯ್ಯ ಸರ್ಕಾರ ಹುನ್ನಾರ ಮಾಡಿತ್ತು ಎಂದು ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ ಅವರು ಕಿಡಿಕಾರಿದ್ದಾರೆಂದು ಬಿಜೆಪಿ ತಿಳಿಸಿದೆ.
ಸಿ.ಟಿ. ರವಿ ಅವರನ್ನು ಗದ್ದೆ, ಕ್ವಾರಿ, ಕಾಡು ಅಂತ ಸುತ್ತಾಡಿಸಿದ ಬೆಳಗಾವಿ ಆಯುಕ್ತರಿಗೆ, ಅವರ ತಂಡಕ್ಕೆ ಹಾಗೂ ಕರ್ನಾಟಕ ಕಾಂಗ್ರೆಸ್ ಸರ್ಕಾರಕ್ಕೆ ತಕ್ಕ ಪಾಠ ಕಲಿಸುವ ನಿಟ್ಟಿನಲ್ಲಿ ಬಿಜೆಪಿ ಹೋರಾಟ ನಡೆಸಲಿದೆ ಎಂದು ಪ್ರಲ್ಹಾದ್‌ಜೋಶಿ ಅವರು ಹೇಳಿದ್ದಾರೆ.