ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದ 43 ಇಲಾಖೆಗಳಲ್ಲಿ 2.76 ಲಕ್ಷಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇದ್ದರೂ ಭ್ರಷ್ಟ ಕರ್ನಾಟಕ ಕಾಂಗ್ರೆಸ್ ಸರ್ಕಾರ ಕೈಕಟ್ಟಿಕೊಂಡು ಕುಳಿತಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಜೆಡಿಎಸ್ ಹರಿಹಾಯ್ದಿದೆ.
ಕಾಂಗ್ರೆಸ್‌ನ ಅವೈಜ್ಞಾನಿಕ ಗ್ಯಾರಂಟಿಗಳಿಂದ ಆರ್ಥಿಕ ತುರ್ತು ಪರಿಸ್ಥಿತಿಗೆ ಸಿಲುಕಿರುವ ಸರ್ಕಾರ ಹೊಸ ಉದ್ಯೋಗಗಳನ್ನು ಸೃಷ್ಟಿಸಲು ಹೆಣಗಾಡುತ್ತಿದೆ. ಕೆಲಸಕ್ಕಾಗಿ ಅಲೆಯುತ್ತಿರುವ ನಿರುದ್ಯೋಗಿಗಳು ಹಾಗೂ ಉದ್ಯೋಗಾಕಾಂಕ್ಷಿಗಳ ಕಷ್ಟ ಕಾಣಿಸುತ್ತಿಲ್ಲವೇ ? ಖಾಲಿ ಇರುವ ಲಕ್ಷಕ್ಕೂ ಹೆಚ್ಚು ಸರ್ಕಾರಿ ಹುದ್ದೆಗಳನ್ನಾದರೂ ಭರ್ತಿ ಮಾಡಿ ಎಂದು ಜೆಡಿಎಸ್ ಆಗ್ರಹ ಮಾಡಿದೆ.
ಸರ್ಕಾರಿ ಇಲಾಖೆಗಳಲ್ಲಿ ಲಂಚ, ಹಗರಣಗಳು ಹಾಗೂ ದ್ವೇಷ ರಾಜಕಾರಣದಲ್ಲೇ ಮುಳುಗಿರುವ ಸಿದ್ದರಾಮಯ್ಯ ಅವರೇ ಬೊಗಳೆ ಭಾಷಣಗಳಿಂದ ನಿರುದ್ಯೋಗಿಗಳ ಹೊಟ್ಟೆ ತುಂಬುವುದಿಲ್ಲ. ರಾಜ್ಯದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ.
ಎಲ್ಲಾ ವಯೋಮಾನದವರು ನಿರುದ್ಯೋಗದಿಂದ ಬೀದಿಗೆ ಬೀಳುವಂತಾಗಿದೆ. ಹೌದು ಡಿಸಿಎಂ ಡಿ.ಕೆ ಶಿವಕುಮಾರ್ ಅಂದು ನೀವು ಹೇಳಿದ್ದ ಮಾತನ್ನು ನಿಜವಾಗಿಸಿದ ಕಾಂಗ್ರೆಸ್‌ಆಡಳಿತ ಎಂದು ಜೆಡಿಎಸ್ ವ್ಯಂಗ್ಯವಾಡಿದೆ.