ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಲೋಕಸಭಾ ಕಲಾಪದಲ್ಲಿ ಕೇಂದ್ರ ಕೃಷಿ ಸಚಿವ ಅಮಿತ್ ಶಾ ಅಂಬೇಡ್ಕರ್ ಕುರಿತು ಆಡಿದ ಮಾತುಗಳನ್ನು ವಾಪಸ್ ಪಡೆಯಬೇಕು. ಕೇಂದ್ರ ಸರ್ಕಾರ ಅಮಿತ್ ಶಾರವರನ್ನು ಸಂಪುಟದಿಂದ ಕೈಬಿಡಬೇಕು. ಚುನಾಯಿತ ಜನಪ್ರತಿನಿಧಿಗಳಿಗೆ ಸಂವಿಧಾನ ಕಾರ್ಯಚಟುವಟಿಕೆ ಕುರಿತು ತರಬೇತಿ ನೀಡಬೇಕೆಂದು ಭಾರತೀಯ ರಾಷ್ಟ್ರೀಯ ಅಲ್ಪಸಂಖ್ಯಾತ ಕ್ಷೇಮಾಭಿವೃದ್ದಿ ಸಂಘದ ತಾಲ್ಲೂಕು ಘಟಕ ರಾಷ್ಟ್ರಪತಿಗಳಿಗೆ ಮನವಿ ಅರ್ಪಿಸಿ ಒತ್ತಾಯಿಸಿದೆ.
ಅಲ್ಪಸಂಖ್ಯಾತ ಸಮುದಾಯದ ಹಿರಿಯ ಮುಖಂಡ ಎಸ್.ಎಚ್.ಸೈಯದ್ ಮನವಿ ಅರ್ಪಿಸಿ ಮಾತನಾಡಿ, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‌ರವರ ಬಗ್ಗೆ ಲೋಕಸಭಾ ಅಧಿವೇಶನದಲ್ಲೇ ಅವಮಾನಿಸಿದ ಕೇಂದ್ರ ಕೃಷಿ ಸಚಿವ ಅಮಿತ್‌ಶಾರವರನ್ನು ಮಂತ್ರಿಮಂಡಲದಿಂದ ಕೈಬಿಡಬೇಕು.
ಅಂಬೇಡ್ಕರ್‌ವರನ್ನು ಅವಮಾನಿಸಿದ ರೀತಿ ನೋಡಿದರೆ ಕೇಂದ್ರ ಸಚಿವ ಅಮಿತ್ ಶಾಗೆ ಅಂಬೇಡ್ಕರ್ ಬಗ್ಗೆ ಹೆಚ್ಚು ಮಾಹಿತಿ ಪಡೆದಿಲ್ಲವೆನ್ನಿಸುತ್ತದೆ. ಅಂಬೇಡ್ಕರ್ ನಿಂದನೆ ಸಮಸ್ತ ನಾಡಿನ ಜನತೆಗೆ ನೋವುಂಟು ಮಾಡಿದೆ. ಆದ್ದರಿಂದ ಅವರನ್ನು ಕೇಂದ್ರ ಸಂಪುಟದಿಂದ ಕೈಬಿಡಬೇಕೆಂದು ಒತ್ತಾಯಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ತಹಶೀಲ್ದಾರ್ ರೇಹಾನ್‌ಪಾಷ, ತಮ್ಮ ಮನವಿಯನ್ನು ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳ ಕಾರ್ಯಾಲಯಕ್ಕೆ ಕಳಿಸುವ ಭರವಸೆ ನೀಡಿದರು.
ಅಲ್ಪಸಂಖ್ಯಾತ ಮುಖಂಡ ಎಂ.ದಾದಾಪೀರ್, ಡಿ.ಕೆ.ಅನ್ವರ್ ಮಾಸ್ಟರ್, ಅಬ್ದುಲ್ ಕಲೀಲ್, ಭಾಷಸಾಬ್ ಅಪ್ಸರ್, ಎಂ.ಎಸ್.ಇಮ್ರಾನ್, ನಗರಸಭೆ ಸದಸ್ಯ ಅನ್ವರ್, ಮಾಸ್ಟರ್ ಖಾದರ್, ಸಯ್ಯದ್ ದಾದಾಪಿರ್, ದವೂದ್ ಮೌಲನ, ಅಲ್ಲ ಬಕ್ಷಿ, ಸಯ್ಯದ್ ನಬಿ ಮುಂತಾದವರು ಇದ್ದರು.