ಕೋಡಿಹಳ್ಳಿ ಎಸ್.ಪಾಲಯ್ಯ ಇನ್ನಿಲ್ಲ 

News Desk

ಕೋಡಿಹಳ್ಳಿ ಎಸ್.ಪಾಲಯ್ಯ ಇನ್ನಿಲ್ಲ
ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ತಳಕು ಹೋಬಳಿಯ ಕೋಡಿಹಳ್ಳಿ ಗ್ರಾಮದ ಹಿರಿಯ ಮುಖಂಡರು ಮತ್ತು ಯಜಮಾನರಾದ ಎಸ್.ಪಾಲಯ್ಯ(90) ವಯೋ ಸಹಜ ಅನಾರೋಗ್ಯಕ್ಕೆ ತುತ್ತಾಗಿ ಸೋಮವಾರ ತಮ್ಮ ಸ್ವಗೃಹದಲ್ಲಿ ನಿಧನರಾಗಿರುತ್ತಾರೆ.

ಇಂದು ಸ್ವ ಗ್ರಾಮದಲ್ಲಿ ಇವರ ವಿಧಿ ವಿಧಾನಗಳ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಮೃತರಿಗೆ ಇಬ್ಬರು ಗಂಡು ಮಕ್ಕಳು, ಒಬ್ಬ ಮಗಳು ಸೇರಿದಂತೆ ಅಪಾರ ಬಂದು ಮಿತಗರನ್ನು ಅಗಲಿದ್ದಾರೆ. ಗ್ರಾಮದ ನಿಷ್ಟಾವಂತ ಪ್ರಾಮಾಣಿಕ ವ್ಯಕ್ತಿಯನ್ನು ಕಳೆದುಕೊಂಡಿದ್ದಾರೆ. ಗ್ರಾಮದ ಅಭಿವೃದ್ಧಿಗೆ ಇವರ ಕೊಡುಗೆ ಅಪಾರವಾದದ್ದು,ಇವರ ನಿಸ್ವಾರ್ಥ ಜನಸೇವೆ ಕಾರ್ಯ ನಿಜಕ್ಕೂ ಅತ್ಯಂತ ಶ್ಲಾಘನೀಯ.

ಕೋಡಿಹಳ್ಳಿ ಗ್ರಾಮಕ್ಕೆ ಒಂದು ದೊಡ್ಡ ಕಳಸ ಇದ್ದಂತೆ ಯಾವುದೇ ರೀತಿಯ ಘಟನೆಗಳು ಸಮಸ್ಯೆಗಳು ಬಂದರೂ ಅವುಗಳನ್ನು ಗ್ರಾಮದಲ್ಲಿಯೇ ಬಗೆ ಹರಿಸಿ ಅವರಿಗೆ ನ್ಯಾಯ ಕೊಡಿಸುವಂತಹ ಅತ್ಯಂತ ಪ್ರಾಮಾಣಿಕ ವ್ಯಕ್ತಿ ಇವರಾಗಿದ್ದರು ಎಂದು ಇಡೀ ಗ್ರಾಮ ಕಣ್ಣೀರಿನಲ್ಲಿ ಕೈತೊಳೆದಿದೆ. ಗ್ರಾಮವೇ ಅಂಧಕಾರದಲ್ಲಿ ಮುಳುಗಿದೆ ಎಂದರೆ ತಪ್ಪಾಗಲಾರದು.

ಇವರು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ನಾಯಕರಾಗಿ ಕಾರ್ಯಕರ್ತರಾಗಿ ಅನೇಕ ಹೋರಾಟಗಳನ್ನು ನಡೆಸಿ ತಳಕು ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ಅನೇಕ ವರ್ಷಗಳ ಕಾಲ ನಿರಂತರವಾಗಿ ಸೇವೆ ಸಲ್ಲಿಸಿರುತ್ತಾರೆ, ಅಲ್ಲದೆ ಡಿ.ಸಿ.ಸಿ ಬ್ಯಾಂಕ್ ಜಿಲ್ಲಾ ಉಪಾಧ್ಯಕ್ಷರಾಗಿ ಸಹ ಸೇವೆ ಸಲ್ಲಿಸಿದ್ದಾರೆ. ಹಾಗೂ ಸಮಾಜ ಮುಖಿ ಜನಪರ ಕಾರ್ಯಗಳನ್ನು ಮಾಡಿದ್ದಾರೆ ಎಂದು ಗ್ರಾಮಸ್ಥರು ಕಂಬನಿ ಮಿಡಿದಿದ್ದಾರೆ.

- Advertisement -  - Advertisement - 
Share This Article
error: Content is protected !!
";