ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಾಂಗ್ರೆಸ್‌ಸರ್ಕಾರದಲ್ಲಿ ಕಾಂಗ್ರೆಸ್‌ನಾಯಕರಿಗೆ ಒಂದು ಕಾನೂನು ? ಬೇರೆಯವರಿಗೆ ಒಂದು ಕಾನೂನು ? ಎಂದು ಜೆಡಿಎಸ್ ವಾಗ್ದಾಳಿ ಮಾಡಿದೆ.
ವಿಧಾನಸೌಧದಲ್ಲೇ ರಾಜ್ಯಸಭೆ ಸದಸ್ಯ ನಾಸೀರ್‌ಹುಸೇನ್‌ಬೆಂಬಲಿಗರು ಪಾಕಿಸ್ತಾನ್‌ಪರ ಘೋಷಣೆ ಕೂಗಿದ್ದರು. ದೇಶದ್ರೋಹಿ ಘೋಷಣೆ ಕೂಗಿದ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗಲು ನಾಸೀರ್‌ಹುಸೇನ್‌ಗೆ 90 ಬಾರಿ ನೋಟಿಸ್‌ನೀಡಿದ್ದರೂ, ಪೊಲೀಸರ ವಿಚಾರಣೆಗೆ ಹಾಜರಾಗಿಲ್ಲ ಎಂದು ಜೆಡಿಎಸ್ ಪ್ರಶ್ನಿಸಿದೆ.
ಸಿದ್ದರಾಮಯ್ಯ ಸರ್ಕಾರ ನಾಸೀರ್‌ಹುಸೇನ್‌ಬೆನ್ನಿಗೆ ನಿಂತು ರಕ್ಷಿಸುತ್ತಿದೆ. ಇದೇ ಕಾರಣಕ್ಕೆ 9 ತಿಂಗಳಾದರೂ ಈ ಪ್ರಕರಣದಲ್ಲಿ ಪೊಲೀಸರು ಚಾರ್ಜ್‌ಶೀಟ್‌ಹಾಕದೇ ಕಾಲಹರಣ ಮಾಡುತ್ತಿದ್ದಾರೆ.
ಕರ್ನಾಟಕ ಕಾಂಗ್ರೆಸ್ ರಾಜ್ಯಸಭೆ ಸದಸ್ಯ ನಾಸೀರ್‌ಹುಸೇನ್‌ಕಾನೂನಿಗಿಂತ ದೊಡ್ಡವರೇ ? ಸಂವಿಧಾನದ ಬಗ್ಗೆ ಮಾತನಾಡುವ ಸಿದ್ದರಾಮಯ್ಯ, ಗೃಹ ಸಚಿವ ಡಾ.ಜಿ.ಪರಮೇಸ್ವರ್ ನಿಮ್ಮ ಪೌರುಷ, ತಾಕತ್ತು ನಾಸೀರ್‌ಹುಸೇನ್‌ಅವರ ಪ್ರಕರಣದಲ್ಲಿ ಯಾಕಿಲ್ಲ ? ಎಂದು ಜೆಡಿಎಸ್ ಖಾರವಾಗಿ ಪ್ರಶ್ನಿಸಿದೆ.