ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಗೃಹಲಕ್ಷ್ಮಿ ಹಣ ಮನೆಯ ಮಹಾಲಕ್ಷ್ಮಿಯರನ್ನು ತಲುಪುತ್ತಿಲ್ಲ!! ಹೀಗಂತ ಫ್ರಸ್ಟ್ರೇಟೆಡ್‌ಆಗಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸದನದಲ್ಲಿ ಒಪ್ಪಿಕೊಂಡಿದ್ದಾರೆ!! ಎಂದು ಬಿಜೆಪಿ ತಿಳಿಸಿದೆ.
ಗೃಹಲಕ್ಷ್ಮಿ ಹಣ ಫಲಾನುಭವಿಗಳಿಗೆ ತಲುಪಿಲ್ಲ ಎಂದು ಹೇಳಿದಾಗ, ಐಟಿ ಹಾಗೂ ಜಿಎಸ್‌ಟಿ ತೆರಿಗೆ ಪಾವತಿದಾರರಿಗೆ ಮಾತ್ರ ತಲುಪಿಲ್ಲ ಎಂದು ಮೊಂಡುವಾದ ಮಾಡುತ್ತಿದ್ದ ಕರ್ನಾಟಕ ಕಾಂಗ್ರೆಸ್ ಸರ್ಕಾರ, ಈಗ ತೆರಿಗೆ ಪಾವತಿಸದೆ ಇರುವವರಿಗೂ ತಲುಪುತ್ತಿಲ್ಲ ಎಂದು ತಪ್ಪು ಒಪ್ಪಿಕೊಂಡಿರುವುದು ಸ್ವಾಗತಾರ್ಹ!! ಎಂದು ಬಿಜೆಪಿ ಹೇಳಿದೆ.
ಸಿಎಂ ಸಿದ್ದರಾಮಯ್ಯ ಅವರೆ, ಡಿಸಿಎಂ ಡಿ.ಕೆ ಶಿವಕುಮಾರ್ ಅವರೆ, ಗ್ಯಾರಂಟಿ ಘೋಷಿಸುವಾಗ ಯಾವುದೇ ಕಂಡಿಷನ್ ಇಲ್ಲ ಎಂದು ಹೇಳಿ, ಈಗ ವಿವಿಧ ರೀತಿಯ ಕಂಡಿಷನ್‌ಗಳನ್ನು ಹೇರುತ್ತಿರುವುದೇಕೆ..?? ಎಂದು ಬಿಜೆಪಿ ಖಾರವಾಗಿ ಪ್ರಶ್ನಿಸಿದೆ.
ನುಡಿದಂತೆ ಕರ್ನಾಟಕದ ಎಲ್ಲಾ ಮನೆಯ ಯಜಮಾನಿಗೆ ಯಾವುದೇ ಷರತ್ತುಗಳಿಲ್ಲದೆ, ಗೃಹಲಕ್ಷ್ಮಿ ಹಣ ತಲುಪುವ ವ್ಯವಸ್ಥೆ ಮಾಡಿ ಎಂದು ಬಿಜೆಪಿ ತಾಕೀತು ಮಾಡಿದೆ.