ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಇಡೀ ಬೆಂಗಳೂರು ಹಾಗೂ ಇಡೀ ರಾಜ್ಯಕ್ಕೆ ಸಂಪರ್ಕ ಕಲ್ಪಿಸುವ, ದೇಶದ ವಿವಿಧ ಭಾಗಗಳಿಂದ ಬರುವ ಪ್ರಯಾಣಿಕರಿಗೆ ಬೃಹತ್ ಬಸ್ ನಿಲ್ದಾಣವಾಗಿರುವ ಮೆಜಿಸ್ಟಿಕ್‌ನಲ್ಲಿ ಎಲ್ಲವೋ ಅಯೋಮಯವಾಗಿದೆ ಎಂದು ಬಿಜೆಪಿ ಆತಂಕ ವ್ಯಕ್ತಪಡಿಸಿದೆ.
ಭ್ರಷ್ಟ ಕರ್ನಾಟಕ ಕಾಂಗ್ರೆಸ್ ಸರ್ಕಾರದ ಬೇಜವಾಬ್ದಾರಿ ಮತ್ತು ಆ ದಿನಗಳ ಡಿ.ಕೆ ಶಿವಕುಮಾರ್ ಅವರ ಬ್ಯಾಡ್‌ಬೆಂಗಳೂರಿನ ಪರಿಣಾಮ ಮೆಜಿಸ್ಟಿಕ್ ಬಸ್‌ನಿಲ್ದಾಣ ಅವ್ಯವಸ್ಥೆಗಳ ತಾಣವಾಗಿದೆ ಎಂದು ಬಿಜೆಪಿ ಹರಿಹಾಯ್ದಿದೆ.
ಪ್ರಯಾಣಿಕರಿಗೆ ಕುಡಿಯೋಕೆ ನೀರಿಲ್ಲ, ಬಸ್‌ಗಳ ಕುರಿತು ಮಾಹಿತಿಯೂ ಸಿಗುವುದಿಲ್ಲ, ಸ್ವಚ್ಛತೆಯ ಮಾತು ಅಂತೂ ಇಲ್ಲವೇ ಇಲ್ಲ. ಇನ್ನು ಮಳಿಗೆಗಳಲ್ಲಿ ತಿನಿಸುಗಳ ಬೆಲೆಯಂತೂ ಬಲು ದುಬಾರಿ.
ರಾಜಧಾನಿಯ ಪ್ರಮುಖ ಬಸ್‌ನಿಲ್ದಾಣದ ಸ್ಥಿತಿಯೇ ಇಷ್ಟೊಂದು ಶೋಚನೀಯವಾಗಿರುವಾಗ ಅದ್ಹೇಗೆ ಡಿಕೆ ಶಿವಕುಮಾರ್‌ಅವರು ಬ್ರ್ಯಾಂಡ್ ಬೆಂಗಳೂರು ಮಾಡುತ್ತಾರೆ? ಅಸಲಿಗೆ ಅವರು ಮಾಡುತ್ತಿರುವುದೇ ಬ್ಯಾಡ್ ಬೆಂಗಳೂರು! ಎಂದು ಬಿಜೆಪಿ ವಾಗ್ದಾಳಿ ಮಾಡಿದೆ.