ಕಾಂಗ್ರೆಸ್‌ ನ ಶಿವಲಿಂಗೇಗೌಡ ಜನಪ್ರತಿನಿಧಿಯೋ ? ಭಯೋತ್ಪಾದಕನೋ..?

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಅರಸೀಕೆರೆ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಶಿವಲಿಂಗೇಗೌಡ ನೀವೇನೂ ಜನಪ್ರತಿನಿಧಿಯೋ ? ಭಯೋತ್ಪಾದಕನೋ..? ಎಂದು ಜೆಡಿಎಸ್ ಖಾರವಾಗಿ ಪ್ರಶ್ನಿಸಿದೆ.

ಅರಣ್ಯ ಇಲಾಖೆ ಭೂಮಿ ಕೊಡದಿದ್ದರೆ ಬಾಂಬ್‌ಹಾಕುತ್ತೇನೆ ಎಂದು ಬೆದರಿಕೆ ಒಡ್ಡಿರುವ ಶಿವಲಿಂಗೇಗೌಡ ಅವರೇ ನೀವು ಯಾವ ಉಗ್ರಸಂಘಟನೆಯ ಸದಸ್ಯ?

ಸದಾ ಸಮಾಜದಲ್ಲಿ ಶಾಂತಿ ಸಾಮರಸ್ಯ ಕದಡುವ ಪ್ರಚೋದನಕಾರಿ ಹೇಳಿಕೆ ನೀಡುವ ಶಾಸಕ ಶಿವಲಿಂಗೇಗೌಡ, ಕೆಲ ದಿನಗಳ ಹಿಂದಷ್ಟೆ ರಾಜ್ಯದಲ್ಲಿ ರಕ್ತ ಕ್ರಾಂತಿ ಮಾಡುತ್ತೇವೆ ಉಗ್ರ ಭಾಷಣ ಮಾಡಿದ್ದರು.

ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರೇ ಬಾಂಬ್‌ ಹಾಕುತ್ತೇನೆ ಎಂದು ಬೆದರಿಕೆ ಹಾಕಿರುವ ಶಾಸಕ ಶಿವಲಿಂಗೇಗೌಡ ವಿರುದ್ಧ ಎಫ್‌ಐಆರ್‌ ದಾಖಲಿಸಿ ಕಾನೂನು ಕ್ರಮ ಜರುಗಿಸಿ ಎಂದು ಜೆಡಿಎಸ್ ಆಗ್ರಹ ಮಾಡಿದೆ.

 

 

- Advertisement -  - Advertisement - 
Share This Article
error: Content is protected !!
";