ತೆರಿಗೆ ಸಂಗ್ರಹ ಹೆಚ್ಚಿಸಲು ಗಮನ ಹರಿಸಿ- ಜಿ.ಪಂ.ಸಿಇಓ ಸೋಮಶೇಖರ್

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಗ್ರಾಮ ಪಂಚಾಯಿತಿ ತೆರಿಗೆ ವಸೂಲಾತಿ ಪ್ರಗತಿ ಕುಂಠಿತವಾಗಿದೆ. ಅಧಿಕಾರಿಗಳು ಬಗ್ಗೆ ಹೆಚ್ಚಿನ ಗಮನ ಹರಿಸಿ ನಿಗಧಿತ ಕಾಲಾವಧಿಯೊಳಗೆ ತೆರಿಗೆ ಸಂಗ್ರಹ ಹೆಚ್ಚಿಸಲು ಗಮನ ಹರಿಸುವಂತೆ ಜಿ.ಪಂ ಸಿಇಓ ಎಸ್.ಜೆ.ಸೋಮಶೇಖರ್ ಹೇಳಿದರು.

ನಗರದ ಜಿಲ್ಲಾ ಪಂಚಾಯಿತಿ ಕಛೇರಿ ಮಿನಿ ಸಭಾಂಗಣದಲ್ಲಿ, ಮಂಗಳವಾರ ಮಹಾತ್ಮಗಾಂಧಿ ನರೇಗಾ, ಸ್ವಚ್ಛ ಭಾರತ್ ಮಿಷನ್, ಸಾಮಾಜಿಕ ಲೆಕ್ಕ ಪರಿಶೋಧನೆ ಹಾಗೂ ಪಂಚಾಯತ್ ರಾಜ್ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ಜರುಗಿಸಿ ಅವರು ಮಾತನಾಡಿದರು.

ಮುಖ್ಯ ಲೆಕ್ಕಾಧಿಕಾರಿಗಳು ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ ವಿಶೇಷ ಆಡಿಟ್ ನಡೆಸಬೇಕು. ನಿಯಮಿತವಾಗಿ ಗ್ರಾಮ ಸಭೆ ನಡೆಸಬೇಕು. ಅರ್ಹ ಫಲಾನುಭವಿಗಳಿಗೆ ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ವೈಯಕ್ತಿಕ ಗೃಹ ಶೌಚಾಲಯಗಳ ಕಾರ್ಯಾದೇಶ ನೀಡಿ ಕೆ2 ತಂತ್ರಾಶದಲ್ಲಿ ಹಣ ಪಾವತಿಸಬೇಕು.

ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಕೈಗೊಂಡಿರುವ ಘನ ತ್ಯಾಜ್ಯ ನಿರ್ವಹಣಾ ಘಟಕಗಳ ಕಾಮಗಾರಿ, ಬೂದು ನೀರು ಕಾಮಗಾರಿ ಹಾಗೂ ಮಲ ತ್ಯಾಜ್ಯ ಸಂಸ್ಕರಣ ಘಟಕಗಳ ಕಾಮಗಾರಿಗಳ ತುರ್ತಾಗಿ ಪೂರ್ಣಗೊಳಿಸುವಂತೆ ಜಿ.ಪಂ.ಸಿಇಓ ಎಸ್.ಜೆ.ಸೋಮಶೇಖರ್ ತಾಕೀತು ಮಾಡಿದರು.

ನಂತರ 2025-26 ನೇ ಸಾಲಿನ ಕ್ರಿಯಾ ಯೋಜನೆ ತಯಾರಿಸಲು ಗ್ರಾಮ ಪಂಚಾಯಿತಿಗಳಲ್ಲಿ ಗ್ರಾಮ ಸಭೆಗಳನ್ನು ನಡಸಿದ್ದು ಸದರಿ ಗ್ರಾಮ ಸಭೆಗಳ ನಡವಳಿ ಮತ್ತು ಫೋಟೋಗಳನ್ನು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಲಾಗಿನ್ನಲ್ಲಿ ಇಂಧೀಕರಿಸಲು ಸೂಚಿಸಿದರು.

ಸಂದರ್ಭದಲ್ಲಿ ಉಪ ಕಾರ್ಯದರ್ಶಿ ಕೆ.ತಿಮ್ಮಪ್ಪ, ಮುಖ್ಯ ಯೋಜನಾಧಿಕಾರಿ ಸಿ.ಎನ್.ಗಾಯಿತ್ರಿ, ಮುಖ್ಯ ಲೆಕ್ಕಾಧಿಕಾರಿ ಮಧು, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಾದ, ಹನುಮಂತಪ್ಪ, ಸತೀಶ್, ಸುನೀಲ್, ವಿಶ್ವನಾಥ್, ರವಿಕುಮಾರ್, ನರೇಗಾ & ಪಂಚಾಯತ್ ರಾಜ್ ಸಹಾಯಕ ನಿರ್ದೇಶಕ ಸಂತೋಷ್ ಕುಮಾರ್, ಯಶವಂತ್, ರತ್ನಮಾಲ, ರೂಪಕುಮಾರಿ, ಶಿವಮೂರ್ತಿ, ಮಹೇಶ್, ನರೇಗಾ .ಡಿ.ಪಿ.ಸಿ ಮೋಹನ್, ಹೆಚ್.ಶಶಿಧರ್ ಜಿಲ್ಲಾ ಯೋಜನಾ ವ್ಯವಸ್ಥಾಪಕರು (ಆಡಳಿತ) .ಡಿ.ಪಿ.ಎಂ ಸೈಯದಾ ಫಿಜಾ, ಈರಮ್ಮ, ಸ್ವಚ್ಛ ಭಾರತ್ ಮಿಷನ್ ಜಿಲ್ಲಾ ಸಮಾಲೋಚಕರಾದ ಬಿ.ಸಿ. ನಾಗರಾಜ್ (..ಸಿ), ಶಶಿಧರ್.ಹೆಚ್.ಆರ್ (ಎಂ..ಎಸ್), ಜಿಲ್ಲಾ ಪಂಚಾಯತ್ ಸಿಬ್ಬಂದಿ ಇದ್ದರು.

 

 

 

- Advertisement -  - Advertisement - 
Share This Article
error: Content is protected !!
";