ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ತಾಲ್ಲೂಕು ಕಛೇರಿಗೆ ಸರಿಯಾದ ಸಮಯಕ್ಕೆ ಬಾರದ ಅಧಿಕಾರಿ ಮತ್ತು ಸಿಬಂದಿಗಳಿಗೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು.
ಇಂದು ಬೆಳಗ್ಗೆ ತಾಲ್ಲುಕು ಕಛೇರಿಗೆ ಬೇಟಿ ನೀಡಿದಾಗ ಶೇಕಡಾ 90 ಹೆಚ್ಚು. ಅಧಿಕಾರಿಗಳು ಹಾಗು ಸಿಬ್ಬಂದಿ ಇಲ್ಲದ ಕಾರಣ ಸಚಿವರು ಕೆಂಡಾಮಂಡಲವಾದರು.
ದೊಡ್ಡಬಳ್ಳಾಪುರದ ತಾಲ್ಲೂಕು ಆಡಳಿತದ ತಹಶೀಲ್ದಾರ್ ಹಾಗು ಉಪವಿಭಾಗಾಧಿಕಾರಿಗಳು ಕಛೇರಿಯಲ್ಲಿ ಭ್ರಷ್ಠಾಚಾರದ ಬಗ್ಗೆ ಬಹಳಷ್ಟು ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಊಹಾ ಪೂಹಾಗಳಿಗೆ ಕಿವಿಗೊಡದೆ ತಾವೆ ಬಂದು ಪರಿಶೀಲಿಸಿದಾಗ ಶೇಕಡಾ 90 ರಷ್ಟು ಅಧಿಕಾರಿಗಳು ಕೆಲಸಕ್ಕೆ ಬಂದಿಲ್ಲ, 11 ಗಂಟೆ ಯಾದರು ಕೆಲವು ಆಫೀಸ್ ಗಳು ಓಪನ್ ಆಗಿಲ್ಲ, ಈ ಅ ವ್ಯವಸ್ಥೆಯ ಆಗಿ ಕಾಣುತ್ತಿದೆ ಇದನ್ನ ಮುಚ್ಚಿಡುವುದರಿಂದ ನಮಗೆ ಶೋಭೆ ತರುವುದಿಲ್ಲ, ಆಡಳಿತ ವ್ಯವಸ್ಥೆಯಲ್ಲಿ ಬೇಜವಾಬ್ದಾರಿತನ ಎದ್ದು ಕಾಣುತ್ತಿದೆ. ನಾನು ಬೆಂಗಳೂರಿನಿಂದ ಬಂದಿದ್ದೇನೆ. ಸುದ್ದಿ ತಿಳಿದ ತಕ್ಷಣ ಜಿಲ್ಲಾಧಿಕಾರಿಗಳು ಡಿಸಿ ಆಫೀಸ್ ನಿಂದ ಬಂದಿದ್ದಾರೆ ಆದರೆ ಇಲ್ಲಿ ಕೆಲಸ ಮಾಡುವ ಅಧಿಕಾರಿಗಳು ಬಂದಿಲ್ಲ.
ನಾನು ಬಂದ ಮೇಲು ಕೆಲವರು ಹಾಜರಾತಿ ರಿಜಿಸ್ಟರ್ ಗೆ ಸಹಿ ಹಾಕುತ್ತಿದ್ದರು. ಇದು ವಾಸ್ತವ ಚಿತ್ರಣ ನಾನು ಮುಚ್ಚಿಟ್ಟು ಮಾತಾಡ ಬಹುದು ಆದರೆ ನನಗೆ ಆತ್ಮವಂಚನೆ ಆಗಲಿದೆ ಹಾಗು ಸರ್ಕಾರಿ ಕಛೇರಿಯಲ್ಲಿ ಮಧ್ಯವರ್ತಿಗಳು ಹಾಗು ದಲ್ಲಾಳಿಗಳ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವರು ಸಬ್ ರಿಜಿಸ್ಟರ್ ಕಛೇರಿಯಲ್ಲಿ ತಹಶೀಲ್ದಾರ್ ಕಛೇರಿಯಲ್ಲಿ ಉಪವಿಭಾಗ ಕಛೇರಿಯಲ್ಲಿ ದಾಖಲೆ ರೋಮ್ ಸೇರಿದಂತೆ ಎಲ್ಲಾ ಕಡೆಯಲ್ಲಿಯೂ ಮಧ್ಯವರ್ತಿಗಳು ಹಾವಳಿ ಹೆಚ್ಚಾಗಿದ್ದು ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ ಸಾರ್ವಜನಿಕರ ದೂರಿನ ಬಗ್ಗೆ ಗಂಭೀರವಾಗಿ ಪರಿಗಣಿಸಲಾಗಿದ್ದು ಮಧ್ಯವರ್ತಿಗಳ ಹಾವಳಿ ಇಲ್ಲದಂತೆ ಜನರೇ ನೇರವಾಗಿ ಕೆಲಸಗಳನ್ನು ಮಾಡಿಸಿಕೊಳ್ಳುವ ವ್ಯವಸ್ಥೆಯನ್ನು ತರಲಾಗುವುದು ಎಂದರು.
ಸಬ್ ರಿಜಿಸ್ಟರ್ ಕಛೇರಿಯಲ್ಲಿ ಮಧ್ಯವರ್ತಿಗಳು ಅಧಿಕಾರಿಗಳ ಹೆಸರಿನಲ್ಲಿ ಹಣ ವಸೂಲಿ ಮಾಡುತ್ತಿರುವುದರಿಂದ ರಾಜ್ಯ ಬೊಕ್ಕಸಕ್ಕೆ ನಷ್ಟ ಹಾಗುತ್ತಿದೆ ಹಾಗು ಜನರಿಂದ ಸುಲಿಗೆ ಮಾಡುತ್ತಾ ಇದ್ದರೆ. ಹಾಗು ಬೋಗಸ್ ದಾಖಲೆಗಳನ್ನು ಸೃಷ್ಠಿ ಮಾಡಿ ರಿಜಿಸ್ಟರ್ ಮಾಡುತ್ತಿರುವುದು, ಸರ್ಕಾರಿ ಜಾಗಗಳ ಬಗ್ಗೆ ಮಾಹಿತಿ ಪಡೆದು ಇಂತಹ ಜಮೀನು ಮಧ್ಯವರ್ತಿಗಳಿಗೆ ಅವಕಾಶ ನೀಡದ ರೀತಿಯಲ್ಲಿ ನಾವು ಕೆಲಸ ಮಾಡ ಬೇಕಿದೆ ಎಂದು ತಾಕೀತು ಮಾಡಿದರು.
ರೆಕಾರ್ಡ್ ರೂಮ್ ನಲ್ಲಿ ದುಡ್ಡು ಕೊಡದೆ ಇದ್ದರೆ ಯಾವುದೇ ದಾಖಲೆಗಳನ್ನು ಕೊಡುವುದಿಲ್ಲ ಎಂದು ಜನ ಮಾತಾಡ್ತಾ ಇದ್ದಾರೆ, ಆ ಕಾರಣದಿಂದ ದಾಖಲೆಗಳನ್ನ ಸ್ಕ್ಯಾನ್ ಮಾಡಿ ಆ ದಾಖಲೆಗಳನ್ನ ಆನ್ ಲೈನ್ ಗೆ ಬೀಡ್ತಾ ಇದ್ದೇವೆ. ಲ್ಯಾಂಡ್ ಗ್ರ್ಯಾಂಡ್, ಒಎಂ, ಸಾಗುವಳಿ ಚೀಟಿ ಇಂತಹ ದಾಖಲೆಗಳನ್ನ ಆನ್ ಲೈನ್ ನಲ್ಲಿ ಹಾಕುವುದರಿಂದ ಜನರೇ ನೋಡಿಕೊಳ್ಳ ಬಹುದಾಗಿದೆ.
ಭೂ ರಕ್ಷ ಯೋಜನೆಯಡಿ ಜನವರಿ ಮೊದಲ ವಾರದಿಂದ ಕೆಲಸ ಮಾಡ್ತಾ ಇದ್ದೇವೆ. ರಾಜ್ಯದ 220 ಸಬ್ ರಿಜಿಸ್ಟರ್ ಕಛೇರಿಯಲ್ಲಿ ದಾಖಲೆಗಳ ಸ್ಕ್ಯಾನಿಂಗ್ ಕೆಲಸ ಆಗಲಿದ್ದು ಇದರಿಂದ ದಾಖಲೆಗಳ ತಿದ್ದುವ ಕೆಲಸ ಆಗುವುದಿಲ್ಲ ಎಂದರು, ಇಲ್ಲಿಯವರೆಗೂ ಸಾಕಷ್ಟು ದಾಖಲೆಗಳನ್ನು ತಿದ್ದಿದ್ದಾರೆ. ಇನ್ಮಂದೆಯಾದರು ದಾಖಲೆಗಳನ್ನ ತಿದ್ದುವ ಕೆಲಸ ಆಗಬಾರದು, ಹಾಗೆಯೇ ದಾಖಲೆಗಳ ಕಳವು ಸಹ ಆಗುವುದಿಲ್ಲ ದಾಖಲೆಗಳು ಶಾಶ್ವತವಾಗಿ ಉಳಿಯುತ್ತವೆ ಎಂದರು ವ್ಯವಸ್ಥೆಯಲ್ಲಿ ಬದಲಾವಣೆಗಳನ್ನು ತರುವ ಮೂಲಕ ಮಧ್ಯವರ್ತಿಗಳ ಹಾವಳಿ ತಪ್ಪಿಸುವ ಕೆಲಸ ಮಾಡುತ್ತಿದ್ದೇವೆ ಎಂದರು.