ಬೆಳಗಾವಿಯಲ್ಲಿ ರಾರಾಜಿಸುತ್ತಿರುವ ಆಧುನಿಕ ಗಾಂಧಿಗಳ ಕಟೌಟ್​ಗಳು

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಳಗಾವಿಯಲ್ಲಿ ಮಹಾತ್ಮ ಗಾಂಧಿ ಹೆಸರಲ್ಲಿ ಮಾಡುತ್ತಿರುವ ಸಮಾವೇಶದಲ್ಲಿ ಆಧುನಿಕ ಗಾಂಧಿಗಳ ಕಟೌಟ್​ಗಳೇ ರಾರಾಜಿಸುತ್ತಿವೆ ಎಂದು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವ ಹೆಚ್.​ಡಿ ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಬೆಳಗಾವಿಯಲ್ಲಿ ಗಾಂಧೀಜಿ ಶತಮಾನೋತ್ಸವ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯುತ್ತಿದೆ. ಆದರೆ, ಅಲ್ಲಿನ ಕಟೌಟ್​​ಗಳಲ್ಲಿ ಗಾಂಧೀಜಿಯೇ ಇಲ್ಲ. ಕಟೌಟ್​​ಗಳಲ್ಲಿ ಈಗ ಆಧುನಿಕ ಗಾಂಧಿಗಳಿದ್ದಾರೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಟೀಕಿಸಿದ್ದಾರೆ.

- Advertisement - 

ಗಾಂಧೀಜಿ ಅವರ ಹೆಸರಲ್ಲಿ ಒಂದು ವರ್ಷದ ಕಾರ್ಯಕ್ರಮ ಮಾಡ್ತಾರಂತೆ. ದೊಡ್ಡ ದೊಡ್ಡ ಆಕಾಶ ಎತ್ತರಕ್ಕೆ ಕಟೌಟ್​​ಗಳನ್ನು ನೋಡಿದೆ. ಇವತ್ತು ರಾಜ್ಯ ಸರ್ಕಾರವನ್ನು ಮೃಗೀಯವಾಗಿ ನಡೆಸುತ್ತಿದ್ದಾರೆ.

ಅಂತಹ ಕಾಂಗ್ರೆಸ್​​ನವರು ಗಾಂಧೀಜಿ ಸ್ಮರಣೆ ಮಾಡುತ್ತಾರಾ?. ಇದರ ಬಗ್ಗೆ ಮುಂದೆ ಮಾತಾಡೋಣ ಎಂದು ಕುಮಾರಸ್ವಾಮಿ ತಿಳಿಸಿದರು.

- Advertisement - 

 

Share This Article
error: Content is protected !!
";