ಅಲೆಮಾರಿ ಪಟ್ಟಿಯಿಂದ ಕೊರಚ-ಕೊರಮ ಸಮುದಾಯ ಹೊರಗಿಟ್ಟರೆ ಉಗ್ರ ಹೋರಾಟ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಅಲೆಮಾರಿ ಪಟ್ಟಿಯಿಂದ ಕೊರಚರನ್ನು ಹೊರಗಿಡುವ ಛಲವಾದಿ ನಾರಾಯಣಸ್ವಾಮಿ ಹೇಳಿಕೆಗೆ ಖಂಡಿಸಿ ಅವರ ರಾಜೀನಾಮೆಗೆ ಅಖಿಲ ಕರ್ನಾಟಕ ಕೊರಚ ಸಮುದಾಯ ಸಂಘಟನೆಗಳ ಆಗ್ರಹ ಪಡಿಸಿದೆ. ಚಿತ್ರದುರ್ಗದಲ್ಲಿ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಕೂರಚ ಮಹಾ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ವೈ.ಕುಮಾರ್ ಕಳೆದ ವಾರ ಬೆಳಗಾವಿ ಸುವರ್ಣಸೌಧದಲ್ಲಿ

ಕಲಾಪ ನಡೆಯುವ ವೇಳೆ ಸುವರ್ಣ ಸೌಧದ ಹೊರಗಡೆ ಪ್ರತಿಭಟನೆ ನಡೆಸುತ್ತಿದ್ದ ಅಲೆಮಾರಿ ಸಂಘಟನೆಯೊಂದರ ಮನವಿ ಸ್ವೀಕರಿಸಿ ಮಾತನಾಡಿದ ಛಲವಾದಿ ನಾರಾಯಣ ಸ್ವಾಮಿ ಕೊರಚ, ಕೊರಮರು ಪರಿಶಿಷ್ಟ ಅಲೆಮಾರಿ ಪಟ್ಟಿ (೪೯ರಲ್ಲಿ) ಬರುವುದಿಲ್ಲ. ಮಾತ್ರವಲ್ಲ ಪರಿಶಿಷ್ಟ ಜಾತಿ ಒಳಮೀಸಲಾತಿ ಪಟ್ಟಿಗೂ ಅವರು ಸೇರುವುದಿಲ್ಲ ಎಂಬ ಹೇಳಿಕೆ ನೀಡಿರುವುದು ಅತ್ಯಂತ ಖಂಡನೀಯ.

ಯಾವುದೇ ಆಧಾರವಿಲ್ಲದ ಈ ರೀತಿ ಹೇಳಿಕೆ ನೀಡಿ, ಅಲೆಮಾರಿ ಸಮುದಾಯಗಳ ನಡುವೆ ಜಗಳ ಹಚ್ಚುವ ಕೆಲಸ ಮಾಡಿರುವ ನಾರಾಯಣ ಸ್ವಾಮಿ ಕೂಡಲೇ ತನ್ನ ಹೇಳಿಕೆ ಹಿಂಪಡೆದುಕೊಂಡು ಸಮಾಜದ ಕ್ಷಮೆ ಕೇಳಬೇಕು. ಕೊರಚ ಕೊರಮ ಸಮುದಾಯದ ಸಂಘಟನೆಗಳು ನಾರಾಯಣ ಸ್ವಾಮಿ ರಾಜೀನಾಮೆಗೆ ಒತ್ತಾಯಿಸಿ ಪ್ರತಿಭಟನೆಗೆ ಕರೆ ನೀಡಲಿದ್ದೇವೆ ಎಂದು ಅವರು ಎಚ್ಚರಿಸಿದ್ದಾರೆ.

ಕೊರಚ ಸಮುದಾಯ ತಲತಲಾಂತರಿದಿಂದ ಕಳ್ಳರುಎಂಬ ಹಣೆಪಟ್ಟಿ ಕಟ್ಟಿಕೊಂಡು ಬದುಕುತ್ತಿದೆ. ಬ್ರಿಟಿಷರ ಆಗಮನದ ಬಳಿಕ ಅವರು ತಂದ ರಸ್ತೆ ಸಾರಿಗೆ ಕೊರಚರ ಜೀವನಧಾರವಾಗಿದ್ದ ಎತ್ತುಗಳ ಮೂಲಕ ಸರಕು ಸಾಗಣೆ ವೃತ್ತಿಗೆ ಏಟು ಬಿತ್ತು. ಆಗ ಕೊರಚರು ಹೊಟ್ಟೆಪಾಡಿಗಾಗಿ ಆಹಾರಧಾನ್ಯ ಕಳ್ಳತನಕ್ಕೆ ಇಳಿದರು ಎಂದು ಚರಿತ್ರೆ ಹೇಳುತ್ತದೆ.

ಅದನ್ನೇ ದೊಡ್ಡದು ಮಾಡಿದ ಬ್ರಿಟಿಷರು ಕಿಮಿನಲ್ ಟೈಬಲ್ ಕಾಯ್ದೆ ಅಡಿ ಕೊರಚರು ಶಾಶ್ವತವಾಗಿ ಕಳ್ಳತನದ ಆರೋಪ ಹೊತ್ತು ತಿರುಗುವಂತೆ ಮಾಡಿದರು. ಈ ಕಳಂಕದಿಂದ ಕೊರಚರು ಊರು ಹೊರಗೆ ಗುಡ್ಡಗಾಡು ಪ್ರದೇಶದಲ್ಲಿ ವಾಸಿಸುವಂತಾಯಿತು. ಅವರಿನ್ನೂ ಮುಖ್ಯವಾಹಿನಿಗೆ ಬರದಿರುವುದಕ್ಕೆ ಇದು ಪ್ರಮುಖ ಕಾರಣ.

ಅಲೆಮಾರಿಗಳಲ್ಲಿ ಇಂತಹ ಕಳಂಕ ಬೇರೆ ಯಾರಿಗೂ ಇರಲಾರದು. ಕೊರಚರು ಇಂದಿಗೂ ಹಗ್ಗ ಕಣ್ಣಿ, ಕಸ ಪೊರಕೆ ಮಾರಾಟ, ಬುಟ್ಟಿ ಹೆಣೆಯುವುದು, ಹಂದಿ ಸಾಕಾಣೆ ಇತ್ಯಾದಿ ಹೊಟ್ಟೆ ತುಂಬದ ವೃತ್ತಿಯಲ್ಲಿ ಬದುಕು ಸವೆಸುತ್ತಿದ್ದಾರೆ. ಇಂತಹದೊಂದು ಶೋಷಣೆಗೆ ಒಳಗಾಗಿ ಕಡಿಮೆ ಜನಸಂಖ್ಯೆ ಹೊಂದಿರುವ ಸೂಕ್ಷ್ಮ ಸಮುದಾಯ ಮುಂದುವರೆದಿದೆ ಎಂದು ಹೇಳಲು ನಾರಾಯಣ ಸ್ವಾಮಿಯವರಿಗೆ ಹೇಗೆ ಮನಸ್ಸು ಬಂತು ಗೊತ್ತಿಲ್ಲ. ಇದು ದುರುದ್ದೇಶ ಪೂರಿತ ಆರೋಪ ಮಾಡುವುದನ್ನು ಬಿಟ್ಟು ಛಲವಾದಿ ನಾರಾಯಣ ಸ್ವಾಮಿ ಕೊರಚ, ಕೊರಮ ಹಟ್ಟಿಗೆ ಬಂದು ವಾಸ್ತವ್ಯ ಹೂಡಿ ವಾಸ್ತವ ಅರಿಯಬೇಕೆಂದು ಅವರು ಆಗ್ರಹಿಸಿದರು.

ಪರಿಶಿಷ್ಟ ಜಾತಿ ಅಲೆಮಾರಿ, ಅರೆಅಲೆಮಾರಿ ಪಟ್ಟಿಲ್ಲಿರುವ ಸಮುದಾಯಗಳು ಯಾರದೋ ಸೌಲತ್ತುಗಳನ್ನು ಇನ್ಯಾರೋ ಕಿತ್ತುಕೊಂಡು ತಿನ್ನುವಷ್ಟು ಬಲಾಢ್ಯವಾಗಿಲ್ಲ ಹಾಗೂ ಸಂಘಟಿತ ಶಕ್ತಿಯೂ ಆಗಿಲ್ಲ. ಸಿದ್ದರಾಮಯ್ಯನವರ ಸರ್ಕಾರ ಈ ಕೋಶ ರಚಿಸಿದ ಬಳಿಕ ಸಮುದಾಯದಲ್ಲಿರುವವರು ನಿಧಾನಕ್ಕೆ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವ ಪ್ರಕ್ರಿಯೆ ಆರಂಭವಾಗಿದೆ.

ಇಷ್ಟರಲ್ಲೇ ಅಲೆಮಾರಿ ಪಟ್ಟಿಯಲ್ಲಿರುವ ಕೆಲ ಸಮುದಾಯದ ಪುಡಿ ನಾಯಕರು ಇಲ್ಲಸಲ್ಲದ ವಿಚಾರಗಳನ್ನು ತಮ್ಮ ತೆಲೆಯಲ್ಲಿ ತುಂಬಿಕೊಂಡು ಕೊರಚರು ಮತ್ತು ಕೊರಮದು ಅಲೆಮಾರಿ ಕೋಶದೊಳಗೆ ಮೀಸಲಾತಿ ಕಬಳಿಸುತ್ತಿದ್ದಾರೆ. ಹಾಗಾಗಿ ಆ ಸಮುದಾಯಗಳನ್ನು ಅಲೆಮಾರಿ ಕೋಶದಿಂದ ಹೊರಗೆ ಹಾಕಬೇಕೆಂಬ ಆಧಾರವಿಲ್ಲದ ಬೇಡಿಕೆಯನ್ನಿಟ್ಟುಕೊಂಡು ಹೋರಾಟ ಮಾಡುತ್ತಿರುವುದು ದುರದುಷ್ಟಕರ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹಿಂದಿನ ಅವಧಿಯಲ್ಲಿ ರಾಜ್ಯದಲ್ಲಿರುವ ಅಲೆಮಾರಿ, ಅರೆಅಲೆಮಾರಿ ಸಮುದಾಯಗಳ ಕುರಿತು ರಾಷ್ಟ್ರೀಯ ಕಾನೂನು ಶಾಲೆ ಮತ್ತು ಸಾಮಾಜಿಕ ಚಿಂತಕರನ್ನೊಂಗೊಂಡ ತಂಡದ ಮೂಲಕ ಅಧ್ಯಾಯನ ನಡೆಸಿ ಪರಿಶಿಷ್ಟ ಅಲೆಮಾರಿಗಳ ಪಟ್ಟಿಯಲ್ಲಿ (ಕೂರಚ, ಕೊರಮ ಸಮುದಾಯಗಳು) ೫೧ ಸಮುದಾಯಗಳಿವೆ.

ಆದರೆ, ೪೯ ಸಮುದಾಯಗಳೆಂದು ಸುಳ್ಳು ಮಾಹಿತಿ ನೀಡಿ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡಲಾಗುತ್ತಿದೆ. ಇದಕ್ಕೆ ಛಲವಾದಿ ನಾರಾಯಣಸ್ವಾಮಿ ತುಪ್ಪ ಸುರಿದು ದುಡಿಯುವ ಜನರ ನಡುವೆ ವಿಷ ಬೆರೆಸುವ ಕೆಲಸ ಮಾಡುತ್ತಿದ್ದಾರೆ. ಇವರು ಸುಮ್ಮನಿದ್ದರೆ ಸರಿ ಇಲ್ಲದಿದ್ದರೆ, ಹೋದಲ್ಲಿ ಬಂದಲ್ಲಿ ಕೊರಚ ಕೊರಮ ಸಂಘಟನೆಗಳ ಪ್ರತಿಭಟನೆ ಎದುರಿಸಬೇಕಾದಿತು ಎಂದು ಅವರು ಎಚ್ಚರಿಕೆ ನೀಡಿದರು.

ನಾರಾಯಣ ಸ್ವಾಮಿ ಭವಿಷ್ಯದಲ್ಲಿ ಎಲ್ಲಿ ಚುನಾವಣೆಗೆ ನಿಲ್ಲುತ್ತಾರೋ ಆ ಕ್ಷೇತ್ರದಲ್ಲಿ ಸುತ್ತಾಡಿ ಅವರ ವಿರುದ್ಧ ಪ್ರಚಾರ ಹಮ್ಮಿಕೊಳ್ಳಲಾಗುವುದು. ನಮ್ಮ ಜನಾಂಗದ ಸುದ್ದಿಗೆ ಬರದಂತೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಚಲವಾದಿ ನಾರಾಯಣಸ್ವಾಮಿಗೆ ಕರೆದು ಬುದ್ದಿ ಹೇಳಬೇಕು. ಇಲ್ಲದ್ದಿದರೆ, ಮುಂಬರುವ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಮತದಾನಕ್ಕೆ ಕರೆ ನೀಡಲಾಗುವುದು ಎಂದು ವೈ ಕುಮಾರ್ ಎಚ್ಚರಿಸಿದ್ದಾರೆ.
ಸುದ್ದಿ ಗೋಷ್ಟಿಯಲ್ಲಿ ರಾಮಣ್ಣ, ಫಕೀರಪ್ಪ ಉಪಸ್ಥಿತರಿದ್ದರು.

 

- Advertisement -  - Advertisement - 
Share This Article
error: Content is protected !!
";