ಚಂದ್ರವಳ್ಳಿ ನ್ಯೂಸ್, ಮಂಗಳೂರು:
ದಕ್ಷಿಣ ಕನ್ನಡ ತೆಂಗು ರೈತ ಉತ್ಪಾದಕರ ಸಂಸ್ಥೆಯು ತನ್ನ ಕಾರ್ಯಕ್ಷೇತ್ರವನ್ನು ರಾಜ್ಯಾದ್ಯಂತ ವಿಸ್ತರಿಸುವ ಭಾಗವಾಗಿ 247 ಫ್ರ್ಯಾಂಚೈಸಿಗಳನ್ನು ನೀಡಲು ತೀರ್ಮಾನಿಸಿದೆ. ಈ ಮೂಲಕ ಉದ್ಯಮಶೀಲರಿಗೆ ಮತ್ತು ಸಂಘ ಸಂಸ್ಥೆಗಳಿಗೆ ಸ್ವ–ಉದ್ಯೋಗ ಕಲ್ಪಿಸುವ ಉದ್ದೇಶ ಹೊಂದಿದೆ.
247 ಫ್ರ್ಯಾಂಚೈಸಿಗಳು ಸೇರಿದಂತೆ, ರಾಜ್ಯದ ಪ್ರತಿ ತಾಲೂಕಿನಲ್ಲಿ ವಿತರಣಾ ಕೇಂದ್ರಗಳನ್ನು ತೆರೆಯಲು ಸಂಸ್ಥೆ ಯೋಜಿಸಿದೆ. ಈ ಕೇಂದ್ರಗಳ ಮೂಲಕ ತೆಂಗಿನ ಐಸ್ಕ್ರೀಮ್, ತೆಂಗಿನ ಹಾಲಿನ ಜ್ಯೂಸ್, ತೆಂಗಿನ ಎಣ್ಣೆ, ಗೊಬ್ಬರಗಳು, ಟರ್ಪಾಲಿನ್ ಉತ್ಪನ್ನಗಳು, ಪೀಠೋಪಕರಣಗಳು ಸೇರಿದಂತೆ 32ಕ್ಕೂ ಹೆಚ್ಚು ಉತ್ಪನ್ನಗಳು ಮತ್ತು 24 ವಿವಿಧ ತಳಿಯ ತೆಂಗಿನ ಸಸಿಗಳು ಈ ಕೇಂದ್ರದಲ್ಲಿ ದೊರೆಯಲಿವೆ.
ಫ್ರ್ಯಾಂಚೈಸಿ ಪಡೆಯಲು ಆಸಕ್ತರು ಸಂಸ್ಥೆಯ ವೆಬ್ಸೈಟ್ (w ww.coconutfarmers.in) ಮೂಲಕ ಆನ್ಲೈನ್ ಅರ್ಜಿಯನ್ನು ಸಲ್ಲಿಸಬಹುದು ಅಥವಾ ಸಂಸ್ಥೆಯಿಂದ ಅರ್ಜಿಯನ್ನು ಪಡೆದು , ಭರ್ತಿ ಮಾಡಿ ಕೆವೈಸಿ ಜೊತೆಗೆ 65,000 ರೂ .ಗಳ DD /CHEQUE / ಬ್ಯಾಂಕ್ ವರ್ಗಾವಣೆ ದಾಖಲೆ ಲಗತ್ತಿಸಿ , ಸಂಸ್ಥೆಯ ಪ್ರಾದೇಶಿಕ ಕಛೇರಿಗೆ ಕಳುಹಿಸತಕ್ಕದ್ದು. ಆಯ್ಕೆಯಾದ ಫ್ರ್ಯಾಂಚೈಸಿಗಳಿಗೆ ಉತ್ಪನ್ನಗಳ ಬಗ್ಗೆ ಮಾಹಿತಿ, ತರಬೇತಿ, ಮತ್ತು ರಾಷ್ಟ್ರೀಕೃತ ಬ್ಯಾಂಕ್ ಮೂಲಕ ಹಣಕಾಸಿನ ನೆರವು ಒದಗಿಸಲಾಗುವುದು.
ರೈತರಿಂದಲೇ ಸ್ಥಾಪಿತವಾದ ದಕ್ಷಿಣ ಕನ್ನಡ ತೆಂಗು ರೈತ ಉತ್ಪಾದಕರ ಸಂಸ್ಥೆಯು ರೈತರಿಂದ ತೆಂಗಿನಕಾಯಿಗಳನ್ನು ನೇರವಾಗಿ ಸ್ಪರ್ಧಾತ್ಮಕ ದರದಲ್ಲಿ ಖರೀದಿಸುವುದಲ್ಲದೇ , ತೆಂಗಿನ ಎಲ್ಲಾ ಭಾಗಗಳನ್ನು ಮೌಲ್ಯವರ್ಧಿಸಿ, ಗುಣಮಟ್ಟದ ಉತ್ಪನ್ನಗಳನ್ನು ತಯಾರಿಸುತ್ತಿದೆ.
ಪ್ರತಿಷ್ಠಿತ CPCRI (ಕೇಂದ್ರೀಯ ತೋಟಗಾರಿಕಾ ಬೆಳೆಗಳ ಸಂಶೋಧನಾ ಸಂಸ್ಥೆ) ಅನುಮೋದಿತ ತಂತ್ರಜ್ಞಾನ ಬಳಸಿಕೊಂಡು ಸಂಸ್ಥೆಯು ತೆಂಗು ಕೃಷಿಯ ಪ್ರಯೋಜನವನ್ನು ರೈತರಿಗೆ ಮತ್ತು ಗ್ರಾಹಕರಿಗೆ ತಲುಪಿಸುವ ಮೂಲಕ ದೇಶದಲ್ಲೇ ಮಾದರಿಯಾಗಬಲ್ಲ ರೈತರ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದೆ.
ಸಂಪರ್ಕ ಮಾಹಿತಿಗಾಗಿ ದಕ್ಷಿಣ ಕನ್ನಡ ತೆಂಗು ರೈತ ಉತ್ಪಾದಕರ ಸಂಸ್ಥೆ, ಸೂರ್ಯ ನಾರಾಯಣ ದೇವಸ್ಥಾನದ ಹತ್ತಿರ, ಮರೋಳಿ, ಮಂಗಳೂರು– 575005, ದೂರವಾಣಿ: 8105487763, ಟೋಲ್ ಫ್ರೀ: 1800-203-0129, ಇಮೇಲ್: [email protected] ವೆಬ್ಸೈಟ್: www.coconutfarmers.in ಇವರನ್ನು ಸಂಪರ್ಕಿಸಬಹುದಾಗಿದೆ.