ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ತಾಲ್ಲೂಕಿನ ಸಿದ್ದಾಪುರ ಗ್ರಾಮದಲ್ಲಿ ಕಾರ್ತಿಕೋತ್ಸವದ ಪ್ರಯುಕ್ತ ದೊಡ್ಡ ರಥೋತ್ಸವ ಕಾರ್ಯಕ್ರಮವು ಸಂಭ್ರಮ–ಸಡಗರದಿಂದ ನಡೆಯಿತು.
ಈ ರಥೋತ್ಸವ ಕಾರ್ಯಕ್ರಮಕ್ಕೆ ಮೊದಲು ಗ್ರಾಮದ ಹನ್ನೆರಡು ಜನ ಕೈವಾಡಸ್ಥರ ಸಮ್ಮುಖದಲ್ಲಿ ತೇರಿಗೆ ಬಲಿಅನ್ನ ಸಮರ್ಪಿಸಲಾಯಿತು. ಪುರವಂತರ ವೀರನಾಟ್ಯದೊಂದಿಗೆ ನಂದಿಕೋಲುಗಳ ಕುಣಿತದೊಂದಿಗೆ ಶ್ರೀ ಈಶ್ವರಸ್ವಾಮಿಯ ಪಲ್ಲಕ್ಕಿ ಉತ್ಸವವು ವಿಜೃಂಭಣೆಯಿಂದ ನಡೆಯಿತು.
ಈ ಬಾರಿಯ ಶ್ರೀ ಈಶ್ವರಸ್ವಾಮಿಯ ಮುಕ್ತಿ ಬಾವುಟವನ್ನು ಗ್ರಾಮದ ಗೌಡರಾದ ಕರಿಯಣ್ಣ ಅವರ ಮಗ ತಿಪ್ಪೇಸ್ವಾಮಿ ಮಂಜುನಾಥ ಅವರು ಎಂಭತ್ತು ಸಾವಿರ ರೂಪಾಯಿಗಳಿಗೆ ಪಡೆದುಕೊಂಡರು.
ರಥೋತ್ಸವ ಕಾರ್ಯಕ್ರಮದಲ್ಲಿ ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ, ತಾಲ್ಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಗದ್ದಿಗೆ ತಿಪ್ಪೇಸ್ವಾಮಿ, ನಗರಂಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಗಳಮ್ಮ ರಂಗಸ್ವಾಮಿ, ಮುಖಂಡರಾದ ಯಲ್ಲಪ್ಪ, ಗಿರಿಯಪ್ಪ, ಪುರವಂತ ಮಂಜುನಾಥ,
ಗುಡಿಗೌಡ ರವೀಶ್, ಮಹೇಶಗೌಡ, ಕೃಷ್ಣಮೂರ್ತಿ, ಮಧುಸೂದನ್, ಮಂಜುನಾಥ ಯಾದವ್, ಮಹೇಶ್ ಈ, ಮೈಲಾರಿ, ಎಸ್.ಎನ್ ಗಂಗಮ್ಮ, ಮಲ್ಲೇಶ್, ಕೆ.ಪಿ.ದೇವರಾಜ್, ಗೊಂಚಿಗಾರ್ ನಾಗಭೂಷಣ, ಯತೀಶ್ ಎಂ ಸಿದ್ದಾಪುರ, ಶಂಕರಮ್ಮ, ಕೋಟಿ, ಎಂ ಯಶವಂತ್, ವೀರಭದ್ರಪ್ಪ ,ಶಿವು ಕಣೇಕಲ್ ಸೇರಿದಂತೆ ವಿವಿಧೆಡೆಗಳಿಂದ ಆಗಮಿಸಿದ ಭಕ್ತರು ಪಾಲ್ಗೊಂಡಿದ್ದರು.