ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
“ದೇಶಾದ್ಯಂತ ವೀರ ಬಾಲ ದಿನಾಚರಣೆ” ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ನಿರ್ಧಾರದಂತೆ ಇಂದು ದೇಶಾದ್ಯಂತ ‘ವೀರ ಬಾಲ ದಿನ‘ ವಾಗಿ ಆಚರಿಸಲಾಗುತ್ತಿದ್ದು, ಪಕ್ಷದ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ದಾಳಿಕೋರ ಔರಂಗಜೇಬ್ ಹಾಕಿದ ಜೀವ ಬೆದರಿಕೆಗೂ ಜಗ್ಗದೇ ಪ್ರಾಣಾರ್ಪಣೆ ಮಾಡಿದ್ದ ಗುರು ಗೋವಿಂದ ಸಿಂಗ್ ಅವರ ಪುತ್ರರಾದ ‘ಜೋರಾವರ್ ಸಿಂಗ್ ಮತ್ತು ಫತೆಹ್ ಸಿಂಗ್‘ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಆಚರಿಸಲಾಯಿತು. ಇದೇ ವೇಳೆ ಮಾನ್ಯ ಪ್ರಧಾನಿಗಳ ಭಾಷಣದ ಆಲಿಸಲಾಯಿತು.
ಹತ್ತುವರ್ಷ ವಯಸ್ಸನ್ನೂ ದಾಟದ ವೀರ ಮಕ್ಕಳ ಕಣ್ಣುಗಳಲ್ಲಿದ್ದ ಔರಂಗಜೇಬ್ ವಿರುದ್ಧದ ಜ್ವಾಲೆ, ಎಂಥವರನ್ನೂ ಮೀರಿಸುವಂತಿದ್ದ ಧೈರ್ಯ ಶೌರ್ಯ ಅವಿಸ್ಮರಣೀಯ. ತಾಯ್ನಾಡಿಗಾಗಿ ಬಲಿದಾನಗೈದ ಶೌರ್ಯ ಬಾಲಕರನ್ನು ಹೆಮ್ಮೆಯಿಂದ ಸ್ಮರಿಸಲಾಯಿತು. ಈ ಇಬ್ಬರೂ ಜೀವ ತೆತ್ತ ಸ್ಥಳ ಫತೆಹ್ ಗಢ ಸಾಹಿಬ್ ಇಂದು ಸಿಖ್ಖರ ಪುಣ್ಯಸ್ಥಳವಾಗಿರುವುದು ಹೆಮ್ಮೆಯ ಸಂಗತಿ.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ವಿರೋಧ ಪಕ್ಷ ನಾಯಕ ಚಲವಾದಿ ನಾರಾಯಣಸ್ವಾಮಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್, ಶಾಸಕರು ಹಾಗೂ ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ CKR, ರಾಜ್ಯ ಕಾರ್ಯದರ್ಶಿ ಸಿ ಮುನಿರಾಜು, ವಿನಯ್ ಬಿದರೆ, ಜಿಲ್ಲಾಧ್ಯಕ್ಷರಾದ ಎಸ್.ಹರೀಶ್, ಸಪ್ತಗಿರಿ ಗೌಡ ಸೇರಿದಂತೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

