ವೈದ್ಯಕೀಯ ವೃತ್ತಿ ಅತ್ಯಂತ ಪವಿತ್ರ- ಸಾಣೆಹಳ್ಳಿ ಡಾ.ಪಂಡಿತಾರಾಧ್ಯ ಶ್ರೀಗಳು

News Desk

ಚಂದ್ರವಳ್ಳಿ ನ್ಯೂಸ್, ಹೊಳಲ್ಕೆರೆ:
ವೈದ್ಯಕೀಯ ವೃತ್ತಿ ಅತ್ಯಂತ ಪವಿತ್ರವಾದುದು ಅಮೂಲ್ಯವಾದ ಪ್ರಾಣ ಉಳಿಸುವ ಜವಾಬ್ದಾರಿ ವೈದ್ಯರುಗಳ ಮೇಲಿದೆ ಎಂದು ಸಾಣೆಹಳ್ಳಿಯ
ಡಾ.ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.

ಕರ್ನಾಟಕ ರಾಜ್ಯ ವಿಶ್ರಾಂತ ನೌಕರರ ಸಾಂಸೃತಿಕ ಕ್ರೀಡೆ ಮನೋರಂಜನಾ ಕೇಂದ್ರ ಬೆಂಗಳೂರು, ಹೊಳಲ್ಕೆರೆ ಶಾಖೆ ಹಾಗೂ ಮಾರುತಿ ನಿವೃತ್ತ ನೌಕರರ ಸಂಘದ ಸಹಯೋಗದೊಂದಿಗೆ ಮಲ್ಲಾಡಿಹಳ್ಳಿ ಸಮೀಪವಿರುವ ಕೆಂಗುಂಟೆ ಗ್ರಾಮದಲ್ಲಿ ಇತ್ತೀಚೆಗೆ ಹಮ್ಮಿಕೊಳ್ಳಲಾಗಿದ್ದ ಸನ್ಮಾನ ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಮೂಕ ಪ್ರಾಣಿಗಳಿಗೆ ಚಿಕಿತ್ಸೆ ನೀಡುವ ಪಶುವೈದ್ಯರ ಸೇವೆಯೂ ಅತ್ಯಂತ ಶ್ರೇಷ್ಟವಾದುದು. ಹಾಗಾಗಿ ವೈದ್ಯರುಗಳು ಸಮಯಪ್ರಜ್ಞೆ ಮತ್ತು ಕರ್ತವ್ಯ ನಿಷ್ಟೆಯನ್ನು ಅಳವಡಿಸಿಕೊಳ್ಳಬೇಕು. ಎಲ್.ಬಿ.ರಾಜಪ್ಪನವರು ಸಾಧಕರನ್ನು ಗುರುತಿಸಿ ಸನ್ಮಾನಿಸುತ್ತಿರುವುದು ಬೇರೆಯವರಿಗೆ ಪ್ರೇರಣೆ ನೀಡಿದಂತಾಗಿದೆ ಎಂದು ಹೇಳಿದರು.

ಪಾಂಡೋಮಟ್ಟಿ ಕಮ್ಮತ್ತಳ್ಳಿ ವಿರಕ್ತ ಮಠದ ಡಾ.ಗುರುಬಸವಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ಮಾರುತಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಎನ್.ಸಿ.ರಾಜಣ್ಣ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಮಾರುತಿ ನಿವೃತ್ತ ನೌಕರರ ಸಂಘದ ಸಂಸ್ಥಾಪಕ ಕೆಂಗುಂಟೆಯ ಡಿ.ಹೆಚ್.ಪರಮೇಶ್ವರಪ್ಪ, ಕರ್ನಾಟಕ ರಾಜ್ಯ ವಿಶ್ರಾಂತ ನೌಕರರ ಸಾಂಸ್ಕೃತಿಕ ಕ್ರೀಡೆ ಮನೋರಂಜನಾ ಕೇಂದ್ರದ ಅಧ್ಯಕ್ಷ ಎಲ್.ಬಿ.ರಾಜಪ್ಪ ಕೆಂಗುಂಟೆ ಇವರುಗಳು ವೇದಿಕೆಯಲ್ಲಿದ್ದರು.

ವೈದ್ಯರುಗಳಾದ ಎಸ್.ಬಿ.ಲಕ್ಕೋಳ್, ಪ್ರಸಾದ ಎನ್.ಸಿ. ಅಶ್ವಿನಿ ಡಿ.ಹೆಚ್. ಕಿರಣ್ ಎಲ್.ಜೆ. ಶ್ರೀಪತಿ ಎನ್.ಇ. ಟಿ.ಎಸ್.ಲಕ್ಕೋಳ್, ಪವನ್ ಎಲ್.ಪಿ. ಪೂಜಾ ಎಲ್.ಪಿ.

ಪಾವನ ಎನ್.ಎಸ್. ದಾಕ್ಷಾಯಿಣಿ ಡಿ.ಆರ್. ಎನ್.ಸಿ.ಪ್ರವೀಣ್, ರಶ್ಮಿ ಕೆ.ಜಿ. ಲೋಹಿತ್‌ಕುಮಾರ್ ಎಲ್.ಜೆ. ರಾಜು ಎಲ್.ಪಿ. ಶುಭ ಬಿ.ಎಸ್. ಹೇಮಂತ್ ಉಪಾಧ್ಯಾಯ ಎಸ್.ಇ. ಸಂದೇಶ್ ಕುಮಾರ್ ಲಕ್ಕೋಳ್, ಪಶು ವೈದ್ಯರುಗಳಾದ ಪ್ರಕಾಶ್ ಒ.ಎಸ್. ಸತೀಶ್ ಹೆಚ್.ಗಟ್ಟಿ, ಡಾಕ್ಟರೇಟ್ ಪದವೀಧರರುಗಳಾದ ರಾಜಪ್ಪ ಬಿ. ಪ್ರಭಾಕರ್ ಲಕ್ಕೋಳ, ರವಿ ಎಸ್.ಪಿ. ಎನ್.ಬಿ.ಗಟ್ಟಿ, ಕುಬೇರಪ್ಪ ಜಿ.ಸಿ. ಜ್ಞಾನೇಶ ಕೆ.ಎನ್. ಶಶಿಧರ ಟಿ.ಆರ್. ಮಂಜುನಾಥ ಎಲ್.ಎಂ. ಸವಿತ ಜಿ.ಲಕ್ಕೋಳ್ ಇವರುಗಳನ್ನು ಸನ್ಮಾನಿಸಲಾಯಿತು.

 

 

- Advertisement -  - Advertisement - 
Share This Article
error: Content is protected !!
";