ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಾಂಗ್ರೆಸ್ ಸರ್ಕಾರದಲ್ಲಿ ಯಾರಿಗೂ ನೆಮ್ಮದಿ ಇಲ್ಲ. ಸಚಿವರು ಮತ್ತು ಕರ್ನಾಟಕ ಕಾಂಗ್ರೆಸ್ ಶಾಸಕರ ಲಂಚದಾಹ ಮತ್ತು ಕಿರುಕುಳಕ್ಕೆ ಅಮಾಯಕ ಅಧಿಕಾರಿಗಳು , ಗುತ್ತಿಗೆದಾರರನ್ನು ಬಲಿ ಪಡೆಯುತ್ತಲೇ ಇದೆ ಎಂದು ಜೆಡಿಎಸ್ ವಾಗ್ದಾಳಿ ಮಾಡಿದೆ.
ಸಚಿವ ಪ್ರಿಯಾಂಕ್ ಖರ್ಗೆ ಆಪ್ತನ ಕಿರುಕುಳಕ್ಕೆ ಗುತ್ತಿಗೆದಾರನೊಬ್ಬ ಡೆತ್‌ನೋಟ್‌ಬರೆದಿಟ್ಟು ಆತ್ಮಹತ್ಯೆಗೆ ಮಾಡಿಕೊಂಡಿದ್ದಾರೆ. ಪ್ರಿಯಾಂಕ್‌ಖರ್ಗೆ ಆಪ್ತ ಕಲಬುರಗಿ ಮಹಾನಗರ ಪಾಲಿಕೆಯ ಮಾಜಿ ಕಾರ್ಪೊರೇಟರ್‌ರಾಜು ಕಪನೂರ 15 ಲಕ್ಷ ಹಣ ಪಡೆದು ಟೆಂಡರ್‌ನೀಡದೆ ವಂಚಿಸಿ, ಮತ್ತೆ 1 ಕೋಟಿ ಹಣಕ್ಕೆ ಬೇಡಿಕೆ ಇಟ್ಟು ಕೊಲೆ ಬೆದರಿಕೆ ಹಾಕಿದ್ದರು ಎಂದು ಗಂಭೀರ ಆರೋಪಗಳನ್ನು ಮಾಡಿ ಗುತ್ತಿಗೆದಾರ ಸಚಿನ್‌ಪಂಚಾಳ ಎಂಬುವರು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಸಾಲು ಸಾಲು ಅಧಿಕಾರಿಗಳು, ಗುತ್ತಿಗೆದಾರರು ಕಾಂಗ್ರೆಸ್‌ಶಾಸಕರು ಮತ್ತು ಮಂತ್ರಿಗಳ ಮೇಲೆಯೇ ಗಂಭೀರ ಆರೋಪಗಳನ್ನು ಮಾಡಿ ಪ್ರಾಣಕಳೆದುಕೊಳ್ಳುತ್ತಿದ್ದಾರೆ. ಸಿದ್ದರಾಮಯ್ಯ ಸರ್ಕಾರದಲ್ಲಿ “ಆತ್ಮಹತ್ಯೆ ಗ್ಯಾರಂಟಿ”ಯೇ ಹೆಚ್ಚು ಕುಖ್ಯಾತಿ ಪಡೆಯುತ್ತಿದೆ ಎಂದು ಜೆಡಿಎಸ್ ಟೀಕಿಸಿದೆ.

