Ad imageAd image

ಮಹಿಳೆಯರ ರಾಷ್ಟ್ರೀಯ ಟೆನ್ನಿಸ್ ಬಾಲ್ ಕ್ರಿಕೆಟ್ ಚಾಂಪಿಯನ್ ಶಿಪ್ ಕ್ರೀಡೆಗೆ ಸ್ಪಂದನಾ ಆಯ್ಕೆ 

News Desk

ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ:
ಉತ್ತರ ಪ್ರದೇಶದ ವಾರಣಾಸಿಯಲ್ಲಿ ಜನವರಿ 3 ರಿಂದ ನಡೆಯಲಿರುವ ರಾಷ್ಟ್ರೀಯ ಮಹಿಳೆಯರ ಟೆನ್ನಿಸ್ ಬಾಲ್ ಕ್ರಿಕೆಟ್ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಲಿರುವ ಕರ್ನಾಟಕ ರಾಜ್ಯ ಮಹಿಳೆಯರ ಟೆನ್ನಿಸ್ ಬಾಲ್ ಕ್ರಿಕೆಟ್ ತಂಡಕ್ಕೆ ಶಿವಮೊಗ್ಗದ ಗಾಡಿಕೊಪ್ಪದ ಜ್ಞಾನ ಗಂಗಾ ಶಾಲೆಯ ವಿದ್ಯಾರ್ಥಿನಿ ಸ್ಪಂದನಾ.ಆರ್.ಗುಡಿಗಾರ ಆಯ್ಕೆಯಾಗಿದ್ದಾರೆ.

ಮಧ್ಯಮ ವೇಗದ ಬೌಲಿಂಗ್ ಆಲ್-ರೌಂಡರ್ ಆಗಿರುವ ಸ್ಪಂದನಾ ಆಯ್ಕೆ ಹಾಗೂ ಆಯ್ಕೆಯಾಗಿರುವ ಆಟಗಾರ್ತಿಯರ ಹೆಸರುಗಳ ತಂಡದ ಪಟ್ಟಿಯನ್ನು ರಾಜ್ಯ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಡಾ. ಅಶೋಕ್ ಕುಮಾರ್ ಜಾಧವ್ ಬಿಡುಗಡೆಗೊಳಿಸಿದ್ದಾರೆ.

ಇದೇ ಡಿಸೆಂಬರ್ 31 ರಂದು ತಂಡವು ವಾರಣಾಸಿಗೆ ಪ್ರಯಾಣ ಬೆಳೆಸಲಿದ್ದು, ವಿದ್ಯಾರ್ಥಿನಿ ಸ್ಪಂದನಾಳ ಈ ಸಾಧನೆಗೆ ಜ್ಞಾನ ಗಂಗಾ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಎಂ. ಎನ್. ದಿನೇಶ್, ಸಂಸ್ಥಾಪಕ ಬಿ. ಶೇಖರಪ್ಪ ಹಾಗೂ ಶಾಲೆಯ ಸಿಬ್ಬಂದಿ ವರ್ಗದವರು ಅಭಿನಂದಿಸಿ ಶುಭ ಕೋರಿದ್ದಾರೆ.

 

 

- Advertisement -  - Advertisement - 
Share This Article
error: Content is protected !!
";