Ad imageAd image

ರಾಜ್ಯದಲ್ಲಿ ಹಮಾಸ್‌ಬಂಡುಕೋರರ ಸರ್ಕಾರ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದಲ್ಲಿ ಹಮಾಸ್‌ಬಂಡುಕೋರರು ಸರ್ಕಾರ ನಡೆಸುತ್ತಿದ್ದಾರೆಯೇ ಎನ್ನುವ ಅನುಮಾನ ಬಲಗೊಳ್ಳುತ್ತಿದೆ ಎಂದು ಬಿಜೆಪಿ ಸಂಶಯ ವ್ಯಕ್ತಪಡಿಸಿದೆ.

ವಿಪಕ್ಷಗಳ ಜನಪ್ರತಿನಿಧಿ, ನಾಯಕರ ಮೇಲೆ ಸಾಲು ಸಾಲು ಹಲ್ಲೆ ಪ್ರಕರಣ, ಹತ್ಯಾ ಯತ್ನ ಪ್ರಕರಣಗಳು ಕೇಳಿ ಬರುತ್ತಿದೆ ಎಂದು ಬಿಜೆಪಿ ಆತಂಕ ವ್ಯಕ್ತಪಡಿಸಿದೆ.

ಈ ಮೊದಲು ಸುವರ್ಣ ಸೌಧದೊಳಗೆ ಪರಿಷತ್‌ಸದಸ್ಯರ ಮೇಲೆ ಹಲ್ಲೆ ಮಾಡಿ, ಬಂಧಿಸಿದ ಬಳಿಕ ಎನ್‌ಕೌಂಟರ್‌ಮಾಡಲು ಸರ್ಕಾರ ಯತ್ನಿಸಿತ್ತು. ಬಳಿಕ ಸಾರ್ವಜನಿಕ ಸ್ಥಳದಲ್ಲಿ ಶಾಸಕರ ಮೇಲೆಯೇ ಮೊಟ್ಟೆ ದಾಳಿ ನಡೆಸಿ, ಹತ್ಯೆಯ ಬೆದರಿಕೆ ಹಾಕಲಾಗಿತ್ತು. ಇದೀಗ ಖರ್ಗೆ ಕುಟುಂಬದ ವಿರುದ್ಧ ಕೇಳಿ ಬಂದಿರುವ ಕಿಕ್‌ಬ್ಯಾಕ್‌ಪ್ರಕರಣದಲ್ಲಿ ಬಿಜೆಪಿ ಶಾಸಕ ಬಸವರಾಜ್‌ಮತ್ತಿಮೂಡ, ಬಿಜೆಪಿ ನಾಯಕರಾದ ಚಂದು ಪಾಟೀಲ್‌, ಮಣಿಕಂಠ ರಾಥೋಡ್‌ಹಾಗೂ ಆಂದೋಲ ಸ್ವಾಮೀಜಿಯವರನ್ನು ಹತ್ಯೆ ಮಾಡಲು ಖರ್ಗೆ ಆಪ್ತರು ಸುಪಾರಿ ನೀಡಿರುವ ಮಾಹಿತಿ ಬಹಿರಂಗವಾಗಿದೆ ಎಂದು ಬಿಜೆಪಿ ಆತಂಕ ವ್ಯಕ್ತಪಡಿಸಿದೆ.

ಸಚಿವ ಪ್ರಿಯಾಂಕ್ ಖರ್ಗೆ ಆಪ್ತರ ಬೆದರಿಕೆ, ಕಿರುಕುಳ ಮತ್ತು ವಂಚನೆಯಿಂದ ಆತ್ಮಹತ್ಯೆ ಮಾಡಿಕೊಂಡಿರುವ ಗುತ್ತಿಗೆದಾರ ಸಚಿನ್‌ಪಾಂಚಾಳ ಅವರ ಡೆತ್‌ನೋಟ್‌ನಲ್ಲಿ ಗಂಭೀರವಾದ ಆರೋಪಗಳಿದ್ದು, ಕಾಂಗ್ರೆಸ್ಸಿನ ಪ್ರಭಾವಿ ಹುದ್ದೆಯಲ್ಲಿರುವ ಮಲ್ಲಿಕಾರ್ಜುನ ಖರ್ಗೆ ಕುಟುಂಬ ವಿರುದ್ಧದ ದೂರನ್ನು ಈ ಸರ್ಕಾರ ಗಂಭೀರವಾಗಿ ತೆಗೆದುಕೊಂಡಂತೆ ಕಾಣುತ್ತಿಲ್ಲ.

ಜನಪ್ರತಿನಿಧಿಗಳನ್ನು, ರಾಜಕೀಯ ವೈರಿಗಳನ್ನು ಹತ್ಯೆ ಮಾಡುವ ಹಂತಕ್ಕೆ ಕಾಂಗ್ರೆಸ್‌ಸರ್ಕಾರ ಮುಂದುವರೆದಿರುವುದು ಆತಂಕಕಾರಿ ಬೆಳವಣಿಗೆ. ರಕ್ತಸಿಕ್ತ ರಾಜಕಾರಣಕ್ಕೆ ಕರ್ನಾಟಕ ಕಾಂಗ್ರೆಸ್ ಮುನ್ನುಡಿ ಬರೆಯುತ್ತಿದೆಯೇ ? ಎಂದು ಬಿಜೆಪಿ ಅನುಮಾನ ವ್ಯಕ್ತಪಡಿಸಿದೆ.

 

- Advertisement -  - Advertisement - 
Share This Article
error: Content is protected !!
";