Ad imageAd image

ಸರ್ವರ್‌ ಸಮಸ್ಯೆ ಆಡಳಿತ ಯಂತ್ರ ಕುಸಿತ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಾಂಗ್ರೆಸ್‌ಸರ್ಕಾರದಲ್ಲಿ ಸಂಪೂರ್ಣ ಆಡಳಿತ ಯಂತ್ರವೇ ಕುಸಿದು ಬಿದ್ದಿದೆ ಎಂದು ಜೆಡಿಎಸ್ ಆರೋಪಿಸಿದೆ.

ಕಾವೇರಿ-2 ತಂತ್ರಾಂಶ ಸರ್ವರ್‌ಸಮಸ್ಯೆಯಿಂದ ರಾಜ್ಯದೆಲ್ಲೆಡೆ ಆಸ್ತಿ ನೋಂದಣೆ, ಆಸ್ತಿ ಪತ್ರ ಕ್ರಯ, ವಿಭಜನೆ, ಒಪ್ಪಂದ ಪ್ರಕ್ರಿಯೆಗಳಿಗಾಗಿ ಉಪ ನೋಂದಣಾಧಿಕಾರಿಗಳ ಕಚೇರಿಗಳಿಗೆ ಸಾರ್ವಜನಿಕರು, ಇಡೀ ಕುಟುಂಬದವರು ದಿನವೀಡಿ ಕಾಯುವ ಶಿಕ್ಷೆಯನ್ನು ನೀಡಿದೆ ಎಂದು ಜೆಡಿಎಸ್ ಕಿಡಿಕಾರಿದೆ.

ಭ್ರಷ್ಟ ಕರ್ನಾಟಕ ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಯಾವುದೊಂದು ಸರಿ ಇಲ್ಲ. ಪಡಿತರ ವಿತರಣೆಯಲ್ಲೂ ಸಮಸ್ಯೆ, ಉಪ ನೋಂದಣಾಧಿಕಾರಿ ಕಚೇರಿ ಸೇರಿದಂತೆ ಬಹುತೇಕ ಸರ್ಕಾರದ ಎಲ್ಲಾ ಇಲಾಖೆಗಳಲ್ಲೂ ಸರ್ವರ್‌ಡೌನ್‌ಸಮಸ್ಯೆ ಮಾಮೂಲಿಯಾಗಿದ್ದು ಜನರು ಸಿದ್ದರಾಮಯ್ಯ ಸರ್ಕಾರಕ್ಕೆ ಶಾಪ ಹಾಕುತ್ತಿದ್ದಾರೆ ಎಂದು ಜೆಡಿಎಸ್ ಟೀಕಿಸಿದೆ.

 

 

- Advertisement -  - Advertisement - 
Share This Article
error: Content is protected !!
";