ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ತಳಕು ಹೋಬಳಿಯ ಕೋಡಿಹಳ್ಳಿ ಗ್ರಾಮದಲ್ಲಿ ಶನಿವಾರ ಗ್ರಾಮಿಣ ಜಾನಪದ ಶೈಲಿಯ ತಮಟೆ ನಗಾರಿ ಉರುಮೆ ನಂದಿಕೋಲು, ವಿವಿಧ ಜಾನಪದ ಕಲಾ ತಂಡಗಳೊಂದಿಗೆ ಶ್ರೀ ಬಸವೇಶ್ವರ ಸ್ವಾಮಿ ಹಾಗೂ ಚೌಡೇಶ್ವರಿ ದೇವಿಯ ಕಾರ್ತಿಕೋತ್ಸವದ ರಥೋತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ ನಡೆಯಿತು.
ರಥೋತ್ಸವವನ್ನು ಬಣ್ಣ ಬಣ್ಣದ ಬಾವುಟಗಳಿಂದ, ಹೂವಿನ ಹಾರಗಳಿಂದ ಶೃಂಗಾರ ಮಾಡಲಾಯಿತು. ಶೃಂಗಾರ ಮಾಡಲಾಗಿದ್ದ ರಥದಲ್ಲಿ ಶ್ರೀ ಬಸವೇಶ್ವರ ಸ್ವಾಮಿ ಉತ್ಸವ ಮೂರ್ತಿಯನ್ನು ಸಕಲ ಪೂಜಾ ವಿಧಿ ವಿಧಾನಗಳಿಂದ ಪ್ರತಿಷ್ಠಾಪಿಸಲಾಯಿತು.
ಗ್ರಾಮದ ಭಾರಿ ವಂಶಸ್ಥರಾದ ವೀರಮ್ಮ ವಜ್ರಪ್ಪ ಮತ್ತು ಮಕ್ಕಳ ಕುಟುಂಬದ ವತಿಯಿಂದ ಬಲಿ ಅನ್ನ, ಕಾಸು ಮೀಸಲು ತುಂಬಾ ಮೊಸರು, ಜಿನಿಗಿ ಹಾಲು ತಂದು ಶ್ರೀ ಬಸವೇಶ್ವರ ಸ್ವಾಮಿ ತೇರಿನ ಚಕ್ರಗಳಿಗೆ ಎಡೆ ಹಾಕಿ ಮಹಾ ಮಂಗಳಾರತಿ ನೆರವೇರಿಸಿ ಗ್ರಾಮಸ್ಥರು ಹಾಗೂ ಮುಖಂಡರು ರಥೋತ್ಸವಕ್ಕೆ ಚಾಲನೆ ನೀಡಿದರು.
ಭವ್ಯವಾದ ಮೆರವಣಿಗೆಯು ವಿವಿಧ ರೀತಿಯ ನೃತ್ಯಗಳು ಡೊಳ್ಳು ಕುಣಿತ, ಕೀಲು ಕುದುರೆ, ಹೂವು ದವನ ಹಣ್ಣು ಕಾಯಿ ಸ್ವಾಮಿಗೆ ಮತ್ತು ರಥೋತ್ಸವಕ್ಕೆ ಭಕ್ತರು ಸಮರ್ಪಿಸಿದರು. ಮಂಗಳ ವಾದ್ಯಗಳೊಂದಿಗೆ ಗ್ರಾಮದ ಕೆರೆಕಟ್ಟೆಯ ಸಮೀಪ ಇರುವ ಪಾದಗಟ್ಟೆ ಬಳಿ ಸೇರಿತು.
ಈ ಬಾರಿಯ ಮುಕ್ತಿ ಬಾವುಟವನ್ನು ಸೂರಯ್ಯನವರ ಪುತ್ರ ತಿಪ್ಪೇಸ್ವಾಮಿ ಅವರು ಹರಾಜಿನಲ್ಲಿ ತಮ್ಮದಾಗಿಸಿಕೊಂಡು ಸ್ವಾಮಿಯ ಕೃಪೆಗೆ ಪಾತ್ರರಾದರು.
ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ದೊಡ್ಡ ಓಬಯ್ಯ ಮಾತನಾಡಿ 50 ವರ್ಷಗಳ ನಂತರ ಗ್ರಾಮದ ಕೆರೆ ತುಂಬಿ ಕೋಡಿ ಬಿದ್ದಿರುವುದು ಅತ್ಯಂತ ಸಂತಸದ ವಿಷಯ ಒಂದೆಡೆಯಾದರೆ, ಮೂರು ದಿನಗಳ ಹಿಂದೆ ಗ್ರಾಮದ ಹಿರಿಯ ಮುಖಂಡರು ಹಾಗೂ ಡಿ.ಸಿ.ಸಿ ಬ್ಯಾಂಕ್ ಜಿಲ್ಲಾ ಉಪಾಧ್ಯಕ್ಷ ಎಸ್.ಪಾಲಯ್ಯ ರವರನ್ನು ಕಳೆದುಕೊಂಡು ಗ್ರಾಮಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಗ್ರಾಮದ ಮುಖಂಡ ಜಿ.ತಿಪ್ಪೇಸ್ವಾಮಿ ಮಾತನಾಡಿ ಪ್ರತಿ ವರ್ಷದಂತೆ ಈ ವರ್ಷವೂ ಎಲ್ಲ ಸಮುದಾಯದವರು ಪಾಲ್ಗೊಂಡು ರಥೋತ್ಸವವನ್ನು ಯಶಸ್ವಿಗೊಳಿಸಿದರು. ಶರಣ ಬಸವೇಶ್ವರ ಸ್ವಾಮಿ ಹಾಗೂ ಶ್ರೀ ಚೌಡೇಶ್ವರಿ ದೇವಿಯು ಗ್ರಾಮದ ಎಲ್ಲ ಸದ್ಭಕ್ತರಿಗೆ ಒಳ್ಳೆಯ ಆಯುಷ್ ಆರೋಗ್ಯ ನೀಡಿ ಕಾಪಾಡಲಿ ಹಾಗೆ ಒಳ್ಳೆಯ ಮಳೆ ಬೆಳೆ ಸಮೃದ್ಧಿಯಾಗಲಿ ಎಂದು ಪ್ರಾರ್ಥಿಸಿದರು.
ಗ್ರಾಮದ ಶ್ರೀ ಚೌಡೇಶ್ವರಿ ಯುವಕ ನಾಟ್ಯ ಕಲಾ ಸಂಘದ ವತಿಯಿಂದ ಶನಿವಾರ ರಾತ್ರಿ ” ಗರುಡನ ಕೈಗೆ ಸಿಕ್ಕಿ ಬರಡಾದ ಪಾರಿವಾಳ ಅರ್ಥಾತ್ ಪ್ರೇಮ ಲೋಕದಲ್ಲಿ ಪಾರಿಜಾತ” ಎಂಬ ಸುಂದರ ಸಾಮಾಜಿಕ ನಾಟಕ ಪ್ರದರ್ಶನ ಏರ್ಪಡಿಸಲಾಗಿತ್ತು.
ಈ ಸಂದರ್ಭದಲ್ಲಿ ಶ್ರೀ ವಾಲ್ಮೀಕಿ ಯುವಕ ಸಂಘ, ಶ್ರೀ ವೇಮನ ರೆಡ್ಡಿ ಸಂಘ, ಡಾ. ಬಿ.ಆರ್ ಅಂಬೇಡ್ಕರ್ ಯುವಕ ಸಂಘ, ವಿವಿಧ ಮಹಿಳಾ ಸಂಘಟನೆಗಳ ಪದಾಧಿಕಾರಿಗಳು, ಸದಸ್ಯರು, ಯುವಕರು, ಗ್ರಾಮದ ಮುಖಂಡರಾದ ಬಾಲಯ್ಯ, ಓಬಣ್ಣ, ಬಸಯ್ಯ, ಪಾಲಯ್ಯ, ಗೋಪಣ್ಣ, ರೈತರಾದ ನಾಗರಾಜ್, ತಿಪ್ಪೇಸ್ವಾಮಿ, ಸೋಮಶೇಖರ್, ಲಿಂಗಾರೆಡ್ಡಿ, ಭೀಮರೆಡ್ಡಿ, ರುದ್ರಣ್ಣ, ಬಸವ ರೆಡ್ಡಿ, ಓಬಯ್ಯ, ಟಿ.ರಾಜಣ್ಣ,
ಪಿ.ಪ್ರಹ್ಲಾದ್, ಗ್ರಾಮ ಪಂಚಾಯಿತಿ ಸದಸ್ಯರಾದ ಎಸ್. ಟಿ. ರೇವಣ್ಣ, ಟಿ. ರಾಜಣ್ಣ, ದ್ರಾಕ್ಷಾಯಿಣಿ ನಾಗರಾಜ್, ಡಿ.ಓ ಲಕ್ಷ್ಮಿ , ಲಕ್ಷ್ಮೀದೇವಿ ತಿಪ್ಪೇಸ್ವಾಮಿ, ಸಣ್ಣ ನಾಗಯ್ಯ, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಹೆಚ್ ತಿಪ್ಪೇಸ್ವಾಮಿ, ಪುಟ್ಟಣ್ಣ, ತಿಪ್ಪೇಸ್ವಾಮಿ, ಓಬಣ್ಣ, ಮಂಜಣ್ಣ, ಡಾ.ಮುನಿಸ್ವಾಮಿ ರೆಡ್ಡಿ, ಮಲ್ಲಿಕಾರ್ಜುನಯ್ಯ.ಟಿ, ಲಿಂಗರಾಜ್.ಡಿ,
ರುದ್ರಮುನಿ, ಮಂಜುನಾಥ್,ಎಂ.ಟಿ, ವಿನಯ್ ಕುಮಾರ್ ಬಿ.ಎಂ, ಶಿವಕುಮಾರ್ ಭಾರಿ, ಭಿಮೇಶ್ ಶೆಟ್ಟಿ, ತಿಮ್ಮಶೆಟ್ಟಿ, ಶ್ರೀನಿವಾಸ್, ಮಂಜುನಾಥ್ ಸ್ವಾಮಿ.ಟಿ ಶಾಂತಣ್ಣ, ಗುರುಸ್ವಾಮಿ, ಮಾರಣ್ಣ, ಹನುಮಂತಪ್ಪ,ಗಂಗಣ್ಣ, ದುರುಗಣ್ಣ, ಸಣ್ಣ ತಿಪ್ಪೇಸ್ವಾಮಿ ಮುಂತಾದವರು ಉಪಸ್ಥಿತರಿದ್ದರು.