ಚಂದ್ರವಳ್ಳಿ ನ್ಯೂಸ್, ಮೊಳಕಾಲ್ಮೂರು:
ಕರ್ನಾಟಕ ಏಕೀಕರಣ ರಕ್ಷಣಾ ಸೇನಾ ಸಮಿತಿ ಚಿತ್ರದುರ್ಗ ಜಿಲ್ಲಾ ಘಟಕ ವತಿಯಿಂದ ಮೊಳಕಾಲ್ಮೂರು ತಾಲೂಕಿನ ರಾಯಪುರ ಅಲೆಮಾರಿ ಕಾಲೋನಿಯಲ್ಲಿ ನಡೆದ ಸದಸ್ಯತ್ವ ನೋಂದಣಿ ಅಭಿಯಾನ ಕಾರ್ಯಕ್ರಮವನ್ನು ಕರ್ನಾಟಕ ಏಕೀಕರಣ ರಕ್ಷಣಾ ಸೇನಾ ಸಮಿತಿ ಸಂಸ್ಥಾಪಕ ರಾಜ್ಯಾಧ್ಯಕ್ಷ ಪಿ ಶೇಖರ್ ಚಾಲನೆ ನೀಡಿ ಮಾತನಾಡಿ
ಕನ್ನಡ ನಾಡು ನುಡಿ ನೆಲೆ ಜಲ ಭಾಷೆ ಗಡಿ ಅಭಿವೃದ್ಧಿ ವಿಚಾರದಲ್ಲಿ ಕನ್ನಡ ನಾಡು ನುಡಿ ಸಂಸ್ಕೃತಿಯ ಉಳಿವಿಗಾಗಿ ತಳ ಸಮುದಾಯಗಳ ಯುವಕರು ಮುಂದಾಗಬೇಕು. ಕನ್ನಡ ಜಾಗೃತಿಗಾಗಿ ಕೈ ಜೋಡಿಸಬೇಕು. ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಅಲೆಮಾರಿ ಸಮುದಾಯವರು ಮುಂದಾಗಬೇಕು ಎಂದು ತಿಳಿಸಿದರು.
ಕರ್ನಾಟಕ ಏಕೀಕರಣ ರಕ್ಷಣಾ ಸೇನಾ ಸಮಿತಿ ಜಿಲ್ಲಾಧ್ಯಕ್ಷ ಬಿಎಸ್‌ಮಂಜಣ್ಣ, ಪ್ರದಾನ ಕಾರ್ಯದರ್ಶಿ ಮರಿಸ್ವಾಮಿ, ಬಯಲಾಟ ಅಕಾಡೆಮಿ ಸದಸ್ಯ ಬಿ ಮಾರನಾಯಕ, ಮಾಜಿ ಗ್ರಾಪಂ ಅಧ್ಯಕ್ಷ ಪಾಪಣ್ಣ, ಮುಖಂಡರಾದ ಪಾಂಡೆಪ್ಪ, ಗಂಗಾಧರ್, ಅಂಜಿನಪ್ಪ, ರೆಡ್ಡೆಪ್ಪ, ರವಿಕುಮಾರ್ ಇತರರು ಇದ್ದರು.