ಮಹಾ ಮೌನಿ ಮನಮೋಹನ್ ಸಿಂಗ್ ದೇಶಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ-ಎ.ನಾಗರಾಜ್

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
92 ವರ್ಷಗಳ ಕಾಲ ತುಂಬು ಜೀವನವನ್ನು ನಡೆಸಿದಂತಹ ಕಾಂಗ್ರೆಸ್ನ ಧೀಮಂತ ನಾಯಕ, ಪಕ್ಷಾತೀತವಾಗಿ ಎಲ್ಲಾ ಪಕ್ಷಗಳ ಗೌರವವನ್ನು ಪಡೆದಂತಹ ನಾಯಕ ಭಾರತದ ಅರ್ಥವ್ಯವಸ್ಥೆಯ ಸುಧಾರಣೆಯಲ್ಲಿ ಮೈಲುಗಲ್ಲನ್ನು ನೆಟ್ಟಂತಹ ನಾಯಕ, ಮಾತಿನ ನಾಯಕರಾಗದೆ ಕಾಯಕದ ಮೂಲಕ ತಮ್ಮನ್ನು ತಾವು ತೊಡಗಿಸಿಕೊಂಡ ಧೀಮಂತ ನಾಯಕ ಡಾ.ಮನಮೋಹನ್ ಸಿಂಗ್ ಆಗಿದ್ದರು ಎಂದು

ಅಖಂಡ ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕ ಅಧ್ಯಕ್ಷ ನಾಗರಾಜ್ ಎ ಪರಶುರಾಂಪುರ ರವರು ಮನಮೋಹನ್ ಸಿಂಗ್ ರವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ವೇದಾವತಿ ನದಿಯ ದಡದ ತೀರ ಈಶ್ವರ ದೇವಸ್ಥಾನದ ಹತ್ತಿರ ಪವಿತ್ರವಾದ ನದಿಯ ನೀರನ್ನು ಕಾವೇರಿ ನೀರಿನಷ್ಟೇ ಪವಿತ್ರ ಎಂದು ತಿಳಿದು ಮನಮೋಸಿಂಗ್ ರವರ ಭಾವಚಿತ್ರಕ್ಕೆ ನದಿಯ ನೀರನ್ನು ಅಭಿಷೇಕ ಮಾಡುವುದರ ಮುಖಾಂತರ ಶ್ರದ್ಧಾಂಜಲಿ ಅರ್ಪಿಸಿದರು.

1991ರಲ್ಲಿ ಮೊದಲ ಬಾರಿಗೆ ರಾಜ್ಯಸಭೆ  ಪ್ರವೇಶಿಸಿ ಪಿವಿ ನರಸಿಂಹರಾವ್ರವರ ಸಂಪುಟದಲ್ಲಿ ಹಣಕಾಸು ಸಚಿವರಾಗಿ ಕಾರ್ಯನಿರ್ವಹಿಸುತ್ತ ಆರ್ಥಿಕ ಸುಧಾರಣೆಗಳಾದ ಉದಾರೀಕರಣ, ನೀತಿಗಳನ್ನು ಜಾರಿಗೊಳಿಸಿ ಭಾರತ ದೇಶದ ಅರ್ಥ ವ್ಯವಸ್ಥೆಯಲ್ಲಿ ಹೊಸ ದಿಕ್ಕನ್ನೇ ಸೃಷ್ಟಿಸಿದರು, 1998 ರಿಂದ 2004 ರವರೆಗೆ ವಿಪಕ್ಷ ನಾಯಕರಾಗಿ ಕಾರ್ಯ ಯಶಸ್ವಿಯಾಗಿ ಕಾರ್ಯನಿರ್ವಹಿಸಿ, ಆರ್ ಬಿ ಐ ಗೌರ್ನರ್ ಆಗಿ ಕೂಡ ಸೇವೆ ಸಲ್ಲಿಸಿದರು,

ಮನಮೋಹನ್ ಸಿಂಗ್ ರವರಿಗೆ ಅರ್ಥಶಾಸ್ತ್ರದಲ್ಲಿದ್ದಂತ ಜ್ಞಾನ ಸಮುದ್ರಕ್ಕಿಂತ ದೊಡ್ಡದಾಗಿತ್ತು ಭಾರೋಕ್ ಓಬಾಮ ಕೂಡ ಸಂದರ್ಶನ ಒಂದರಲ್ಲಿ ಅಮೆರಿಕಕ್ಕೆ ಸಮಸ್ಯೆಯಾದಾಗ, ನನಗೆ ಅನುಮಾನಗಳು ಬಂದಾಗ,ನಾನು ಮನಮೋಹನ್ ಸಿಂಗ್ ರವರ ಸಲಹೆಯನ್ನು ಪಡೆಯುತ್ತಿದ್ದೆ ಎಂದು ಸಂದರ್ಶನ ಒಂದರಲ್ಲಿ ಹೇಳಿರುವುದು ಸಿಂಗ್ ರವರ ಹೆಗ್ಗಳಿಕೆ, ಮನಮೋಹನ್ ಸಿಂಗ್ ರವರ ವಿದ್ಯಾಭ್ಯಾಸ ಅಗಾಧವಾದದ್ದು , ಪಂಜಾಬ್ ವಿಶ್ವವಿದ್ಯಾನಿಲಯದಲ್ಲಿ ಅಗ್ರಸ್ಥಾನದಲ್ಲಿ,

ಕೇಂದ್ರೀಯ ವಿಶ್ವವಿದ್ಯಾನಿಲಯದಲ್ಲಿ  ಉನ್ನತ ವ್ಯಾಸಂಗ, ಆಕ್ಸ್ಫರ್ಡ್ ನಲ್ಲಿ ಡಾಕ್ಟರೇಟ್ ಪದವಿ ಕೂಡ ಇವರ ಮುಡುಗೇರಿತು, ಹಣಕಾಸು ವ್ಯವಸ್ಥೆಯಲ್ಲಿ ಖಾಸಗಿಕರಣ, ಉದಾರಿಕರಣ, ಮತ್ತು ಜಾಗತೀಕರಣ, ಈ ಮೂರೂ ಕ್ಷೇತ್ರವನ್ನು ಮುನ್ನಡೆಸುವಲ್ಲಿ ಮನಮೋಹನ್ ಸಿಂಗ್ ರವರ ಪಾತ್ರ ಕೇಂದ್ರದಲ್ಲಿ ಪ್ರಮುಖವಾಗಿತ್ತು, ದೂರ ದೃಷ್ಟಿಯುಳ್ಳ ನಾಯಕದೇಶದ ಯಾವುದೇ ವ್ಯಕ್ತಿಯು ಹಸಿವಿನಿಂದ ಸಾಯಬಾರದು ಎಂದು ಆಹಾರ ಭದ್ರತೆ ಕಾಯ್ದ, rti, rte, ಚಂದ್ರಯಾನ ದಂಥಾ ಕಾಯ್ದೆಗಳನ್ನು ತಂದರು.

ಇವರನ್ನು ಟೀಕಿಸುವವರಿಗೆ ಅಂದೆ ಉತ್ತರ ಕೊಡುತ್ತಾ ದೇಶಕ್ಕೆ ಏನು ಬೇಕು ಬಡವರಿಗೆ ಏನು ಬೇಕು ಎಂಬ ಚಿಂತನೆಯನ್ನು ಇಟ್ಟುಕೊಂಡು ಈ ದೇಶವನ್ನು ಕಟ್ಟಿದ್ದೇನೆ ಇದನ್ನು ನೀವು ಮರೆತರು ಈ ದೇಶದ ಇತಿಹಾಸ ಎಂದು ನೆನಪಿನಲ್ಲಿಟ್ಟುಕೊಳ್ಳುತ್ತದೆ ಎಂಬ ಮಾತನ್ನು ಒಂದೇ ಹೇಳಿದಂತಹ ಮಹಾನ್ ಮೌನಿ ನಾಯಕ ಸಿಂಗ್ ರವರು, ವಿರೋಧ ಪಕ್ಷಗಳ ಆಕ್ಸಿಡೆಂಟ್ ಪ್ರೈ ಮಿನಿಸ್ಟರ್ ಎಂಬ ಕುಟುಕು ವ್ಯಂಗ್ಯಕ್ಕೆ ಸಿಂಗ್ ಇಸ್ ಎ ಕಿಂಗ್ ಎಂಬುದನ್ನು ತೋರಿಸಿಕೊಟ್ಟರು.

ಇಡೀ ವಿಶ್ವವೇ ಆಪನ್ ಆಪತ್ತಿನಲ್ಲಿ ದಂತ ಕಾಲದಲ್ಲಿ ವಿಶ್ವದ ದೊಡ್ಡ ದೊಡ್ಡ ದೇಶಗಳು ಕೂಡ ಕೆಲಸವಿಲ್ಲದೆ ಸಂಬಳ ಇಲ್ಲದೆ ಜನರು ಅಹಹಾಕಾರದಿಂದಿರುವಾಗ, ಭಾರತ ಖಂಡ ಯಾವುದೇ ಅಪಾಯಗಳಿಲ್ಲದೆ ಆರ್ಥಿಕ ವ್ಯವಸ್ಥೆಯನ್ನು ಸುಮಾರು ವರ್ಷಗಳ ಕಾಲ ಶೇಕಡ ಎಂಟು ಜಿಡಿಪಿ ಕಾಯ್ದುಕೊಂಡಂತಹ ಮಹಾನ್ ವಿಶ್ವ ನಾಯಕ ಮನಮೋಹನ್ ಸಿಂಗ್ ರವರು, ಭಾರತ ದೇಶದಲ್ಲಿ ಕೃಷಿಕರೇ ದೇವರು ಮತ್ತು ರೈತರೇ ದೇಶದ ಬೆನ್ನೆಲುಬು ಎಂಬಂತಹ ನಾಡುನುಡಿಗೆ ಅನುಗುಣವಾಗಿ ದೇಶದ ರೈತರ ಸುಮಾರು 71,000 ಕೋಟಿ ಸಾಲ ಮನ್ನ ಮಾಡಿರುವುದು ಕೃಷಿಕರ ಮೇಲಿದ್ದಂತಹ ಗೌರವವೇ ಸರಿ, ರೈತರಿಲ್ಲದಿದ್ದರೆ ದೇಶ ಇಲ್ಲ ಇನ್ನು ಅಂಶವನ್ನು ಮನಗೊಂಡಂತಹ ಮನಮೋಹನ್ ಸಿಂಗ್ ರವರು ಇಂತಹ ದಿಟ್ಟ ನಿಲುವನ್ನು ತೆಗೆದುಕೊಂಡಿದ್ದು ಕೂಡ ಇತಿಹಾಸವೇ ಸರಿ,

ಇಂತಹ ಮಹಾನ್ ಮೌನಿಜ್ಞಾನಿ ದೇಶವನ್ನು ಅಗಲಿರುವುದು ಕೃಷಿಕರಿಗೆ ರೈತರಿಗೆ ಇನ್ನಿಲ್ಲದ ದುಃಖವನ್ನುಂಟು ಮಾಡಿದೆ, ಇಂತಹ ಸಂದರ್ಭದಲ್ಲಿ ಸಿಂಗ್ ರವರು ರೈತರ ಸಾಲ ಮನ್ನಾ ಮಾಡಿರುವ ರೀತಿಯಲ್ಲಿ ಈಗಿನ ಪ್ರಧಾನಿಗಳು ಕೂಡ ರೈತರ ಸಾಲ ಮನ್ನಾ ಮಾಡಬೇಕೆಂದು ಅಖಂಡ ಕರ್ನಾಟಕ ರೈತ ಸಂಘ ಮತ್ತು ಕಿಸಾನ್ ಘಟಕ ಆಗ್ರಹಿಸುತ್ತದೆ, ಈ ಸಂದರ್ಭದಲ್ಲಿ ಮಾತನಾಡಿದಂತಹ ರಾಜು ಕೂಡ ಅರ್ಥ ವ್ಯವಸ್ಥೆಯ ಧೀಮಂತ ನಾಯಕ ಮನ್ಮೋಹನ್ ಸಿಂಗ್ ರವರು ಎಂದು ತಿಳಿಸಿದರು,

ಗ್ರಾಮ ಪಂಚಾಯತಿ ಮಾದೇಶ್ ಮಾಜಿ ಸದಸ್ಯರಾದ ವಿಜಯಕುಮಾರ್ ಅವರು ಕೂಡ ಮಾತನಾಡಿ ವೇದಾವತಿ ನದಿಯು ಜೀವನದಿಯಾಗಿ ಅರಿಯಲಿ ಎಂದು ಪ್ರಾರ್ಥಿಸಿದರು, ತಾಲೂಕು ಗೌರವಾಧ್ಯಕ್ಷ ಕೃಷ್ಣಮೂರ್ತಿ ಸ್ವಾಮಿ ಮಾತನಾಡಿ ಮನಮೋಹನ್ ಸಿಂಗ್ ರವರು ಯಾವಾಗಲೂ ಕೂಡ ರೈತರ ಹಿತ ಕಾಪಾಡುತ್ತಿದ್ದರು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಾಲೂಕು ಪ್ರಧಾನ ಕಾರ್ಯದರ್ಶಿ ಮಹಾಂತೇಶ್
, ತಾಲೂಕು ಉಪಾಧ್ಯಕ್ಷ ಶಿವಣ್ಣ, ಹೋಬಳಿ ಉಪಾಧ್ಯಕ್ಷ ರುದ್ರಣ್ಣ, ಹೋಬಳಿ ಕಾರ್ಯದರ್ಶಿ ಕೃಷ್ಣಪ್ಪ, ವೀರಭದ್ರಪ್ಪ, ನಾಗರಾಜ್, ಕಾಂತರಾಜ್, ಸೇರಿದಂತೆ ಮತ್ತಿತರರು ಇದ್ದರು.

 

- Advertisement -  - Advertisement - 
Share This Article
error: Content is protected !!
";