ಪತ್ತಿನ ಸಹಕಾರ ಸಂಘಕ್ಕೆ ಅವಿರೋಧವಾಗಿ ಆಯ್ಕೆಯಾದ ಸಚಿವ ಡಿ.ಸುಧಾಕರ

News Desk

ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ನಗರಂಗೆರೆ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘ ನಿಯಮಿತದ ಐದು ವರ್ಷಗಳ ಅವಧಿಗೆ ಭಾನುವಾರ ಚುನಾವಣೆ ನಡೆದಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ ಪ್ರತಿನಿಧಿಸುವ ಸಹಕಾರ ಸಂಘವಾಗಿದೆ.

ಚುನಾವಣೆ ಭಾರಿ ಬಿರುಸಿನಿಂದ ಕೂಡಿದ್ದು, ಈ ಭಾರಿ ಸಾಲಗಾರರು, ಸಾಲಗಾರರಲ್ಲದ ಕ್ಷೇತ್ರದಿಂದ ಕೆಲವೊಂದು ಹೊಸ ಮುಖಗಳಿಗೆ ಅವಕಾಶ ಮಾಡಿಕೊಡಲಾಗಿದೆ.

ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ಕೆ.ಎಸ್.ಶ್ರೀಧರ ಈ ಬಗ್ಗೆ ಮಾಹಿತಿ ನೀಡಿ, ಸಂಘದ ಎಸ್ಟಿ ಮೀಸಲು ಸ್ಥಾನದಿಂದ ಕೆ.ಆರ್.ಸುರೇಶ್-೨೩೯ ಮತಗಳನ್ನು ಗಳಿಸಿ ಆಯ್ಕೆಯಾಗಿದ್ದು, ಎದುರಾಳಿ ಹಿರಿಯ ಸಹಕಾರಿ ಧುರೀಣ ಸಿ.ಓಬಯ್ಯ-೧೫೪ ಮತಪಡೆದು ಪರಾಭವಗೊಂಡಿದ್ಧಾರೆ.

ಬಿಸಿಎಂ ಎ ಕ್ಷೇತ್ರದಲ್ಲಿ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಗದ್ದಿಗೆ ಬಿ.ತಿಪ್ಫೇಸ್ವಾಮಿ, ಬಿಸಿಎಂ ಬಿ ಕ್ಷೇತ್ರದಿಂದ ಎಂ.ಕುಮಾರಸ್ವಾಮಿ, ಮಹಿಳಾ ಕ್ಷೇತ್ರದಿಂದ ಬೋರಮ್ಮ, ಕಮಲಮ್ಮ, ಸಾಲಗಾರರಲ್ಲದ ಕ್ಷೇತ್ರದಿಂದ ಎಸ್.ರಾಮಚಂದ್ರನಾಯಕ ಚುನಾಯಿತರಾಗಿದ್ಧಾರೆ.

ಚುನಾವಣೆ ಘೋಷಣೆಯಾದ ನಂತರ ನಾಮಪತ್ರ ವಾಪಾಸ್ ಪಡೆಯುವ ಸಂದರ್ಭದಲ್ಲಿ ಪರಸ್ವರ ಚರ್ಚೆ ನಡೆದು ಒಟ್ಟು ೫ ನಿರ್ದೇಶಕರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ, ಬಿ.ಸಿ.ಸಂಜೀವಮೂರ್ತಿ, ಶಾಂತಣ್ಣ, ರಾಜಣ್ಣ, ತಿಪ್ಫೇರುದ್ರಪ್ಪ ಆಯ್ಕೆಯಾದವರು.  

- Advertisement -  - Advertisement - 
Share This Article
error: Content is protected !!
";