ಚಿತ್ರದುರ್ಗದ ಚರಿತ್ರೆ ಸಾರಿದ ರಾಮಾಚಾರಿ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಡಾ. ವಿಷ್ಣುವರ್ಧನ್ ಕನ್ನಡ ಚಿತ್ರರಂಗದ ಜನಪ್ರಿಯ ನಾಯಕನಟರು ಡಿಸೆಂಬರ್
30ರ ಈ ದಿನ ಅವರ ಪುಣ್ಯಸ್ಮರಣೆ ಇಂದು ಅವರ ವಿಚಾರಗಳ ನೆನೆದು ನಮಿಸೋಣ.

1972ರ ಸಮಯದಲ್ಲಿ ವಿಷ್ಣುವರ್ಧನ್ ನಾಮಾಂಕಿತದಲ್ಲೀ ನಾಗರಹಾವು ಸಿನಿಮಾದಲ್ಲಿ ರಾಮಾಚಾರಿ ಪಾತ್ರದಲ್ಲಿ ಚಿತ್ರದುರ್ಗದ ಚರಿತ್ರೆಯನ್ನು ಸಾರಿದ್ದರು. ಕಾಲಗಳು ಉರುಳಿದಂತೆ ಸಾಹಸಸಿಂಹ ವಿಷ್ಣುವರ್ಧನ್ ಎಂಬ ಹೆಗ್ಗಳಿಕೆಗೆ   ಭಾಜನರಾದ್ದರು.

ಸಿನಿಮಾ ಕಥೆ ಸಾಮಾಜಿಕವಾಗಿರಲಿ. ಪೌರಾಣಿಕವಾಗಿರಲಿ. ಕಮರ್ಷಿಯಲ್ ಇರಲಿ ಹಾಗೂ ಕಲಾತ್ಮಕವಾಗಿರಲ್ಲಿ ಅದಕ್ಕೊಪ್ಪುವ ರೀತಿಯಲ್ಲಿ ಭಾವನಾತ್ಮಕವಾಗಿ ನಟಿಸುತ್ತಿದ್ದರು.

ವಿಷ್ಣುವರ್ಧನ್ ಅವರ ನಟನೆಯ ಸಿನಿಮಾಗಳನ್ನು ಯುವಕ ಯುವತಿಯರು ಮತ್ತು ಮಹಿಳೆಯರು ಹೆಚ್ಚಿನದಾಗಿ ಇಷ್ಟಪಡುತ್ತಿದ್ದರು. ನಟನೆ, ನೃತ್ಯ ಹಾಗೂ ಸಾಹಸ ದೃಶ್ಯಗಳಲ್ಲಿ  ಜನರನ್ನು ರಂಜಿಸುತ್ತಿದ್ದ ವಿಷ್ಣುವರ್ಧನ್ ಅವರು  ಸಂಭಾಷಣೆಯನ್ನು ಶುದ್ಧವಾಗಿ ಉಚ್ಚರಿಸುತ್ತಿದ್ದರು. ಕೆಲವು ಚಿತ್ರಗಳಲ್ಲಿ ಹಾಡುಗಳನ್ನು ಹಾಡಿದ್ದಾರೆ.

 ವಿಷ್ಣುವರ್ಧನ್ ಅವರು 200 ಚಿತ್ರಗಳಲ್ಲಿ ಅಭಿನಯಿಸಿದ ಪ್ರತಿಭಾವಂತ ನಟ. ಅವರು ಅಭಿನಯಿಸಿದ ಕೆಲವು ಚಿತ್ರಗಳು ಇತಿಹಾಸ ನಿರ್ಮಿಸಿದ್ದಾವೆ. ವಿಷ್ಣುವರ್ಧನ್ ಅವರು ಅಭಿನಯಿಸಿದ ಹಲವು ಚಿತ್ರಗಳು ಸಾಮಾಜಿಕ ಪರಿವರ್ತನೆಗೆ ಮುನ್ನುಡಿಯಾಗಿದವು.  ವಿಷ್ಣುವರ್ಧನ್ ಅವರ ವಿಶ್ವಾಸದ ನಡುವಳಿಕೆ ಯುವಕರಿಗೆ ಮಾರ್ಗದರ್ಶನ.
ಲೇಖನ-ರಘು ಗೌಡ
9916101265

 

- Advertisement -  - Advertisement - 
Share This Article
error: Content is protected !!
";