ಆಂದೋಲನ ಹಾಗೂ ಸತ್ಯಶೋಧನಾ ತಂಡ ರಚಿಸಿದ ಬಿಜೆಪಿ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬಾಣಂತಿಯರ ಸಾವುಗಳ ಸತ್ಯಶೋಧನೆ
, ಅಧಿಕಾರಿಗಳು, ಗುತ್ತಿಗೆದಾರರು ಹಾಗೂ ಇತರರ ಆತ್ಮಹತ್ಯೆಗೆ ಸಂಬಂಧಿಸಿದಂತೆ ಬಿಜೆಪಿ ಆಂದೋಲನ ನಡೆಸಲು ಸಜ್ಜಾಗಿದೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಮಾರ್ಗದರ್ಶನದಲ್ಲಿ ಪ್ರಮುಖ ಮುಖಂಡರನ್ನು ಒಳಗೊಂಡ ಆಂದೋಲನ ಸಮಿತಿ ಹಾಗೂ ಸತ್ಯಶೋಧನಾ ತಂಡ ರಚಿಸಿ ಜವಾಬ್ದಾರಿ ನಿಗದಿಪಡಿಸಲಾಗಿದೆ.

ಸರ್ಕಾರಿ ಅಧಿಕಾರಿ, ಸಿಬ್ಬಂದಿ ಮತ್ತು ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಂಡ ಸ್ಥಳಗಳಿಗೆ ಭೇಟಿ ನೀಡಿ ಆತ್ಮಹತ್ಯೆಗೆ ಕಾರಣ, ಪೂರ್ವಾಪರ ಮಾಹಿತಿ ಸಂಗ್ರಹ,  ಪ್ರಕರಣ ಬೆಳಕಿಗೆ ಬಂದ ನಂತರ ಉಸ್ತುವಾರಿ ಸಚಿವರ ಸ್ಪಂದನೆ, ಸರ್ಕಾರ ಕೈಗೊಂಡ ಕ್ರಮ, ತನಿಖೆಯ ಪ್ರಗತಿ ಮತ್ತಿತರ ವಿವರಗಳನ್ನು ಆಂದೋಲನ ಸಮಿತಿ ಸಂಗ್ರಹಿಸಿ ವರದಿ ನೀಡಲಿದೆ.

ಆಂದೋಲನ ಸಮಿತಿಗೆ 18 ಮಂದಿ ಪ್ರಮುಖರು:
ವಿಧಾನ ಪರಿಷತ್‌ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಸೇರಿದಂತೆ 18 ಮಂದಿ ಪ್ರಮುಖರ ಆಂದೋಲನ ಸಮಿತಿ ರಚನೆ ಮಾಡಿದ್ದು ಈ ಸಮಿತಿಯಲ್ಲಿ ಆರಗ ಜ್ಞಾನೇಂದ್ರ
, ಎನ್.ಮಹೇಶ್, ಅಶ್ವತ್ಥನಾರಾಯಣ, ಬಸವರಾಜ ಮತ್ತಿಮಡ್, ಎನ್.ರವಿಕುಮಾರ್, ಕೆ.ಎಸ್.ನವೀನ್, ರಾಜುಗೌಡ, ಭಾರತಿಶೆಟ್ಟಿ, ಹೇಮಲತಾ ನಾಯಕ್, ಲಲಿತಾ ಅನಪೂರ್‌, ರಾಜಕುಮಾರ್ ಪಾಟೀಲ ತೇಲ್ಯೂರ್, ಚಂದು ಪಾಟೀಲ್, ಭಾಸ್ಕರ್‌ರಾವ್, ವೆಂಕಟೇಶ ದೊಡ್ಡರಿ, ವಸಂತಕುಮಾರ್, ಕರುಣಾಕರ್ ಖಾಸಲೆ. ಸಂಯೋಜಕ: ಜಗದೀಶ ಹಿರೇಮನಿ ಇವರುಗಳು ಸಂಗ್ರಹಿಸಿದ ಮಾಹಿತಿಯನ್ನೇ ಜನರ ಮುಂದಿಡಲಿದೆ.

ಜಿಲ್ಲಾ ಉಸ್ತುವಾರಿ ಸಚಿವರುಗಳಿಗೆ ಬಿಸಿ ಮುಟ್ಟಿಸಿ ಸರ್ಕಾರದ ಬಣ್ಣ ಬಯಲು ಮಾಡಲಾಗುತ್ತದೆ. ಸರ್ಕಾರದ ವಿರುದ್ಧ ತಳಮಟ್ಟದಲ್ಲಿ ಜನಾಭಿಪ್ರಾಯ ರೂಪುಗೊಳ್ಳುತ್ತದೆ. ಈ ಮೂಲಕ ಪಕ್ಷದ ಪರ ಸಕಾರಾತ್ಮಕ ವಾತಾವರಣ ವೃದ್ಧಿಸುವುದಲ್ಲದೆ ಆಡಳಿತ ರೂಢ ಸರ್ಕಾರವನ್ನು ಕೈಕಟ್ಟಿ ಹಾಕುವುದು ಬಿಜೆಪಿಯ ಕಾರ್ಯತಂತ್ರವಾಗಿದೆ.

ಬಾಣಂತಿಯರು ಹಾಗೂ ನವಜಾತ ಶಿಶುಗಳ ಸಾವುಗಳ ಸಮಗ್ರ ಮಾಹಿತಿ ಸಂಗ್ರಹಕ್ಕಾಗಿ ಸತ್ಯಶೋಧನಾ ಸಮಿತಿಗೆ ತಜ್ಞರು ಸೇರಿದಂತೆ 15 ಸದಸ್ಯರ ತಂಡ ರಚಿಸಲಾಗಿದೆ. ಈ ಸಮಿತಿಯಲ್ಲಿ ಡಾ.ಶೈಲೇಂದ್ರ ಬೆಲ್ದಾಳೆ, ಡಾ.ಅವಿನಾಶ್, ಡಾ.ಬಸವರಾಜ ಕೇಲಗಾರ್, ಡಾ.ಲಕ್ಷ್ಮಿ ಅಶ್ವಿನ್‌ಗೌಡ, ಡಾ. ನಾರಾಯಣ್, ಡಾ.ಅರುಣಾ, ವಿಜಯಲಕ್ಷ್ಮೀ ಕರೂರು, ಡಾ.ಪದ್ಮಪ್ರಕಾಶ್, ಡಾ.ವಿಜಯಲಕ್ಷ್ಮೀ ಬಾ.ತುಂಗಳ, ಡಾ. ಸುಧಾ ಹಲ್ಕಾಯಿ, ರತನ್ ರಮೇಶ್

ಪೂಜಾರಿ, ಪ್ರದೀಪ್‌ಕಡಾಡಿ. ಸಂಯೋಜಕರು: ಸಿ.ಮಂಜುಳಾ, ಕೆ.ಎಂ.ಅಶೋಕ್‌ಗೌಡ ಇದ್ದು ಈ ತಂಡವು ರಾಜ್ಯ ಸುತ್ತಿ ಸಾವಿನ ಪ್ರಕರಣಗಳ ವಸ್ತುಸ್ಥಿತಿ ಅಧ್ಯಯನ ನಡೆಸಿ ವರದಿ ನೀಡಲಿದೆ. ವಾಸ್ತವಾಂಶಗಳ ಮೇಲೆ ಬೆಳಕು ಚೆಲ್ಲಿ ಸರ್ಕಾರದ ಕಣ್ಣು ತೆರೆಸುವ ಕಾರ್ಯವನ್ನು ಬಿಜೆಪಿ ಮಾಡಲು ಮುಂದಾಗಿದೆ. ವರ್ಗಾವಣೆ ದಂಧೆ, ಮಿತಿಮೀರಿದ ಭ್ರಷ್ಟಾಚಾರ ಆರೋಪ, ಆರ್ಥಿಕ ಸಂಕಷ್ಟದ ಒತ್ತಡದಿಂದ ಆಡಳಿತ ವ್ಯವಸ್ಥೆ ಕುಸಿತ, ಅಭಿವೃದ್ಧಿ ಸ್ಥಗಿತವಾಗಿದೆ ಎಂದು ಸಾಕ್ಷಿ, ಪುರಾವೆ, ದಾಖಲೆಗಳ ಸಹಿತ ಸರ್ಕಾರಕ್ಕೆ ಬಿಸಿ ಮುಚ್ಚಿಸಲು ಬಿಜೆಪಿ ಸಜ್ಜಾಗಿದೆ.

ಹೊಸ ವರ್ಷದಲ್ಲಿ ಪ್ರವಾಸ:
ರಚನೆ ಆಗಿರುವ ಎರಡು ಪ್ರತ್ಯೇಕ ತಂಡಗಳು ಮುಂದಿನ ಒಂದೆರಡು ದಿನಗಳಲ್ಲಿ ಸಭೆ ಸೇರಿ
, ಪ್ರವಾಸದ ರೂಪುರೇಷೆ ಅಂತಿಮಗೊಳಿಸಲಿವೆ. ಪ್ರವಾಸದ ವೇಳೆ ನಿಗದಿಯಾಗಿರುವ ಜಿಲ್ಲೆ, ಸ್ಥಳಗಳ ಆಧಾರದಲ್ಲಿ ಪ್ರವಾಸ ಮಾಡಿ ಅಧ್ಯಯನ ನಡೆಸಲಾಗುತ್ತದೆ.

 

- Advertisement -  - Advertisement - 
Share This Article
error: Content is protected !!
";