ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಳೆದ ಕೆಲ ದಿನಗಳಿಂದ ನಡೆಯುತ್ತಿರುವ ಡಿನ್ನರ್ ಮೀಟಿಂಗ್ಗಳಿಗೆ ಸಿದ್ದರಾಮಯ್ಯ ಅವರೇ ರೂವಾರಿ, ಅವರ ಅಣತಿ ಮೇರೆಗೆ ಮೀಟಿಂಗ್ಗಳು ನಡೆಯುತ್ತಿವೆ ಎಂದು ಮಾಜಿ ಸಚಿವ ಹೆಚ್ ವಿಶ್ವನಾಥ್ ಅವರು ಗಂಭೀರ ಆರೋಪ ಮಾಡಿದರು.
ಡಿಕೆ ಶಿವಕುಮಾರ್ ಜೊತೆ ಎಐಸಿಸಿ ಕಮಿಟ್ಮೆಂಟ್ ಮಾಡಿಕೊಂಡಿದೆ. 30 ತಿಂಗಳು ನಂತರ ಅವರು ಸಿಎಂ ಆಗಲೇಬೇಕು. ಕಾಂಗ್ರೆಸ್ 135 ಸೀಟು ಗೆಲ್ಲಬೇಕಾದರೆ ಡಿಕೆ ಶಿವಕುಮಾರ್ ಕೊಡುಗೆ ದೊಡ್ಡದಿದೆ.
ಡಿಕೆ ಶಿವಕುಮಾರ್ ಅವರಿಂದಾಗೇ ಒಕ್ಕಲಿಗರ ವೋಟು ಕಾಂಗ್ರೆಸ್ ಪಕ್ಷಕ್ಕೆ ಸಿಕ್ಕವು ಎಂದು ಮಾಜಿ ಸಚಿವ ವಿಶ್ವನಾಥ್ ಅಭಿಪ್ರಾಯಪಟ್ಟರು.