ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕ ನೂರೆಂಟು ಸಮಸ್ಯೆಗಳಿಗೆ ಸಿಲುಕಿ ನಲುಗುತ್ತಿದ್ದರೂ ಭ್ರಷ್ಟ ಕರ್ನಾಟಕ ಕಾಂಗ್ರೆಸ್ ಸರ್ಕಾರಕ್ಕೆ ಕಿಂಚಿತ್ತು ಕಾಳಜಿ ಇಲ್ಲ ಜವಾಬ್ದಾರಿಯೂ ಇಲ್ಲ ಎಂದು ಬಿಜೆಪಿ ಆರೋಪಿಸಿದೆ.
ಸದ್ಯದಲ್ಲೇ ಭ್ರಷ್ಟ ಸಿಎಂ ಸಿದ್ದರಾಮಯ್ಯ ಅವರು ಕುರ್ಚಿ ಬಿಟ್ಟು ಇಳಿಯಲಿದ್ದಾರೆ. ಹೀಗಾಗಿ ಖಾಲಿಯಾಗುವ ಕುರ್ಚಿಗೆ ಟವೆಲ್‌ಹಾಕಲು ಕಾಂಗ್ರೆಸ್ಸಿಗರು ಕ್ಯೂನಲ್ಲಿ ನಿಂತಿದ್ದಾರೆ.
ನಾನೇ ಮುಂದಿನ ಸಿಎಂ ಎಂದು ಮೆರೆಯುತ್ತಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಬೆನ್ನ ಹಿಂದೆ ಹಲವು ಡ್ರಾಮಾಗಳು ನಡೆಯುತ್ತೀವೆ ಎಂದು ಬಿಜೆಪಿ ಆರೋಪಿ ಮಾಡಿದೆ.
ಕುರ್ಚಿಗಾಗಿ ಕಿತ್ತಾಡುತ್ತಾ ರಾಜ್ಯವನ್ನು ದಿವಾಳಿ ಮಾಡುವ ಇಂಥ ದಾರಿದ್ರ್ಯ ಸರ್ಕಾರವನ್ನು ಆಯ್ಕೆ ಮಾಡಿದ ಕನ್ನಡಿಗರೇ ಪರಿತಪಿಸುವಂತಾಗಿದೆ ಎಂದು ಬಿಜೆಪಿ ಹರಿಹಾಯ್ದಿದೆ.