ವಾರ್ಷಿಕ ವಂತಿಗೆ ಶಿಕ್ಷಕರ ಹಣ ಕಟಾವಣೆ ಬೇಡ

News Desk

ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ವಾರ್ಷಿಕ ವಂತಿಗೆ ಹಣವನ್ನು ಕಟಾವಣೆ ಮಾಡಬಾರದೆಂದು ಶಿಕ್ಷಕರು ತಿಳಿಸಿದ್ದಾರೆ.

ಕಳೆದ 15-30 ವರ್ಷಗಳಿಂದ ಇಲಾಖೆಯಲ್ಲಿ ಪಿಎಸ್ ಟಿ ಒಂದರಿಂದ ಏಳನೇ ತರಗತಿಗೆ ನೇಮಕ ಹೊಂದಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದು 2016ರ ನಂತರ ಸಿ ಅಂಡ್ ಆರ್ ಕಾಯ್ದೆ ತಿದ್ದುಪಡೆಯಿಂದ ಸಾವಿರಾರು ಶಿಕ್ಷಕರಿಗೆ ಮಾರಕವಾಗಿದ್ದು ಇದರಿಂದ ಬಡ್ತಿ ವರ್ಗಾವಣೆಯ ಸಮಯದಲ್ಲಿ ತ್ರೀವ ಹಿನ್ನಡೆ ಉಂಟು ಮಾಡಿರುತ್ತದೆ ಎಂದು ಶಿಕ್ಷಕರು ಆತಂಕ ವ್ಯಕ್ತಪಡಿಸಿದ್ದಾರೆ.

ಈಗಾಗಲೇ ಹಲವಾರು ಶಿಕ್ಷಕರು ಬಡ್ತಿ ವರ್ಗಾವಣೆಯಿಂದ ವಂಚಿತರಾಗಿ ನಿವೃತ್ತಿ ಹೊಂದಿರುತ್ತಾರೆ. ಈ ಸಮಸ್ಯೆ ಬಗೆಹರಿಸಿ ನೆಮ್ಮದಿಯಿಂದ ಕರ್ತವ್ಯ ನಿರ್ವಹಿಸಲು ಅನುಕೂಲ ಮಾಡಿಕೊಡಲು ಕಳೆದ 8 ವರ್ಷಗಳಿಂದಲೂ ಸರ್ಕಾರಿ ನೌಕರರ ಸಂಘಕ್ಕೆ ಬೇಡಿಕೊಂಡರು ಸಮಸ್ಯೆ ಹಾಗೆ ಉಳಿದಿದ್ದು ಶಿಕ್ಷಕರಿಗೆ ಅನುಕೂಲ ಮಾಡಿಕೊಡುವಲ್ಲಿ ಸರ್ಕಾರಿ ನೌಕರರ ಸಂಘ ವಿಫಲವಾಗಿದೆ ಎಂದು ಶಿಕ್ಷಕರು ದೂರಿದ್ದಾರೆ.

ಈ ಹಿನ್ನೆಲೆಯಲ್ಲಿ ಶಿಕ್ಷಕರ ವೈಯಕ್ತಿಕ ಇಚ್ಛೆಯಂತೆ 2024-25 ನೇ ಸಾಲಿನಲ್ಲಿ ವಂತಿಗೆ ಹಣವನ್ನು ವೇತನದಲ್ಲಿ ಕಟಾಯಿಸಬಾರದೆಂದು ಶಿಕ್ಷಕರು ಮನವಿ ಮಾಡಿದ್ದಾರೆ.
ಮುಂದಿನ ದಿನಗಳಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವಂತಿಗೆಯನ್ನು ಕಟಾವಣೆ ಮಾಡದಂತೆ ಬಿಇ ಓ ಅವರಿಗೆ ಮನವಿ ನೀಡಲಿದ್ದೇವೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಶಿಕ್ಷಕರು ತಿಳಿಸಿದ್ದಾರೆ.

ನೊಂದ ಶಿಕ್ಷಕರಾದ ಕರಿಯಪ್ಪ, ಮೋಹನ್, ಏಳು ಕೋಟಿ, ತಿಮ್ಮಯ್ಯ, ಸವಿತಾ, ಭೂತೇಶ್, ಜಗದೀಶ್ ಯಾದವ್, ರಾಜಶೇಖರ್, ಶಂಕರ್, ಆರ್ ಟಿ ಪರಮೇಶ್ವರಪ್ಪ, ಶ್ರೀನಿವಾಸ್, ಶಿವಮೂರ್ತಿ, ಮುಕ್ಕಣ್ಣ, ಮಹಾಂತೇಶ್, ಶಿವಶಂಕರ್, ಮಧುಸೂದನ್, ತಿಪ್ಪೇಸ್ವಾಮಿ ತಿಳಿಸಿದ್ದಾರೆ.

 

- Advertisement -  - Advertisement - 
Share This Article
error: Content is protected !!
";