ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ದೊಡ್ಡಬಳ್ಳಾಪುರ ತಾಲ್ಲೂಕು,ತೂಬಗೆರೆ ಹೋಬಳಿ ಹಾಡೋನಹಳ್ಳಿ ಗ್ರಾಮದ ಮಂಜುನಾಥ ಎಂಬುವವರಿಗೆ ಮೂತ್ರಕೋಶದ ಶಸ್ತ್ರಚಿಕಿತ್ಸೆಗೊಳಗಾದ KSRTC ಚಾಲಕ ವೈದ್ಯರ ಸಲಹೆಯಂತೆ 3 ತಿಂಗಳು ವಿಶ್ರಾಂತಿ ತೆಗೆದುಕೊಂಡರು, ಅನಾರೋಗ್ಯದ ರಜೆಯನ್ನು ನೀಡದ ಅಧಿಕಾರಿಗಳು ಆತನ 4 ತಿಂಗಳ ಸಂಬಳವನ್ನ ತಡೆ ಹಿಡಿದಿದ್ದಾರೆ, ಚಾಲಕ ತನ್ನ 4 ತಿಂಗಳ ಸಂಬಳಕ್ಕಾಗಿ ತಬರನಂತೆ ಕಛೇರಿಯಿಂದ ಕಛೇರಿಗೆ ಅಲೆಯುತ್ತಿದ್ದಾನೆ, 4 ತಿಂಗಳ ಸಂಬಳ ವಿಲ್ಲದೆ ಆತನ ಕುಟುಂಬ ಕಣ್ಣೀರು ಹಾಕಿದೆ.
ದೊಡ್ಡಬಳ್ಳಾಪುರ ಕೆ ಎಸ್ ಆರ್ ಟಿಸಿ ಡಿಪೋನಲ್ಲಿ ಚಾಲಕ ನಾಗಿ ಕರ್ತವ್ಯ ನಿರ್ವಹಿಸುತ್ತಿರುವ ಹೆಚ್.ಸಿ.ಮಂಜುನಾಥ್, ತಾಲೂಕಿನ ಹಾಡೋನಹಳ್ಳಿಯಲ್ಲಿ ವಾಸವಾಗಿರುವ ಈತ ಕಳೆದ 18 ವರ್ಷಗಳಿಂದ ಚಾಲಕನಾಗಿ ಕೆಲಸ ಮಾಡುತ್ತಿದ್ದಾನೆ, ಮೂತ್ರಕೋಶ ಮತ್ತು ಶಿಶ್ನ ಬೀಜದ ಸಮಸ್ಯೆಯಿಂದ ಬಳಲುತ್ತಿದ್ದ ಈತ, ಕಳೆದ ಜುಲೈ ತಿಂಗಳಲ್ಲಿ ಬೆಂಗಳೂರಿನ ಬೋರಿಂಗ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾದರು. ಶಸ್ತ್ರಚಿಕಿತ್ಸೆಯ ನಂತರ ಮೂರು ತಿಂಗಳ ವಿಶ್ರಾಂತಿ ಕಡ್ಡಾಯವಾಗಿ ತೆಗೆದುಕೊಳ್ಳ ಬೇಕು, ಇಲ್ಲದಿದ್ದರೆ ಜೀವಕ್ಕೆ ತೊಂದರೆ ಎಂದು ವೈದ್ಯರು ಸಲಹೆ ನೀಡಿದರು, ವೈದ್ಯರ ಸಲಹೆಯಂತೆ ಮಂಜುನಾಥ್ ಮನೆಯಲ್ಲಿದ್ದು ವಿಶ್ರಾಂತಿ ಪಡೆದರು.
ಶಸ್ತ್ರ ಚಿಕಿತ್ಸೆಯ ನಂತರ ಸರ್ಕಾರಿ ನೌಕರರಿಗೆ ನಿಯಮ ಪ್ರಕಾರ ಅನಾರೋಗ್ಯ ರಜೆ ಕೊಡ ಬೇಕು, ಕೆಎಸ್ ಆರ್ ಟಿ ಸಿ ಅಧಿಕಾರಿಗಳು ಮಂಜುನಾಥ್ ರವರಿಗೆ ಅನಾರೋಗ್ಯ ರಜೆ ನೀಡದೆ ಗೈರು ಹಾಜರಿ ಹಾಕಿ ಸಂಬಳವನ್ನು ತಡೆ ಹಿಡಿದಿದ್ದಾರೆ, ಕಳೆದ ನಾಲ್ಕು ತಿಂಗಳ ಸಂಬಳ ವಿಲ್ಲದೆ ಮಂಜುನಾಥ್ ಕುಟುಂಬ ಕಣ್ಣೀರು ಹಾಕುತ್ತಿದೆ.
ಮಾಧ್ಯಮದೊಂದಿಗೆ ಮಾತನಾಡಿದ ಮಂಜುನಾಥ್ ಪತ್ನಿ ರೇಖಾ ಮಣಿ, ನಮ್ಮ ಗಂಡನ ಸಂಬಳ ನಂಬಿಕೊಂಡು ಇಬ್ಬರು ಮಕ್ಕಳು ಅನಾರೋಗ್ಯದಿಂದ ಬಳಲುತ್ತಿರುವ ಅತ್ತೆ ಮಾವ ಇದ್ದಾರೆ, ಅಧಿಕಾರಿಗಳು ಮತ್ತು ಅಲ್ಲಿನ ಸಿಬ್ಬಂದಿ ನೀಡುತ್ತಿರುವ ಕಿರುಕುಳಕ್ಕೆ ಬೇಸತ್ತ ನನ್ನ ಗಂಡ ಸಾವಿಗೆ ಶರಣಾಗುವ ಮಾತನಾಡುತ್ತಿದ್ದಾರೆ, ದಯಮಾಡಿ ನಮ್ಮ ಗಂಡನ 4 ತಿಂಗಳ ಕೊಡಿಸುವಂತೆ ಮನವಿ ಮಾಡಿದ್ದಾರೆ.