ಜ.19 ರಂದು ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಚುನಾವಣೆ

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಬಾಶೆಟ್ಟಿಹಳ್ಳಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಮುಂದಿನ 5 ವರ್ಷಗಳ ಅವಧಿಗೆ ನಿರ್ದೇಶಕರ  ಸ್ಥಾನಕ್ಕೆ  ಜನವರಿ 19 ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆಯವರಗೂ ಚುನಾವಣೆ ನಡೆಯುತ್ತದೆ ಎಂದು ರಿಟರ್ನಿಂಗ್ ಅಧಿಕಾರಿ ನಾಗಮಣಿ ತಿಳಿಸಿದ್ದಾರೆ.

 ಇನ್ನು ನಾಮಪತ್ರಗಳನ್ನು ಜನವರಿ 12 ರಿಂದ 13 ರವರಿಗೆ    ಸಂಘದ  ಕಛೇರಿಯಲ್ಲಿ ಸಲ್ಲಿಸಬಹುದು. ಜನವರಿ 14  ರಂದು ಬೆಳಗ್ಗೆ 11 ಗಂಟೆಗೆ  ನಾಮಪತ್ರಗಳ ಪರಿಶೀಲನೆ ನಡೆಯಲಿದೆ.

  ಜನವರಿ 15 ರಂದು ಮಧ್ಯಾಹ್ನ 3 ಗಂಟೆಗೆ ಅಭ್ಯರ್ಥಿಗಳು ನಾಮಪತ್ರ ಹಿಂಪಡೆಯಲು ಅವಕಾಶ ಇರಲಿದೆ, ಅದೇ ದಿನ ಅಭ್ಯರ್ಥಿಗಳನ್ನು ಸೂಚನ ಫಲಕದಲ್ಲಿ ಪ್ರಕಟಿಸಲಾಗುವುದು, ಜನವರಿ 19 ಕ್ಕೆ  ಚುನಾವಣೆ ನಡೆಯುತ್ತದೆ ಎಂದು ರಿಟರ್ನಿಂಗ್ ಅಧಿಕಾರಿ ನಾಗಮಣಿ  ತಿಳಿಸಿದ್ದಾರೆ.

 

 

 

- Advertisement -  - Advertisement - 
Share This Article
error: Content is protected !!
";